ಆರ್ಡರ್ ಮಾಡಿ 4 ವರ್ಷದ ಬಳಿಕ ಬಂತು ಪ್ರಾಡಕ್ಟ್ – ಆನ್ ಲೈನ್ ಬುಕ್ಕಿಂಗ್ನಲ್ಲಿ ಮಹಾ ಎಡವಟ್ಟು!
ಕೋವಿಡ್ ಬಂದ ಮೇಲೆ ಆನ್ಲೈನ್ ಶಾಪಿಂಗ್ ಹೆಚ್ಚು ಜನಪ್ರಿಯವಾಗಿದೆ. ಬಟ್ಟೆ, ಎಲೆಕ್ಟ್ರಾನಿಕ್ ಉಪಕರಣ, ದಿನಸಿ ಪದಾರ್ಥಗಳು, ಆಹಾರ, ಔಷಧಿ ಎಲ್ಲವನ್ನೂ ಜನರು ಆನ್ ಲೈನ್ ನಲ್ಲಿ ಆರ್ಡರ್ ಮಾಡುತ್ತಾರೆ. ಯಾವುದಾದರೂ ಉಪಕರಣವನ್ನು ಆನ್ಲೈನ್ನಲ್ಲಿ ಆರ್ಡರ್ ಮಾಡಿದ್ರೆ ಆ ವಸ್ತು ನಾಲ್ಕೈದು ದಿನಗಳೊಳಗೆ ಮನೆಗೆ ತಲುಪುತ್ತೆ. ಹೆಚ್ಚೆಂದರೆ ಹತ್ತರಿಂದ ಹದಿನೈದು ದಿನಗಳಾಗುತ್ತದೆ. ಅದಕ್ಕಿಂತ ಹೆಚ್ಚು ತಡವಾಗುವುದು ಬಲು ಅಪರೂಪ. ಆದರೆ ಇಲ್ಲೊಬ್ಬ ವ್ಯಕ್ತಿ ಸುಮಾರು ಆನ್ಲೈನ್ನಲ್ಲಿ ಆರ್ಡರ್ ಮಾಡಿದ್ದ ಪ್ರಾಡಕ್ಟ್ 4 ವರ್ಷಗಳ ಬಳಿಕ ಡೆಲಿವರಿ ಆಗಿದೆ!
ಇದನ್ನೂ ಓದಿ: 4 ಸಾವಿರ ರೂ.ಗೆ ಖರೀದಿಸಿದ ಕುರ್ಚಿ 82 ಲಕ್ಷಕ್ಕೆ ಮಾರಾಟ! – ಇದರ ವಿಶೇಷತೆ ಕೇಳಿ ಮಾಲೀಕನೇ ಶಾಕ್!
ಅಲಿ ಎಕ್ಸ್ಪ್ರೆಸ್ ಅನ್ನೋ ಆನ್ಲೈನ್ ಮಾರುಕಟ್ಟೆ ಭಾರತದಲ್ಲಿ ಬ್ಯಾನ್ ಆಗಿದೆ. ಚೀನಾ ಮೂಲದ ಈ ಕಂಪೆನಿಯನ್ನು 2020 ರಲ್ಲಿ ಭಾರತ ಸರ್ಕಾರ 58 ಇತರ ಆ್ಯಪ್ ಗಳೊಂದಿಗೆ ಬ್ಯಾನ್ ಮಾಡಿದೆ. ಈ ಆನ್ಲೈನ್ ಮಾರುಕಟ್ಟೆಯಲ್ಲಿ ಅಗ್ಗದ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿತ್ತು. ಆದರೆ ಬ್ಯಾನ್ ಆಗುವುದುಕ್ಕಿಂತ ಮೊದಲೇ ದೆಹಲಿ ಮೂಲದ ನಿತಿನ್ ಅಗರ್ವಾಲ್ ಎಂಬ ಟೆಕ್ಕಿ ಈ ಸೈಟ್ ನಲ್ಲಿ ಪ್ರಾಡೆಕ್ಟ್ ವೊಂದನ್ನು ಆರ್ಡರ್ ಮಾಡಿದ್ದಾರೆ. ಅದು 2023 ಅಂದರೆ ನಾಲ್ಕು ವರ್ಷದ ಬಳಿಕ ಡೆಲಿವರಿ ಆಗಿದೆ.
ಈ ಬಗ್ಗೆ ನಿತಿನ್ ಅಗರ್ವಾಲ್ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಭಾರಿ ವೈರಲ್ ಆಗಿದೆ. ಈ ನೆಟ್ಟಿಗರು ನಾನಾ ಬಗೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. “ನಾನು 2019 ಡಿಸೆಂಬರ್ನಲ್ಲಿ 2 ಉತ್ಪನ್ನಗಳನ್ನು ಆರ್ಡರ್ ಮಾಡಿದ್ದೇನೆ. ಹಾಗಾಗಿ ಇದು ಒಂದು ದಿನ ಡೆಲಿವರಿಯಾಗಬಹುದೆಂದು ನಾನು ಭಾವಿಸುತ್ತೇನೆ” ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. ಇದು ಹೇಗೆ ಸಾಧ್ಯ? ನಾನು 2017-19 ರ ಸುಮಾರಿಗೆ ನಾನು ಆರ್ಡರ್ ಮಾಡಿದ ಪ್ರಾಡೆಕ್ಟ್ ಗಳು ಬಂದಿಲ್ಲ. ಅದಕ್ಕಾಗಿ ನಾನು ಈಗಾಗಲೇ ಪಾವತಿಸಿದ್ದೇನೆ” ಎಂದು ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ.