ಪಂಜಾಬ್‌ನ ಪಂಚರ್ ಮಾಡಿದ ಕೆಎಲ್‌ ರಾಹುಲ್- 150 ರನ್‌ಗಳಿಸಿ ಮಿಂಚಿದ ಕನ್ನಡಿಗ K. L

ಪಂಜಾಬ್‌ನ ಪಂಚರ್ ಮಾಡಿದ  ಕೆಎಲ್‌ ರಾಹುಲ್- 150 ರನ್‌ಗಳಿಸಿ ಮಿಂಚಿದ ಕನ್ನಡಿಗ K. L

ಐಪಿಎಲ್ 2026 ರಲ್ಲಿ ದೆಹಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ಇಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮುಖಾಮುಖಿದ್ದು, ಡೆಲ್ಲಿ ಕ್ಯಾಪಿಟಲ್ಸ್ ಅಬ್ಬರಿಸುತ್ತಿದೆ. ಕನ್ನಡಿಗ ಕೆಎಲ್ ರಾಹುಲ್‌ ಬ್ಯಾಕ್‌ಟೂ ಬ್ಯಾಕ್‌ ಫೋರ್‌, ಸಿಕ್ಸರ್‌ ಮೂಲಕ ಶತಕ ಸಿಡಿಸಿ ಮಿಂಚಿದ್ದಾರೆ. ಇನ್ನು ನಿತೀಶ್ ರಾಣ ಕೂಡ ಆಫ್‌ ಸೆಂಚುರಿ ಸಿಡಿಸಿ ಕೆಎಲ್‌ಗೆ ಸಖತ್ ಆಗಿ ಸಾಥ್ ನೀಡಿದ್ರು.

ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL)ನ ಅತ್ಯಂತ ಬಲಿಷ್ಠ ತಂಡವಾಗಿರುವ, ಈ ಸೀಸನ್‌ನಲ್ಲಿ ಇದುವರೆಗೂ ಒಂದು ಪಂದ್ಯವನ್ನು ಸೋಲದ ಪಂಜಾಬ್‌ ಕಿಂಗ್ಸ್‌ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ ಓಪನರ್‌, ಕನ್ನಡಿಗ KL ರಾಹುಲ್ ಅವರು ಶತಕ ಬಾರಿಸಿದ್ದಾರೆ. ಆರಂಭದಿಂದಲೇ ಬ್ಯಾಟಿಂಗ್‌ನಲ್ಲಿ ರನ್‌ಗಳ ಕೊಳ್ಳೆ ಹೊಡೆದ ಕೆ.ಎಲ್‌ ರಾಹುಲ್‌ ಪಂಜಾಬ್‌ ಬೌಲರ್‌ಗಳಿಗೆ ನೀರೀಳಿಸಿದರು. ಮೈದಾನದ ಮೂಲೆ ಮೂಲೆಗೂ ಬೌಂಡರಿ, ಸಿಕ್ಸರ್‌ಗಳನ್ನು ಸಿಡಿಸಿದರು. ಇದು ಕೆ.ಎಲ್‌ ರಾಹುಲ್‌ ಅವರ ಐಪಿಎಲ್‌ನ 6ನೇ ಶತಕವಾಗಿದೆ.

ದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದುಕೊಂಡ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಾಯಕ ಅಕ್ಷರ್‌ ಪಟೇಲ್‌ ಅವರು ಮೊದಲ ಬ್ಯಾಟಿಂಗ್‌ ಆಯ್ಕೆ ಮಾಡಿದರು. ಇದರಿಂದ ಓಪನರ್‌ ಆಗಿ ಕ್ರೀಸ್‌ಗೆ ಆಗಮಿಸಿದ ಕೆ.ಎಲ್‌ ರಾಹುಲ್‌ ಹಾಗೂ ಪಾತುಮ್ ನಿಸ್ಸಂಕ ಉತ್ತಮ ಆರಂಭವೇನು ಪಡೆಯಲಿಲ್ಲ. 11 ರನ್‌ಗಳು ಗಳಿಸಿರುವಾಗಲೇ ಪಾತುಮ್ ನಿಸ್ಸಂಕ ಅವರು ಪ್ರಭಸಿಮ್ರಾನ್‌ ಅವರಿಗೆ ಕ್ಯಾಚ್‌ ಕೊಟ್ಟು ಹೊರ ನಡೆದರು. ಆದರೆ ಬಳಿಕ ಕ್ರೀಸ್‌ಗೆ ಆಗಮಿಸಿದ ನಿತೀಶ್‌ ರಾಣಾ, ಕನ್ನಡಿಗನಿಗೆ ಜೊತೆಯಾದರು.

ಈ ಐಪಿಎಲ್‌ ಪಂದ್ಯದಲ್ಲಿ ಒಟ್ಟು ಒಟ್ಟು 226.87 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್‌ ಮಾಡಿದ ಕೆ.ಎಲ್‌ ರಾಹುಲ್‌ ಅವರು, ಕೇವಲ 67 ಎಸೆತಗಳಲ್ಲಿ 16 ಬೌಂಡರಿ ಹಾಗೂ 9 ಬಿಗ್‌ ಬಿಗ್ ಸಿಕ್ಸರ್‌ಗಳಿಂದ 152 ರನ್‌ ಚಚ್ಚಿ ಅಜೇಯರಾಗಿ ಉಳಿದರು. ಕೆ.ಎಲ್‌ ರಾಹುಲ್‌ ಅವರಿಗೆ ಅತ್ಯುತ್ತಮ ಸಾಥ್‌ ಕೊಟ್ಟಿರುವ ನಿತೀಶ್‌ ರಾಣಾ ಅವರು ಕೇವಲ 44 ಎಸೆತಗಳಲ್ಲಿ 11 ಬೌಂಡರಿಗಳು, 4 ಅಮೋಘವಾದ ಸಿಕ್ಸರ್‌ಗಳಿಂದ 91 ರನ್‌ ಗಳಿಂದ ಆಡುವಾಗ ಔಟ್‌ ಆದರು. ಕೇವಲ 9 ರನ್‌ಗಳಿಂದ ಶತಕ ಮಿಸ್‌ ಮಾಡಿಕೊಂಡರು. ಈ ಇಬ್ಬ ಬ್ಯಾಟಿಂಗ್‌ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್‌ 20 ಓವರ್‌ಗಳಲ್ಲಿ 265 ರನ್‌ಗಳ ಟಾರ್ಗೆಟ್‌ ನೀಡಿದೆ.

PBJS  ಪ್ಲೇಯಿಂಗ್

ಶ್ರೇಯಸ್ ಅಯ್ಯರ್ (ನಾಯಕ), ಪ್ರಭಾಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಪ್ರಿಯಾಂಶ್ ಆರ್ಯ, ಕೂಪರ್ ಕೊನೊಲಿ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೊಯಿನಿಸ್, ಮಾರ್ಕೊ ಯಾನ್ಸೆನ್, ಕ್ಸೇವಿಯರ್ ಬಾರ್ಟ್ಲೆಟ್, ವೈಶಾಕ್ ವಿಜಯ್​ಕುಮಾರ್, ಅರ್ಶ್ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್.

DC ಪ್ಲೇಯಿಂಗ್

ಕೆಎಲ್ ರಾಹುಲ್ (ವಿಕೆಟ್ ಕೀಪರ್), ಪಾತುಮ್ ನಿಸ್ಸಾಂಕ, ಸಮೀರ್ ರಿಜ್ವಿ, ನಿತೀಶ್ ರಾಣಾ, ಟ್ರಿಸ್ಟಾನ್ ಸ್ಟಬ್ಸ್, ಡೇವಿಡ್ ಮಿಲ್ಲರ್, ಅಕ್ಸರ್ ಪಟೇಲ್ (ನಾಯಕ), ಲುಂಗಿ ಎನ್‌ಗಿಡಿ, ಕುಲ್ದೀಪ್ ಯಾದವ್, ಟಿ ನಟರಾಜನ್, ಮುಖೇಶ್ ಕುಮಾರ್.

Kishor KV