ಅಯ್ಯಯ್ಯೋ.. ನಿಂಬೆ ಹಣ್ಣಿನ ಮೇಲೆ ಥಾರ್ ಹತ್ತಿಸಲು ಹೋಗಿ ಆಕ್ಸಿಲರೇಟರ್ ಒತ್ತಿದ ಮಹಿಳೆ!

ಹೊಸ ವಾಹನ ಖರೀಸಿದ ಮೇಲೆ ಯಾವುದೇ ತೊಂದರೆ ಆಗ್ಬಾರು. ಪ್ರಯಾಣ ಸುಖವಾಗಿರಲಿ ಅನ್ನೋ ಕಾರಣಕ್ಕೆ ವಾಹನ ಪೂಜೆ ಮಾಡುತ್ತಾರೆ. ಮನೆಗೆ ಹೊಸ ವಾಹನ ಬಂತೆಂದು ಸಂಭ್ರಮಿಸುತ್ತಾರೆ. ಇದೀಗ ಇಲ್ಲೊಬ್ಬರು ಮಹಿಳೆ ವಾಹನ ಪೂಜೆ ಮಾಡಲು ಹೋಗಿ ದೊಡ್ಡ ಎಡವಟ್ಟು ಮಾಡಿಕೊಂಡಿದ್ದಾರೆ. ನಿಂಬೆ ಕಾಯಿ ಮೇಲೆ ಥಾರ್ ಗಾಡಿಯನ್ನ ಹತ್ತಿಸಲು ಹೋಗಿ ಹೊಸ ಥಾರ್ ಪಲ್ಟಿಯಾಗಿದೆ.
ಇದನ್ನೂ ಓದಿ: OTTಗೆ ಕಾಲಿಟ್ರೂ ನಿಂತಿಲ್ಲ ಸು ಫ್ರಮ್ ಸೋ ಅಬ್ಬರ! – ಥಿಯೇಟರ್ನಲ್ಲೇ ಸಿನಿಮಾ ವೀಕ್ಷಿಸ್ತಿದ್ದಾರೆ ಜನ!
ಏನಿದು ಘಟನೆ?
ಸಾಮಾನ್ಯವಾಗಿ ಹೊಸ ವಾಹನ ಖರೀದಿಸಿದರೆ, ಗಾಡಿಗೆ ಯಾವುದೇ ದೃಷ್ಟಿಯಾಗದಿರಲಿ, ತನ್ನನ್ನು ಸದಾ ಸುರಕ್ಷಿತವಾಗಿಟ್ಟಿರಲಿ ಎಂದು ಪೂಜೆ ಮಾಡಿಸುವುದು ಸಹಜ. ಕೆಲವು ವಾಹನದ ಮುಂದೆ ಕಾಯಿ ಹೊಡೆಯುತ್ತಾರೆ. ಇದೀಗ ಮಹಿಳೆಯೊಬ್ಬರು ಮಹಿಂದ್ರಾ ಅವರ ಥಾರ್ ಗಾಡಿಯನ್ನು ಖರೀದಿಸಿದ್ದು, ರೂಮ್ ನಲ್ಲೇ ಪೂಜೆ ಮಾಡಿದ್ದಾರೆ. ಶೋ ರೂಮ್ನ ಮೊದಲ ಮಹಡಿಯಲ್ಲಿ ನಿಂಬೆ ಹಣ್ಣಿನ ಮೇಲೆ ಗಾಡಿಯನ್ನು ಹತ್ತಿಸಲು ಹೋಗಿದ್ದು, ಮೊದಲ ಮಹಡಿಯಿಂದ ಥಾರ್ ಸಮೇತ ಕೆಳಗೆ ಬಿದ್ದಿದ್ದಾರೆ.
ಈ ಘಟನೆ ದೆಹಲಿಯಲ್ಲಿ ನಡೆದಿದೆ. ಮಾನಿ ಪವಾರ್ ಎಂಬುವವರು ನಿರ್ಮಾಣ್ ವಿಹಾರ್ನಲ್ಲಿರುವ ಮಹೀಂದ್ರಾ ಶೋರೂಮ್ಗೆ ಭೇಟಿ ನೀಡಿ, 27 ಲಕ್ಷ ರೂಪಾಯಿ ಮೌಲ್ಯದ ತಮ್ಮ ಹೊಸ ಥಾರ್ ಕಾರಿನ ಖರೀಸಿದ್ದಾರೆ. ಶೋರೂಮ್ನಿಂದ ಕಾರನ್ನು ಹೊರಗೆ ಓಡಿಸುವ ಮೊದಲು ಪೂಜೆ ಪವಾರ್ ಮಾಡಿದ್ದಾರೆ. ಶೋರೂಮ್ನ ಮೊದಲ ಮಹಡಿಯಲ್ಲಿ ನಿಲ್ಲಿಸಲಾಗಿದ್ದ ಥಾರ್ನ ಚಕ್ರದ ಮುಂದೆ ನಿಂಬೆಹಣ್ಣನ್ನು ಇರಿಸಲಾಗಿತ್ತು. ಅದರ ಮೇಲೆ ನಿಧಾನವಾಗಿ ಕಾರನ್ನು ಚಲಾಯಿಸುವ ಬದಲು ಆಕ್ಸಿಲರೇಟರ್ ಒತ್ತಿದ ಪರಿಣಾಮ ನೇರವಾಗಿ ಮೊದಲ ಮಹಡಿಯಿಂದ ಕಾರು ಕೆಳಗೆ ಬಿದ್ದಿದೆ. ಪವಾರ್ ಮತ್ತು ಒಳಗೆ ಕುಳಿತಿದ್ದ ವಿಕಾಸ್ ಕಾರಿನ ಕಿಡಕಿ ಒಡೆದು ಕೆಳಗೆ ಜಂಪ್ ಮಾಡಿದ್ದ ಕಾರಣ ಅಷ್ಟಾಗಿ ಗಾಯಗಳಾಗಿಲ್ಲ. ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.

ನೋಡಿರಿ

