ದೆಹಲಿಯ ರಾಜ್‌ ಘಾಟ್, ಕೆಂಪು ಕೋಟೆಯಲ್ಲಿ ಸೆಕ್ಷನ್ 144 ಜಾರಿ!

ದೆಹಲಿಯ ರಾಜ್‌ ಘಾಟ್, ಕೆಂಪು ಕೋಟೆಯಲ್ಲಿ ಸೆಕ್ಷನ್ 144 ಜಾರಿ!

ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಗೆ ಕೇವಲ ಐದು ದಿನಗಳಷ್ಟೇ ಬಾಕಿ ಉಳಿದಿದೆ. ಈಗಾಗಲೇ ದೇಶದಾದ್ಯಂತ ಸ್ವಾತಂತ್ರ್ಯ ದಿನಾಚರಣೆಗೆ ಭರದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮುನ್ನೆಚ್ಚರಿಕೆ ಕ್ರಮವಾಗಿ ದೆಹಲಿಯ ರಾಜ್‌ ಘಾಟ್, ಐಟಿಒ ಮತ್ತು ಕೆಂಪು ಕೋಟೆಯಂತಹ ಪ್ರದೇಶಗಳ ಬಳಿ ಸಿಆರ್‌ಪಿಸಿ (ಅಪರಾಧ ದಂಡ ಸಂಹಿತೆ) ಸೆಕ್ಷನ್ 144 ಅನ್ನು ಜಾರಿಗೊಳಿಸಲಾಗಿದೆ.

ಈ ಬಗ್ಗೆ ಪೊಲೀಸ್‌ ಇಲಾಖೆ ಟ್ವೀಟ್‌ ಮಾಡಲಾಗಿದೆ. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮುಂಜಾಗೃತೆಯ ದೃಷ್ಟಿಯಿಂದ, ರಾಜ್‌ಘಾಟ್, ಐಟಿಒ, ಕೆಂಪುಕೋಟೆ ಮುಂತಾದ ಸಮೀಪದ ಪ್ರದೇಶಗಳಲ್ಲಿ ಸೆಕ್ಷನ್ 144 ಅನ್ನು ಜಾರಿಗೊಳಿಸಲಾಗಿದೆ. ಈ ಪ್ರದೇಶಗಳಲ್ಲಿ ಯಾವುದೇ ರೀತಿಯ ಸಭೆಗಳನ್ನು ನಡೆಸುವಂತಿಲ್ಲ ಎಂದು ಟ್ವೀಟ್‌ ಮಾಡಲಾಗಿದೆ.

ಇದನ್ನೂ ಓದಿ: ಯುದ್ಧಕ್ಕೆ ಸಿದ್ಧರಾಗಿ.. ಶಸ್ತ್ರಾಸ್ತ್ರಗಳ ಉತ್ಪಾದನೆ ಹೆಚ್ಚಿಸಿ! – ಮಿಲಿಟರಿ ಅಧಿಕಾರಿಗಳಿಗೆ ಕಿಮ್‌ ಜಾಂಗ್‌ ಉನ್‌ ಸೂಚನೆ

ಆಗಸ್ಟ್ 15ರಂದು ದೇಶದಾದ್ಯಂತ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೆಂಪುಕೋಟೆಯಿಂದ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅಪರಾಧ ದಂಡ ಸಂಹಿತೆಯ (ಸಿಆರ್‌ಪಿಸಿ) 144ನೇ ಸೆಕ್ಷನ್‌ 1973ರಲ್ಲಿ ಜಾರಿಗೆ ಬಂತು. ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಜನರು ಒಂದೆಡೆ ಸೇರುವುದನ್ನು ನಿರ್ಬಂಧಿಸುವ ಆದೇಶ ಹೊರಡಿಸಲು ಮ್ಯಾಜಿಸ್ಟ್ರೇಟ್‌ಗೆ ಈ ಸೆಕ್ಷನ್‌ ಅಧಿಕಾರ ನೀಡುತ್ತದೆ. ಇದನ್ನು ಉಲ್ಲಂಘಿಸಿ ಜನರು ಒಂದೆಡೆ ಸೇರಿದರೆ ಅದನ್ನು ‘ಕಾನೂನುಬಾಹಿರ ಸಭೆ’ ಎಂದು ಪರಿಗಣಿಸಬಹುದು. ಅಂತವರ ವಿರುದ್ಧ ಪ್ರಕರಣ ದಾಖಲಿಸಬಹುದು.

suddiyaana