ಮೂರು ಗಂಟೆ ಮೊದಲೇ ಏರ್​ಪೋರ್ಟ್ ಹಾಜರ್ – ಪ್ರಯಾಣಿಕರಿಗೆ ಹೊಸ ರೂಲ್ಸ್

ಮೂರು ಗಂಟೆ ಮೊದಲೇ ಏರ್​ಪೋರ್ಟ್ ಹಾಜರ್ – ಪ್ರಯಾಣಿಕರಿಗೆ ಹೊಸ ರೂಲ್ಸ್

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ವಿಮಾನ ನಿಲ್ದಾಣದಲ್ಲಿ ಸುದೀರ್ಘ ಸರತಿ ಸಾಲು ಮತ್ತು ಚೆಕ್-ಇನ್ ವಿಳಂಬವಾಗುತ್ತಿದೆ ಎಂದು ಪ್ರಯಾಣಿಕರು ಸಾಮಾಜಿಕ ಮಾಧ್ಯಮದಲ್ಲಿ ದೂರು ನೀಡಿದ್ದರು. ಈ ಹಿನ್ನಲೆ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಬೇಗ ಬರುವಂತೆ ಹಾಗೂ ಒಂದೇ ಲಗೇಜ್ ಬ್ಯಾಗ್ ತರುವಂತೆ ವಿಮಾನಯಾನ ಸಂಸ್ಥೆ ಇಂಡಿಗೋ ವಿನಂತಿ ಮಾಡಿದೆ.

ದೆಹಲಿ ಮತ್ತು ಇತರ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ದೀರ್ಘಾವಧಿಯವರೆಗೆ ಸರತಿ ಸಾಲಿನಲ್ಲಿ ಕಾಯುವ ಸ್ಥಿತಿ ಇದೆ. ಹಾಗೂ ಚೆಕ್​ ಇನ್​ಗಳು ಸರಿಯಾದ ಸಮಯಕ್ಕೆ ಮುಗಿಯುತ್ತಿಲ್ಲ. ನೂಕು ನುಗ್ಗಲಿನ ಸ್ಥಿತಿ ಇದೆ. ಈ ಬಗ್ಗೆ ಹಲವು ಪ್ರಯಾಣಿಕರು ಕೆಲವು ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಬೇಸರ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಇದು 1962 ಅಲ್ಲ, ಭಾರತದ ಗಡಿ ಮುಟ್ಟಿದ್ರೆ ತಕ್ಕ ಉತ್ತರ ನೀಡುತ್ತೇವೆ – ಚೀನಾಗೆ ಸಿಎಂ ಪೆಮಾ ಖಂಡು ಎಚ್ಚರಿಕೆ

ಹೀಗಾಗಿ ವಿಮಾನಯಾನ ಸಂಸ್ಥೆ ಇಂಡಿಗೋ ತನ್ನ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಕನಿಷ್ಠ ಮೂರುವರೆ (3.5) ಗಂಟೆಗಳ ಮೊದಲೇ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಆಗಮಿಸಬೇಕು. ವೆಬ್ ಚೆಕ್-ಇನ್ ಮಾಡಲು ಮತ್ತು ವೇಗವಾಗಿ ಚಲಿಸಲು ಕೇವಲ ಒಂದು ಕೈ ಬ್ಯಾಗ್ ತರುವಂತೆ ಮನವಿ ಮಾಡಿದೆ.

ಇನ್ನು ವಿಸ್ತಾರಾ ಸಂಸ್ಥೆ, ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನಗಳಿಗೆ ತೆರಳುವವರು ಕನಿಷ್ಠ ಮೂರು ಗಂಟೆಗಳ ಮೊದಲೇ ವಿಮಾನ ನಿಲ್ದಾಣಕ್ಕೆ ಬರುವಂತೆ ತನ್ನ ಪ್ರಯಾಣಿಕರಿಗೆ ತಿಳಿಸಿದೆ.

ಈ ಬಗ್ಗೆ ಇಂಡಿಗೋ ಸಂಸ್ಥೆ ಟ್ವೀಟ್ ಮಾಡಿದ್ದು, ದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಇಲ್ಲಿ ಹೆಚ್ಚಿನ ಕಾಲ್ತುಳಿತಗಳು ಸಂಭವಿಸುತ್ತವೆ. ಚೆಕ್-ಇನ್ ಮತ್ತು ಬೋರ್ಡಿಂಗ್ ಸಮಯವು ಸಾಮಾನ್ಯಕ್ಕಿಂತ ಹೆಚ್ಚು ಇರುತ್ತದೆ. ಹೀಗಾಗಿ “ದೇಶೀಯ ವಿಮಾನದಲ್ಲಿ ಪ್ರಯಾಣಿಸುವವರು ಕನಿಷ್ಠ ಮೂರೂವರೆ (3.5) ಗಂಟೆಗಳ ಮೊದಲೇ ವಿಮಾನ ನಿಲ್ದಾಣವನ್ನು ತಲುಪಬೇಕು. ಸುಗಮ ಭದ್ರತಾ ತಪಾಸಣೆಗಾಗಿ 7 ಕೆಜಿ ತೂಕದ ಒಂದು ಕೈ ಬ್ಯಾಗ್​ನ್ನು ಮಾತ್ರ ತೆಗೆದುಕೊಂಡು ಹೋಗಿ. ಹೆಚ್ಚಿನ ಅನುಕೂಲಕ್ಕಾಗಿ ನಿಮ್ಮ ವೆಬ್ ಚೆಕ್-ಇನ್ ಅನ್ನು ನೀವು ಪೂರ್ಣಗೊಳಿಸಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ ಎಂದು ಇಂಡಿಗೋ ವಿನಂತಿಸಿದೆ.

suddiyaana