ಮೊದಲ ಸ್ಥಾನಕ್ಕೇರಲು ರಾಜಸ್ತಾನ್ ರಾಯಲ್ಸ್ ಹಠ – ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಗೆಲ್ಲುತ್ತಾ ಡಿಸಿ?

ಮೊದಲ ಸ್ಥಾನಕ್ಕೇರಲು ರಾಜಸ್ತಾನ್ ರಾಯಲ್ಸ್ ಹಠ – ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಗೆಲ್ಲುತ್ತಾ ಡಿಸಿ?

ರಾಜಸ್ತಾನ್ ರಾಯಲ್ಸ್‌ಗೆ ಮತ್ತೆ ಅಗ್ರಸ್ಥಾನಕ್ಕೇರುವ ತವಕ.. ಡೆಲ್ಲಿ ಕ್ಯಾಪಿಟಲ್ಸ್‌ಗೆ ಡು ಆರ್‌ ಡೈ ಪಂದ್ಯ. 11 ಪಂದ್ಯಗಳಲ್ಲಿ 6ರಲ್ಲಿ ಸೋತು, ಕೇವಲ 5 ಗೆಲುವು ಸಾಧಿಸಿರುವ ಡೆಲ್ಲಿ ಕ್ಯಾಪಿಟಲ್ಸ್‌, ಲೀಗ್‌ ಹಂತದ ತನ್ನ 12ನೇ ಪಂದ್ಯದಲ್ಲಿ ಮಂಗಳವಾರ ರಾಜಸ್ಥಾನ ರಾಯಲ್ಸ್‌ ವಿರುದ್ಧ ಸೆಣಸಲಿದೆ.

ಇದನ್ನೂ ಓದಿ: 17 ಸೀಸನ್ ಗಳಲ್ಲಿ RCB ಕಂಡ ಸ್ಟಾರ್ ಆಟಗಾರರು.. – ಯಾರು ಬೆಸ್ಟ್?

ಡೆಲ್ಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಟೀಮ್ ಸಂಜು ಸ್ಯಾಮ್ಸನ್ ಅವರ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ. ಇದು ಡಿಸಿ ಟೀಮ್‌ಗೆ ಮಹತ್ವದ ಪಂದ್ಯ. ಎರಡೂ ತಂಡಗಳು ಮೊದಲ ಮುಖಾಮುಖಿಯಾಗಿದ್ದಾಗ ರಾಜಸ್ಥಾನ್ 12 ರನ್ ಗಳ ಜಯ ಸಾಧಿಸಿತ್ತು. ಹೀಗಾಗಿ ಪಂತ್ ಪಡೆಗೆ ಇದೊಂದು ಸೇಡಿನ ಪಂದ್ಯ ಕೂಡ ಹೌದು. ಪ್ಲೇ ಆಫ್ ಕನಸಿನಲ್ಲಿರುವ ಡೆಲ್ಲಿ ಈ ಪಂದ್ಯ ಗೆಲ್ಲಲೇಬೇಕು. ಡೆಲ್ಲಿ ಕ್ಯಾಪಿಟಲ್ಸ್ ಆಡಿರುವ 11 ಪಂದ್ಯಗಳ ಪೈಕಿ ಐದರಲ್ಲಿ ಗೆಲುವು ಮತ್ತು ಆರರಲ್ಲಿ ಸೋಲು ಕಂಡಿದೆ. ಈ ಮೂಲಕ ಒಟ್ಟು 10 ಅಂಕ ಪಡೆದು ಪಾಯಿಂಟ್ಸ್ ಟೇಬಲ್​ನಲ್ಲಿ ಆರನೇ ಸ್ಥಾನದಲ್ಲಿದೆ.

ಇತ್ತ ರಾಜಸ್ಥಾನ್ ಬೊಂಬಾಟ್ ಫಾರ್ಮ್​ನಲ್ಲಿದ್ದು ಆಡಿರುವ 10 ಪಂದ್ಯಗಳಲ್ಲಿ ಎಂಟರಲ್ಲಿ ಗೆದ್ದು, ಕೇವಲ ಎರಡರಲ್ಲಿ ಸೋತು 16 ಅಂಕ ಸಂಪಾದಿಸಿದೆ. ರಾಜಸ್ಥಾನ್ ರಾಯಲ್ಸ್ ಈಗಾಗಲೇ ಪ್ಲೇ ಆಫ್​ಗೆ ಲಗ್ಗೆಯಿಟ್ಟಿಗೆ. ಸಂಜು ಸ್ಯಾಮ್ಸನ್ ತಂಡ ಡೆಲ್ಲಿ ವಿರುದ್ಧ ಗೆದ್ದರೆ ಪಾಯಿಂಟ್ ಪಟ್ಟಿಯಲ್ಲಿ ಮತ್ತೊಮ್ಮೆ ಟಾಪ್ ಒನ್ ಪ್ಲೇಸ್ ಗೆ ಏರಲಿದೆ.

Sulekha