ರಾಷ್ಟ್ರ ರಾಜಧಾನಿಯಲ್ಲಿ ಉಗ್ರರ ಕರಿನೆರಳು.. ಕೆಂಪು ಕೋಟೆ, ಚಾಂದಿನಿ ಚೌಕ್ ದೇಗುಲ ಸ್ಫೋಟಕ್ಕೆ ಸ್ಕೆಚ್! – ದೆಹಲಿಯಲ್ಲಿ ಹೈ ಅಲರ್ಟ್!‌

ರಾಷ್ಟ್ರ ರಾಜಧಾನಿಯಲ್ಲಿ ಉಗ್ರರ ಕರಿನೆರಳು.. ಕೆಂಪು ಕೋಟೆ, ಚಾಂದಿನಿ ಚೌಕ್ ದೇಗುಲ ಸ್ಫೋಟಕ್ಕೆ ಸ್ಕೆಚ್! – ದೆಹಲಿಯಲ್ಲಿ ಹೈ ಅಲರ್ಟ್!‌

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೊಮ್ಮೆ ಉಗ್ರರ ಕರಿನೆರಳು ಆವರಿಸಿದೆ. ದೆಹಲಿಯಲ್ಲಿ ಮತ್ತೆ ದಾಳಿ ನಡೆಸಲು ಸಂಚು ರೂಪಿಸಿರುವ ಬಗ್ಗೆ ಗೊತ್ತಾಗಿದೆ. ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ (LeT) ಉಗ್ರ ಸಂಘಟನೆಯು ದೆಹಲಿಯ ಐತಿಹಾಸಿಕ ಕೆಂಪು ಕೋಟೆ ಹಾಗೂ ಚಾಂದಿನಿ ಚೌಕ್‌ನಲ್ಲಿರುವ ಪ್ರಸಿದ್ಧ ದೇವಾಲಯವೊಂದರ ಬಳಿ ಸ್ಫೋಟ ನಡೆಸಲು ಸಂಚು ರೂಪಿಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಹುಬ್ಬಳ್ಳಿಯ ಸಬ್‌ ಜೈಲ್‌ನಲ್ಲಿ ಗಾಂಜಾ ಗಮ್ಮತ್ತು! – ಖೈದಿಗಳ ಬಿಂದಾಸ್‌‍ ಲೈಫ್‌ ವಿಡಿಯೋ ವೈರಲ್

2025ರ ನವೆಂಬರ್ 10ರಂದು ದೆಹಲಿಯ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿ ಕಾರು ಸ್ಫೋಟ ಸಂಭವಿಸಿತ್ತು. ಆ ದುರಂತದಲ್ಲಿ 12 ಅಮಾಯಕರು ಪ್ರಾಣ ಕಳೆದುಕೊಂಡಿದ್ದರು. ಹಲವರು ಗಾಯಗೊಂಡಿದ್ದರು. ಆ ಘಟನೆಯ ಕರಾಳ ನೆನಪು ಮಾಸುವ ಮುನ್ನವೇ ಮತ್ತೊಂದು ದಾಳಿಯ ಬೆದರಿಕೆ ಎದುರಾಗಿದೆ. ಲಷ್ಕರ್-ಎ-ತೈಬಾ ಉಗ್ರ ಸಂಘಟನೆ ದೆಹಲಿಯ ಐತಿಹಾಸಿಕ ಕೆಂಪು ಕೋಟೆ ಹಾಗೂ ಚಾಂದಿನಿ ಚೌಕ್‌ನಲ್ಲಿರುವ ಪ್ರಸಿದ್ಧ ದೇವಾಲಯವೊಂದರ ಬಳಿ ಸ್ಫೋಟ ನಡೆಸಲು ಸಂಚು ರೂಪಿಸಿದ್ದು ಬಯಲಾಗಿದೆ. ಭದ್ರತಾ ಏಜೆನ್ಸಿಗಳ ಮೂಲಗಳ ಪ್ರಕಾರ, ಉಗ್ರರು ಸುಧಾರಿತ ಸ್ಫೋಟಕ ಸಾಧನಗಳನ್ನು ಬಳಸಿ ದಾಳಿ ನಡೆಸಲು ಯೋಜನೆ ರೂಪಿಸುತ್ತಿದ್ದಾರೆ ಎನ್ನಲಾಗಿದೆ.

ಕಳೆದ ಫೆಬ್ರವರಿ 6ರಂದು ಪಾಕಿಸ್ತಾನದ ಇಸ್ಲಾಮಾಬಾದ್‌ನ ಮಸೀದಿಯೊಂದರಲ್ಲಿ ಆತ್ಮಾ*ತಿ ದಾಳಿ ನಡೆದಿತ್ತು. ಈ ಘಟನೆಯಲ್ಲಿ 31 ಮಂದಿ ಮೃತಪಟ್ಟು, 160ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಈ ದಾಳಿಯ ಹೊಣೆಯನ್ನು ‘ಇಸ್ಲಾಮಿಕ್ ಸ್ಟೇಟ್’ (ISIS) ಹೊತ್ತುಕೊಂಡಿದ್ದರೂ, ಲಷ್ಕರ್-ಎ-ತೈಬಾ ಸಂಘಟನೆಯು ಇದಕ್ಕೆ ಪ್ರತಿಕಾರವಾಗಿ ಭಾರತದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಮುಂದಾಗಿದೆ ಎಂದು ಗುಪ್ತಚರ ಮೂಲಗಳು ಎಚ್ಚರಿಸಿವೆ.

Shwetha M