ರಾಹುಲ್ ಗಾಂಧಿಗೆ ʼಸಾಮಾನ್ಯʼ ಪಾಸ್ ಪೋರ್ಟ್! – ರಾಜತಾಂತ್ರಿಕ ಪಾಸ್‌ಪೋರ್ಟ್ ಗೆ ಕೋರ್ಟ್ ನಿರಾಕರಿಸಿದ್ದೇಕೆ?
ನವದೆಹಲಿ: 2019 ಲೋಕಸಭೆ ಚುನಾವಣೆ ವೇಳೆ ಮೋದಿ ಸರ್ ನೇಮ್ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿವಾದಾತ್ಮಕ ಹೇಳಿಕೆ ನೀಡಿ ಕಾನೂನು ಸಂಕಷ್ಟಕ್ಕೆ ಒಳಗಾಗಿದ್ದರು. ಅಲ್ಲದೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸತ್ ಸ್ಥಾನದಿಂದ ಅನರ್ಹಗೊಂಡಿದ್ದು, ವಿಶೇಷ ಸವಲತ್ತುಗಳಿಂದ ವಂಚಿತರಾಗಿದ್ದರು. ಇದೀಗ ರಾಗಾಗೆ ದೆಹಲಿ ಕೋರ್ಟ್ ಕೊಂಚ ರಿಲೀಫ್ ನೀಡಿದೆ.
ಇದನ್ನೂ ಓದಿ: ಮೋದಿ ಸಂಸತ್ ಭವನ ಉದ್ಘಾಟನೆ ವಿರೋಧ – ಅರ್ಜಿ ವಜಾಗೊಳಿಸಿದ್ದೇಕೆ ಸುಪ್ರೀಂಕೋರ್ಟ್?
ಸಂಸದ ಸ್ಥಾನದಿಂದ ಅನರ್ಹರಾಗಿರುವ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರು ತಮಗಿದ್ದ ವಿಶೇಷ ಸವಲತ್ತುಗಳನ್ನು ಕಳೆದುಕೊಂಡಿದ್ದಾರೆ. ರಾಹುಲ್ ಗಾಂಧಿ ಅವರು ತಮ್ಮ ಅನರ್ಹತೆಯ ನಂತರ ತಮ್ಮ ರಾಜತಾಂತ್ರಿಕ ಪಾಸ್ಪೋರ್ಟ್ನ್ನು ಸರ್ಕಾರಕ್ಕೆ ಒಪ್ಪಿಸಿದ ನಂತರ ಅವರು ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ) ಗಾಗಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಅರ್ಜಿ ವಿಚಾರಣೆಯನ್ನು ನಡೆಸಿದ ವೈಭವ್ ಮೆಹ್ತಾ ಅವರಿದ್ದ ಏಕ ಸದಸ್ಯ ಪೀಠವು ರಾಹುಲ್ ಗಾಂಧಿ ಅವರ ಮನವಿಯನ್ನು ಪುರಸ್ಕರಿಸಿ 10 ವರ್ಷದ ಬದಲಿಗೆ ಮೂರು ವರ್ಷಗಳ ಸಾಮಾನ್ಯ ಪಾಸ್‌ಪೋರ್ಟ್ ಹೊಂದಲು ಅನುಮತಿ ನೀಡಿದೆ.
ರಾಹುಲ್ ಗಾಂಧಿ ತಮ್ಮ ಬಳಿ ಪಾಸ್‌ಪೋರ್ಟ್ ಹೊಂದಲು ನ್ಯಾಯಾಲಯದ ಅನುಮತಿ ಬೇಕಿತ್ತು ಏಕೆಂದರೆ ನ್ಯಾಷನಲ್ ಹೆರಾಲ್ಡ್, ಅಕ್ರಮ ಹಣ ವರ್ಗಾವಣೆ, ಅನುದಾನ ದುರ್ಬಳಕೆ, ಸೇರಿದಂತೆ ಅನೇಕ ಪ್ರಕರಣಗಳ ವಿಚಾರಣೆಯನ್ನು ರಾಹುಲ್ ಎದುರಿಸುತ್ತಿದ್ದಾರೆ. ಬಿಜೆಪಿ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ ಅವರು ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಿದ್ದರು. ನಿರಾಪೇಕ್ಷಣಾ ಪ್ರಮಾಣಪತ್ರ ನೀಡಿರುವ ಕುರಿತು ಶುಕ್ರವಾರದೊಳಗೆ ಉತ್ತರಿಸುವಂತೆ ಕೋರ್ಟ್ ರಾಹುಲ್ ಗಾಂಧಿ ಅವರಿಗೆ ಸೂಚಿಸಿದೆ.