ಹಣಕ್ಕಾಗಿ ಗರ್ಭಿಣಿ ಪತ್ನಿಯನ್ನೇ ಕೊಂದು ಬಿಟ್ಟ ಪಾಪಿ ಪತಿ! – ದೆಹಲಿ ಸ್ವಾಟ್‌ ಕಮಾಂಡೊ ದುರಂತ ಅಂತ್ಯ!

ಹಣಕ್ಕಾಗಿ ಗರ್ಭಿಣಿ ಪತ್ನಿಯನ್ನೇ ಕೊಂದು ಬಿಟ್ಟ ಪಾಪಿ ಪತಿ! – ದೆಹಲಿ ಸ್ವಾಟ್‌ ಕಮಾಂಡೊ ದುರಂತ ಅಂತ್ಯ!

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬರ್ಬರ ಹತ್ಯೆ ನಡೆದಿದೆ. ಹಣಕಾಸಿನ ವಿಚಾರಕ್ಕೆ ಗಂಡ, ಗರ್ಭಿಣಿ ಪತ್ನಿಗೆ ಡಂಬಲ್‌ನಿಂದ ಹೊಡೆದು ಬರ್ಬರ ಹತ್ಯೆ ಮಾಡಿರುವ ಘಟನೆ ನಡೆದಿದೆ. ಇದೀಗ ಆತನನ್ನ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

ಇದನ್ನೂ ಓದಿ: ಇನ್ಸ್ಟಾಗ್ರಾಂ ಗೆಳೆಯನ ಮೇಲೆ ಲವ್! – ಪ್ರೀತಿ ಒಪ್ಪದ ತಂದೆ, ತಾಯಿಗೆ ಸ್ಲೀಪಿಂಗ್‌ ಇಂಜೆಕ್ಷನ್‌ ಕೊಟ್ಟು ಕೊಂದ್ಲು ಪಾಪಿ!

ಈ ಘಟನೆ ದೆಹಲಿ ನಡೆದಿದೆ. ರಕ್ಷಣಾ ಸಚಿವಾಲಯದಲ್ಲಿ ಗುಮಾಸ್ತರಾಗಿದ್ದ ಕಾಜಲ್ ಚೌಧರಿ ಕೊಲೆಯಾದ ಮಹಿಳೆ. 27 ವರ್ಷದ ಕಾಜಲ್ ಚೌಧರಿ ಇವರು 4 ತಿಂಗಳ ಗರ್ಭಿಣಿಯಾಗಿದ್ದರು. ಪತಿ ಅಂಕುರ್ ಹಾಗೂ ಕಾಜಲ್‌ ನಡುವೆ ಆಗಾಗ ಹಣಕಾಸಿನ ವಿಚಾರವಾಗಿ ಜಗಳ ಆಗುತ್ತಿತ್ತು. ಇದೇ ವಿಚಾರವಾಗಿ ಮತ್ತೆ ಇವರಿಬ್ಬರ ಮಧ್ಯೆ ಜಗಳ ನಡೆದಿದೆ. ಈ ವೇಳೆ ಕೋಪಗೊಂಡು ಅಂಕುಲ್‌  ಹೆಂಡತಿ ತಲೆಗೆ ಡಂಬಲ್‌ನಿಂದ ಪತಿ ಹೊಡೆದಿದ್ದಾನೆ. ಇದ್ರಿಂದ ಗಂಭೀರ ಗಾಯಗೊಂಡ ಕಾಜಲ್‌ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.  ಇದೀಗ ಅಂಕುರ್ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

ಇನ್ನು ಚೌಧರಿಯ ಸಹೋದರ ನಿಖಿಲ್‌, ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೆಬಲ್ ಆಗಿದ್ದಾರೆ. ತನ್ನ ಸಹೋದರಿ ಮೇಲೆ ಹಲ್ಲೆ ನಡೆದ ದಿನ ತನಗೆ ಕರೆ ಮಾಡಿದ್ದಳು ಎಂದು ಹೇಳಿದ್ದಾರೆ. ತಾನು ತನ್ನ ಸಹೋದರಿಯೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದಾಗ, ಅಂಕುರ್ ಡಂಬಲ್‌ನಿಂದ ಆಕೆಗೆ ಹೊಡೆದಿದ್ದಾನೆ. ಚೌಧರಿಯ ಅತ್ತೆ ಮತ್ತು ಇಬ್ಬರು ಅತ್ತಿಗೆಯರು ನಿರಂತರವಾಗಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಎಂದು ನಿಖಿಲ್ ಆರೋಪಿಸಿದ್ದಾರೆ. ಅಂಕುರ್ ತನ್ನ ಪತ್ನಿ ಕಾಜಲ್ ಪೋಷಕರಿಂದ ಹಣ ಪಡೆದಿದ್ದ ಎನ್ನಲಾಗಿದೆ.

Shwetha M