449 ದಿನಗಳ ನಂತರ ಪಂತ್ ಎಂಟ್ರಿ – ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ಮೊದಲ ಮುಖಾಮುಖಿ

449 ದಿನಗಳ ನಂತರ ಪಂತ್ ಎಂಟ್ರಿ – ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ಮೊದಲ ಮುಖಾಮುಖಿ

14 ತಿಂಗಳ ವನವಾಸದ ನಂತರ ಫೀಲ್ಡ್ಗೆ ಗ್ರ್ಯಾಂಡ್‌ ಎಂಟ್ರಿ ಕೊಡೋದಿಕ್ಕೆ ವಿಕೆಟ್‌ ಕೀಪರ್‌ ಕಂ ಡ್ಯಾಷಿಂಗ್‌ ಬ್ಯಾಟ್ಸ್ಮನ್‌ ರಿಷಬ್‌ ಪಂತ್‌ ರೆಡಿಯಾಗಿದ್ದಾರೆ.. 2022ರ ಡಿಸೆಂಬರ್‌ನಲ್ಲಿ ನಡೆದ ಭಯಾನಕ ಆ್ಯಕ್ಸಿಡೆಂಟ್‌ನಲ್ಲಿ ರಿಷಬ್‌ ಬದುಕಿ ಉಳಿದಿದ್ದೇ ಹೆಚ್ಚು.. ಆದ್ರೆ ಅಷ್ಟೆಲ್ಲಾ ಇಂಜುರಿಯಾದ್ರೂ ಕೇವಲ 14 ತಿಂಗಳಲ್ಲಿ ಕಂಪ್ಲೀಟ್‌ ರಿಕವರಿಯಾಗಿ ಫೀಲ್ಡ್ಗೆ ವಾಪಸ್ಸಾಗುತ್ತಿದ್ದಾರೆ ಅಂದ್ರೆ ಸಾಮಾನ್ಯ ಸಂಗತಿ ಏನಲ್ಲ.. ರಿಷಬ್‌ ಬರುತ್ತಿದ್ದಂತೆ ಕಳೆದ ಆವೃತ್ತಿಯಲ್ಲಿ ತಂಡವನ್ನು ಮುನ್ನಡೆಸಿದ್ದ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ನನ್ನು ನಾಯಕತ್ವದಿಂದ DC ಕೆಳಗಿಳಿಸಿದೆ.  ತಂಡದ ಮಾಜಿ ನಾಯಕ ರಿಷಬ್ ಪಂತ್ ಗೆ ಮತ್ತೊಮ್ಮೆ ತಂಡದ ಚುಕ್ಕಾಣಿ ನೀಡಿದೆ.

ಇದನ್ನೂ ಓದಿ: ಸನ್‌ರೈಸರ್ಸ್ ಹೈದರಾಬಾದ್ ವಿರುದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಮೊದಲ ಪಂದ್ಯ – ಆರೆಂಜ್ ಆರ್ಮಿ ವಿರುದ್ಧ ಅಬ್ಬರಿಸ್ತಾರಾ ರಿಂಕು ಸಿಂಗ್?

ಡೆಲ್ಲಿ ಕ್ಯಾಪಿಟಲ್ಸ್ ತನ್ನ ನಾಯಕನನ್ನು ಬದಲಾಯಿಸಿದ್ದು ಶಾಕಿಂಗ್ ನ್ಯೂಸೇನು ಅಲ್ಲ. ಡೇವಿಡ್ ವಾರ್ನರ್ ಗೂ ಇದ್ರಿಂದ ಯಾವ ಬೇಜಾರು ಇಲ್ಲ. ಯಾಕೆಂದ್ರೆ ವಾರ್ನರ್ ಗೂ ಮೊದಲು ಡಿಸಿ ಕ್ಯಾಪ್ಟನ್ ಆಗಿದ್ದವರು ರಿಷಭ್ ಪಂತ್. ಭಯಾನಕ ಆಕ್ಸಿಡೆಂಟ್‌ನಿಂದಾಗಿ 14 ತಿಂಗಳು ಕ್ರಿಕೆಟ್ ಅಂಗಣದಿಂದ ಹೊರಗುಳಿದಿದ್ದರು ಅಷ್ಟೇ. ಇದೀಗ ಡಿಸಿ ತಂಡದ ಕ್ಯಾಪ್ಟನ್ ಹಾಗೂ ವಿಕೆಟ್ ಕೀಪರ್ ಕಮ್ ಬ್ಯಾಟರ್ ಕ್ರಿಕೆಟ್‌ಗೆ ಮರಳಿದ್ದಾರೆ. ಈ ಬಗ್ಗೆ ಡೆಲ್ಲಿ ಕ್ಯಾಪಿಟಲ್ಸ್ ಪ್ರಾಂಚೈಸಿ ಅಧ್ಯಕ್ಷ ಮತ್ತು ಸಹ-ಮಾಲೀಕ ಪಾರ್ಥ್ ಜಿಂದಾಲ್ ಒಂದು ಸ್ಟೇಟ್‌ಮೆಂಟ್ ಕೊಟ್ಟಿದ್ದಾರೆ.  ‘ರಿಷಭ್ ಅವರನ್ನು ಮತ್ತೆ ನಮ್ಮ ನಾಯಕನಾಗಿ ಸ್ವಾಗತಿಸಲು ನಾವು ಸಂತೋಷ ಪಡುತ್ತೇವೆ. ಉತ್ಸಾಹ, ಚೈತನ್ಯದೊಂದಿಗೆ ನಾವು ಹೊಸ ಋತುವಿಗಾಗಿ ಎದುರು ನೋಡುತ್ತಿದ್ದೇವೆ’ ಎಂದು ತಿಳಿಸಿದ್ದಾರೆ. ತಂಡದ ಸಹ-ಮಾಲೀಕ ಕಿರಣ್ ಕುಮಾರ್, ‘ರಿಷಭ್ ತಮ್ಮ ಜೀವನದ ಅತ್ಯಂತ ಸವಾಲಿನ ಹಂತಗಳಲ್ಲಿ ನಂಬಲಾಗದಷ್ಟು ಶ್ರಮಿಸಿದ್ದಾರೆ. ಅವರು ಹೊಸ ಋತುವನ್ನು ಪ್ರಾರಂಭಿಸಿದಾಗ ಅವರ ತಂಡದ ಸಹ ಆಟಗಾರರು ಅದರಿಂದ ಅಪಾರವಾದ ಸ್ಫೂರ್ತಿ ಪಡೆದುಕೊಳ್ಳಲಿದ್ದಾರೆ ಎಂಬುದರಲ್ಲಿ ನನಗೆ ಸಂದೇಹವಿಲ್ಲ. ನಾಯಕ ರಿಷಭ್ ಮತ್ತು ತಂಡಕ್ಕೆ ನಮ್ಮ ಶುಭ ಹಾರೈಕೆಗಳಿವೆ ಎಂದಿದ್ದಾರೆ. ಇದರ ನಡುವೆ ಜಿಯೋ ಸಿನಿಮಾಗೆ ಸಂದರ್ಶನ ನೀಡಿರುವ ರಿಷಬ್‌ ಪಂತ್‌, ನಾನು ಜೀವಂತ ಇದ್ದೇನೆ ಎನ್ನುವುದೇ ಖುಷಿಯಾಗಿದೆ.. ಜೀವಂತ ಆಗಿದ್ದರೆ ಮಾತ್ರ ಇವೆಲ್ಲವನ್ನೂ ಸಾಧಿಸಲು ಸಾಧ್ಯವಾಗುತ್ತದೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.. ಅಲ್ಲಿಗೆ ತನ್ನಲ್ಲಿ ಈ ಹಿಂದೆ ಇದ್ದ ಜೋಶ್‌ ಜೊತೆಗೆ ರಿಷಬ್‌ ಪಂತ್‌ ಮೆಂಟಲಿ ಸಿಕ್ಕಾಪಟ್ಟೆ ಸ್ಟ್ರಾಂಗ್‌ ಆಗಿ ಕಾಣಿಸಿಕೊಳ್ಳುತ್ತಿರುವುದು ಸ್ಪಷ್ಟವಿದೆ.. ಚಂಡೀಗಢದಲ್ಲಿ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪಂಜಾಬ್ ಕಿಂಗ್ಸ್ ವಿರುದ್ಧ ಸೆಣಸಲಿದೆ. ಪಂಜಾಬ್ ಕಿಂಗ್ಸ್ಗೆ ತನ್ನ ತವರು ನೆಲದಲ್ಲಿ ಆಡುವ ಪುಳಕ. ಡಿಸಿಗೆ ತವರಿನಲ್ಲಿ ಮೊದಲೆರೆಡು ಪಂದ್ಯ ಆಡುವ ಚಾನ್ಸ್ ಸಿಕ್ಕಿಲ್ಲ. ಆದ್ರೂ ಕೂಡಾ ಡಿಸಿ ತನ್ನ ಕ್ಯಾಪ್ಟನ್ ಭರ್ಜರಿ ಕಮ್‌ಬ್ಯಾಕ್ ಮಾಡಿರುವ ಜೋಶ್‌ನಲ್ಲಿದೆ.

ಇನ್ನು ಡಿಸಿ ಟೀಮ್‌ನ ಸ್ಟ್ರೆಂಥ್ ಮತ್ತು ವೀಕ್‌ನೆಸ್ ಏನು ಅನ್ನೋದನ್ನು ನೋಡೋದಾದ್ರೆ, ಐಪಿಎಲ್ ಟೂರ್ನಿಯಲ್ಲಿ 2020ರಲ್ಲಿ ಫೈನಲ್‌ಗೆ ಬಂದು ಮುಂಬೈ ವಿರುದ್ಧ ಸೋತಿದ್ದೇ ಡಿಸಿಯ ಇದುವರೆಗಿನ ದೊಡ್ಡ ಸಾಧನೆ. 12 ಸೀಸನ್ಗಳನ್ನ ಆಡಿದ ಬಳಿಕ ದೆಹಲಿ ಕ್ಯಾಪಿಟಲ್ಸ್ ಫಸ್ಟ್ ಟೈಮ್ ಫೈನಲ್ ಆಡಿತ್ತು. ಆದ್ರೆ ಇದುವರೆಗೂ ಟ್ರೋಫಿಯಂತೂ ಗೆಲ್ಲೋಕೆ ಆಗಿಲ್ಲ. ದೆಹಲಿ ಕ್ಯಾಪಿಟಲ್ಸ್ ಎಡವಿರೋದು ಎಲ್ಲಿ ಅನ್ನೋದನ್ನ ನೋಡ್ತಾ ಹೋದ್ರೆ ಕೆಲ ಸಂಗತಿಗಳು ಹೈಲೈಟ್ ಆಗುತ್ತವೆ. ದೆಹಲಿ ಕ್ಯಾಪಿಟಲ್ಸ್ ಗೆ ಕ್ಯಾಪ್ಟನ್ಸ್ ಪದೇ ಪದೇ ಬದಲಾಗ್ತಿರೋದು ಕೂಡಾ ಮೈನ್ ಪ್ರಾಬ್ಲಂ. 15 ಸೀಸನ್ ಗಳಲ್ಲಿ 13 ಕ್ಯಾಪ್ಟನ್ಸ್ ಬದಲಾಗಿದ್ದಾರೆ. ದೆಹಲಿಗೆ ಕ್ವಾಲಿಟಿ ಓಪನರ್ಸ್ ಸಿಕ್ಕಿಲ್ಲ. ಕಳೆದ ಬಾರಿಯೂ ವಾರ್ನರ್-ಪೃಥ್ವಿ ಶಾ ಇದ್ರೂ ಚೆನ್ನಾಗಿ ಪರ್ಫಾಮ್ ಮಾಡಿಲ್ಲ. ಓಪನಿಂಗ್ ನಲ್ಲಿ ಒಳ್ಳೆಯ ಪಾಟ್ನರ್ ಶಿಪ್ ಆಗಿಲ್ಲ. ಆಲ್ರೌಂಡರ್ ಗಳ ಕೊರತೆಯಿದೆ. ಆದರೆ, ಈ ಬಾರಿ ರಿಷಭ್ ಪಂತ್ ಭರ್ಜರಿಯಾಗಿಯೇ ಕಮ್‌ಬ್ಯಾಕ್ ಮಾಡ್ತಿರುವುದು ತಂಡಕ್ಕೆ ಜೋಶ್ ತಂದಿದೆ. ಜೊತೆಗೆ ಬರೋಬ್ಬರಿ 4 ಕೋಟಿ ರೂಪಾಯಿಗೆ ಹ್ಯಾರಿ ಬ್ರೂಕ್ ರನ್ನ ಡಿಸಿ ಖರೀದಿಸಿದೆ. ಇವರ ಆಗಮನದಿಂದ ತಂಡಕ್ಕೆ ಹೊಸ ಹುಮ್ಮಸ್ಸು ಬಂದಿದೆ.  ಬ್ಯಾಟಿಂಗ್‌ನಲ್ಲಿ ವಾರ್ನರ್‌, ಪೃಥ್ವಿ ಶಾ ಅವರನ್ನೆ ನೆಚ್ಚಿಕೊಂಡಿರುವ ತಂಡಕ್ಕೆ ರಿಷಬ್‌ ಪಂತ್‌ ಸೇರ್ಪಡೆಯಿಂದ ಹೊಸ ಶಕ್ತಿ ಬಂದಿದೆ.. ಜೊತೆಗೆ ವೆಸ್ಟ್ಇಂಡೀಸ್‌ನ ಶಾಹಿ ಹೋಪ್‌ಗೆ ಚಾನ್ಸ್‌ ಸಿಗುತ್ತಾ ನೋಡಬೇಕಿದೆ..  ಆಲ್‌ರೌಂಡರ್‌ಗಳಾದ ಮಿಚೆಲ್‌ ಮಾರ್ಷ್‌ ಮತ್ತು ಅಕ್ಸರ್‌ ಪಟೇಲ್‌ ಬಲ ತುಂಬಬಹುದು.. ಆದ್ರೆ ಬೌಲಿಂಗ್‌ ಯುನಿಟ್‌ ಮಾತ್ರ ಸಿಕ್ಕಾಪಟ್ಟೆ ಚೆನ್ನಾಗಿದೆ.. ಆನ್ರಿಚ್‌ ನಾರ್ಜೆ ಜೊತೆಗೆ ಇಂಡಿಯನ್‌ ಬೌಲರ್‌ಗಳಾದ ಖಲೀಲ್‌ ಅಹಮದ್‌, ಮುಕೇಶ್‌ ಕುಮಾರ್‌, ಇಶಾಂತ್‌ ಶರ್ಮಾರಲ್ಲಿ ಯಾರು ಸ್ಥಾನ ಪಡೆಯುತ್ತಾರೆಂದು ನೋಡಬೇಕಿದೆ.. ಸ್ಪಿನ್‌ ಮಾಂತ್ರಿಕ ಕುಲ್‌ದೀಪ್‌ ಯಾದವ್‌ ಮತ್ತು ಅಕ್ಸರ್‌ ಪಟೇಲ್‌ ಬೌಲಿಂಗ್‌ನಲ್ಲಿ ಯಾವತ್ತಿದ್ದರೂ ಎದುರಾಳಿಗಳಿಗೆ ಡೇಂಜರಸ್‌.. ಹೀಗೆ ಡಿಸಿ ಕೂಡ ಹೊಸ ಹುಮ್ಮಸ್ಸಿನಲ್ಲಿ ಆಡಲು ರೆಡಿಯಾಗಿದೆ.. ಇದರಲ್ಲಿ ಯಾರು ಗೆದ್ದು ಬೀಗುತ್ತಾರೆಂದು ನೋಡಬೇಕಿದೆ..

Sulekha