ಎಣ್ಣೆ ಮತ್ತಲ್ಲಿ ತನ್ನದೇ ಕಾರು ಕೊಟ್ಟು ಡ್ರಾಪ್‌ ಪಡೆದ.. – ನಶೆ ಇಳಿದಾಗ ಎಲ್ಲವೂ ಮಾಯ!

ಎಣ್ಣೆ ಮತ್ತಲ್ಲಿ ತನ್ನದೇ ಕಾರು ಕೊಟ್ಟು ಡ್ರಾಪ್‌ ಪಡೆದ.. – ನಶೆ ಇಳಿದಾಗ ಎಲ್ಲವೂ ಮಾಯ!

ನವದೆಹಲಿ: ಎಣ್ಣೆ ಏಟಲ್ಲಿ ವ್ಯಕ್ತಿಯೊಬ್ಬ ತನ್ನ ಕಾರನ್ನು ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದವರನಿಗೆ ದಾನ ಮಾಡಿ ತಾನು ಮೆಟ್ರೋ ಹತ್ತಿದ ಘಟನೆ ನಡೆದಿದೆ. ಕಾರಿನ ಜೊತೆಗೆ ಲ್ಯಾಪ್‌ ಟಾಪ್‌, ಮೊಬೈಲ್‌, ಸಾವಿರಾರು ರೂಪಾಯಿ ಕಳೆದುಕೊಂಡಿರುವುದು ಕುಡಿದ ಅಮಲು ಇಳಿದ ಮೇಲೆ ಗೊತ್ತಾಗಿ, ಬಾಯಿ ಬಾಯಿ ಬಡ್ಕೊಳ್ಳುವಂತಾಗಿದೆ.

ಏನಿದು ಘಟನೆ?

ಹರಿಯಾಣದ ಗುರುಗ್ರಾಮದ ವ್ಯಕ್ತಿಯೊಬ್ಬ ವೀಕೆಂಡ್‌ ಸಂಭ್ರಮದಲ್ಲಿ  ಕಂಠಪೂರ್ತಿ ಕುಡಿದುಕೊಂಡು ಮನೆಗೆ ಹೋಗಿದ್ದ. ಮನೆಗೆ ಹೋದ ನಂತರವೇ ಆತನಿಗೆ ತನ್ನ ಕಾರು, ಲ್ಯಾಪ್‌ಟಾಪ್‌, ಮೊಬೈಲ್‌ ಫೋನ್‌ ಹಾಗೂ 18 ಸಾವಿರ ರೂಪಾಯಿ ಹಣ ಕಳೆದುಹೋಗಿದೆ ಅನ್ನೋದು ಗೊತ್ತಾಗಿದೆ. ಆದರೆ ಈತನ ಕಾರು ಸೇರಿದಂತೆ ಉಳಿದ ವಸ್ತುಗಳನ್ನು ಯಾರೋ ಕಳ್ಳತನ ಮಾಡಿಲ್ಲ. ಎಲ್ಲೂ ಮಿಸ್‌ ಆಗಿಲ್ಲ.  ಸ್ವತಃ ಆತನೇ ದಾರಿಯಲ್ಲಿ ಹೋಗುವವರ ಕೈಗೆ ಕೊಟ್ಟಿದ್ದಾನೆ..!

ಇದನ್ನೂ ಓದಿ: ಬೆಂಗಳೂರಿಗರೇ ಎಚ್ಚರ.. – ನಗರದಲ್ಲಿ ಸುರಕ್ಷಿತ ಮಟ್ಟಕ್ಕಿಂತ 5.8 ಪಟ್ಟು ಹೆಚ್ಚು ವಾಯುಮಾಲಿನ್ಯ!

ಗುರುಗ್ರಾಮದ ಗಾಲ್ಫ್‌ ಕೋರ್ಸ್‌ ರಸ್ತೆಯಲ್ಲಿರುವ ಕಂಪನಿಯೊಂದರ ಉದ್ಯೋಗಿ ಅಮಿತ್‌ ಪ್ರಕಾಶ್‌ ಎಂಬಾತನಿಗೆ ಎಣ್ಣೆ ಹೊಡೆಯಬೇಕು ಎಂಬ ಮನಸ್ಸಾಗಿದೆ. ಕಾರಿನಲ್ಲಿ ಕುಳಿತು ಎಣ್ಣೆ ಹೊಡಿಯೋಕೆ ಒಬ್ಬನೇ ಅಂದುಕೊಂಡು ದಾರಿಯಲ್ಲಿ ಹೋಗುತ್ತಿದ್ದಾಗ ವ್ಯಕ್ತಿಯೊಬ್ಬನಿಗೆ ಮದ್ಯದ ಆಫರ್‌ ನೀಡಿದ್ದಾನೆ. ಬಳಿಕ ಕುಡಿದು ಎಣ್ಣೆ ಅಮಲಿನಲ್ಲಿದ್ದ ಅಮಿತ್ ತನ್ನ ಕಾರನ್ನು ಅಪರಿಚಿತನ ಕೈಗೆ ಕೊಟ್ಟಿದ್ದಾರೆ. ಆ ನಂತರ ದೆಹಲಿಯ ಸುಭಾಷ್‌ ಚೌಕ್‌ ಮೆಟ್ರೋಗೆ ಸ್ವತಃ ಈತನೇ  ಡ್ರಾಪ್‌ ಪಡೆದುಕೊಂಡಿದ್ದಾನೆ. ಬಳಿಕ ಅಪರಿಚಿತ ವ್ಯಕ್ತಿ ಕಾರನ್ನು ಓಡಿಸಿಕೊಂಡು ಹೋಗಿದ್ದಾನೆ.

ಮರುದಿನ ಎಣ್ಣೆ ಹ್ಯಾಂಗ್‌ಓವರ್‌ ಇಳಿಯುವವರೆಗೂ ಅಮಿತ್‌ಗೆ ರಾತ್ರಿ ಏನಾಗಿದೆ ಎಂಬುವುದು ಗೊತ್ತಾಗಿರಲಿಲ್ಲ. ಬಳಿಕ ತಾನು ಡ್ರಾಪ್‌ ತೆಗೆದುಕೊಂಡಿದ್ದು ತನ್ನದೇ ಕಾರ್‌ನಲ್ಲಿ ಎನ್ನುವುದು ಅರಿವಾಗಿ ಬೆಚ್ಚಿ ಬಿದ್ದಿದ್ದಾನೆ. ಕಾರಿನ ಜೊತೆ ಲ್ಯಾಪ್‌ಟಾಪ್‌, ಮೊಬೈಲ್‌ ಫೋನ್‌ ಹಾಗೂ 18 ಸಾವಿರ ರೂಪಾಯಿ ಹಣ ಕೂಡ ಹೋಗಿದೆ ಎನ್ನುವುದು ಗೊತ್ತಾಗಿದೆ.  ಸೆಪ್ಟರ್‌ 65 ಪೊಲೀಸ್‌ ಠಾಣೆಗೆ ತೆರಳಿ ದೂರು ದಾಖಲು ಮಾಡಿದ್ದಾರೆ. ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಐಪಿಸಿ ಸೆಕ್ಷನ್‌ 379ರ ಅನ್ವಯ ಕಳ್ಳತನದ ದೂರು ದಾಖಲು ಮಾಡಿದ್ದಾರೆ.

ಅಮಿತ್ ಅವರ ದೂರಿನ ಪ್ರಕಾರ, ಕೆಲಸ ಮುಗಿದ ಬಳಿಕ, ಗಾಲ್ಫ್ ಕೋರ್ಸ್ ರಸ್ತೆಯಲ್ಲಿರುವ ಲೇಕ್‌ಫಾರೆಸ್ಟ್ ವೈನ್ ಶಾಪ್‌ನಲ್ಲಿರುವ ಬ್ರಿಂಗ್‌ ಯುವರ್‌ ಓವ್ನ್‌ ಬಾಟಲ್‌ (ಬಿಐಓಬಿ) ಕಿಯೋಸ್ಕ್‌ಗೆ ಭೇಟಿ ನೀಡಿದ್ದರು ಎಂದು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಕುಡಿದ ಮತ್ತಿನಲ್ಲಿ ನಾನು ಒಂದು ವೈನ್‌ ಬಾಟಲ್‌ಗೆ 20 ಸಾವಿರ ರೂಪಾಯಿ ನೀಡಿದ್ದೆ. ಆದರೆ ಬಾಟಲ್‌ನ ಎಂಆರ್‌ಪಿ 2 ಸಾವಿರ ಆಗಿದ್ದರಿಂದ ಶಾಪ್‌ ಮಾಲೀಕ 18 ಸಾವಿರ ರೂಪಾಯಿಯನ್ನು ನನಗೆ ನಗದು ರೂಪದಲ್ಲಿ ಹಿಂತಿರುಗಿಸಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಅದಾದ ಬಳಿಕ ನಾನು ಮತ್ತೆ ನನ್ನ ಕಾರಿಗೆ ಹೋಗಿ ಕುಡಿಯಲು ಆರಂಭ ಮಾಡಿದೆ. ಆಗ ಇದ್ದಕ್ಕಿದ್ದಂತೆ ಅಪರಿಚಿತ ವ್ಯಕ್ತಿಯೊಬ್ಬ ಬಂದು, ನಾನೂ ಕೂಡ ಮದ್ಯ ಸೇವಿಸಲು ನಿಮ್ಮೊಂದಿಗೆ ಕೂರಬಹುದೇ ಎಂದು ಕೇಳಿದ್ದ. ಅದಕ್ಕೆ ಒಪ್ಪಿದ್ದ ನಾನು ಆತನಿಗೂ ಮದ್ಯ ನೀಡಿದ್ದೆ ಎಂದು ಆ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ. ಮದ್ಯ ಸೇವಿಸಿದ ಬಳಿಕ, ಅಪರಿಚಿತ ವ್ಯಕ್ತಿಯೇ ಕನ್ನ ಕಾರನ್ನು ಚಲಾಯಿಸಿದ್ದ ಹಾಗೂ ನನ್ನನ್ನು ಸುಭಾಷ್‌ ಚೌಕ್‌ನಲ್ಲಿ ಬಿಟ್ಟು ಹೋಗಿದ್ದ. ಅಚ್ಚರಿ ಎನ್ನುವಂತೆ ಮೆಟ್ರೋ ಸ್ಟೇಷನ್‌ಗೆ ತಲುಪಿದ ಬಳಿಕವೂ, ಆತ ಡ್ರಾಪ್‌ ನೀಡಿದ್ದು ತನ್ನದೇ ಕಾರ್‌ ಎನ್ನುವುದು ನನಗೆ ಮರೆತು ಹೋಗಿತ್ತು ಎಂದು ತಿಳಿಸಿದ್ದಾರೆ.

ಸುಭಾಷ್‌ ಚೌಕ್‌ಗೆ ಬಂದಾಗ, ಅಪರಿಚಿತ ವ್ಯಕ್ತಿ ನನಗೆ ಕಾರ್‌ನಿಂದ ಇಳಿಯುವಂತೆ ಹೇಳಿದ್ದ, ನಾನು ಇಳಿದ ಬಳಿಕ ಆತ ಕಾರು ಓಡಿಸಿಕೊಂಡು ಹೋದ. ಬಳಿಕ ನಾನು ಆಟೋರಿಕ್ಷಾದಲ್ಲಿ ಹುಡಾ ಸಿಟಿ ಮೆಟ್ರೋ ಸ್ಟೇಷನ್‌ ತಲುಪಿ ಅಲ್ಲಿಂದ ಮನೆಗೆ ಹಿಂತಿರುಗಿದ್ದೆ ಎಂದಿದ್ದಾರೆ. ಆದರೆ, ಅಪರಿಚಿತ ವ್ಯಕ್ತಿಯ ಬಗ್ಗೆ ನನಗೆ ಯಾವುದೇ ನೆನಪು ಉಳಿದಲ್ಲ ಎಂದು ತಿಳಿಸಿದ್ದಾರೆ.

suddiyaana