ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ಗೆ ಜೀವ ಬೆದರಿಕೆ – ಆರೋಪಿ ಲಾಕ್.. ಪೊಲೀಸರು ಶಾಕ್..!
ವಿಮಾನ ನಿಲ್ದಾಣಗಳು, ಶಾಲೆಗಳಲ್ಲಿ ಇತ್ತೀಚೆಗೆ ಬಾಂಬ್ ಬೆದರಿಕೆ ಕರೆಗಳು ಹೆಚ್ಚಾಗುತ್ತಿವೆ. ಹಾಗೂ ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ ಕರೆ ಮಾಡಿ ಕೆಲವರು ಪುಂಡಾಟ ಮೆರೆಯುತ್ತಿದ್ದಾರೆ. ಈಗ ದೆಹಲಿ ಮುಖ್ಯಮಂತ್ರಿಯನ್ನೇ ಕೊಲ್ಲೋದಾಗಿ ಆಗಂತುಕನೊಬ್ಬ ಫೋನ್ ಮಾಡಿದ್ದು, ರಾಷ್ಟ್ರ ರಾಜಧಾನಿ ಪೊಲೀಸರಿಗೆ ಆತಂಕ ಶುರುವಾಗಿತ್ತು.
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ಗೆ ಜೀವ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನ ದೆಹಲಿ ಪೊಲೀಸರು ಬಂಧಿಸಿದ್ದಾರೆ. ಸೋಮವಾರ ಮಧ್ಯರಾತ್ರಿ ಕರೆ ಮಾಡಿದ್ದ ಆರೋಪಿ ದೆಹಲಿ ಸಿಎಂರನ್ನ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ.
ಇದನ್ನೂ ಓದಿ :ಡಬಲ್ ಡೆಕರ್ ಬಸ್ ರಸ್ತೆಗಿಳಿಸಲು ಮುಂದಾದ KSRTC, BMTC – ಯಾವ್ಯಾವ ಜಿಲ್ಲೆಗಳಲ್ಲಿ ಸಂಚಾರ..?
ಅರವಿಂದ ಕೇಜ್ರಿವಾಲ್ಗೆ ಜೀವ ಬೆದರಿಕೆ ಕರೆ ಬರುತ್ತಿದ್ದಂತೆ ದೆಹಲಿ ಪೊಲೀಸರು ಕೂಡಲೇ ಅಲರ್ಟ್ ಆಗಿದ್ರು. ತಂತ್ರಜ್ಞಾನದ ಮೂಲಕ ಬೆದರಿಕೆ ಕರೆಯ ಮೂಲವನ್ನ ಪತ್ತೆ ಹಚ್ಚಿದ್ದಾರೆ. ಹಾಗೇ ಕರೆ ಬಂದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ ಆರೋಪಿಯು 38 ವರ್ಷದವನಾಗಿದ್ದು,ಮಾನಸಿಕ ಅಸ್ವಸ್ಥನಾಗಿದ್ದಾನೆ. ಹಾಗೂ ದೆಹಲಿಯ ಗುಲಾಬ್ ಭಾಗ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಹೀಗಾಗಿ ಪೊಲೀಸರು ಆರೋಪಿಯನ್ನ ಬಂಧಿಸಿಲ್ಲ. ಈ ಮೂಲಕ ಬೆದರಿಕೆ ಕರೆಯ ಆತಂಕ ಕೆಲವೇ ಗಂಟೆಗಳಲ್ಲಿ ಬಗೆ ಹರಿದಿದ್ದು, ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ.