ಮಾಡು ಇಲ್ಲವೇ ಮಡಿ ಪರಿಸ್ಥಿತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ – ಗೆಲ್ಲಲೇ ಬೇಕಾದ ಅನಿವಾರ್ತೆಯಲ್ಲಿ ಗುಜರಾತ್ ಟೈಟಾನ್ಸ್

ಮಾಡು ಇಲ್ಲವೇ ಮಡಿ ಪರಿಸ್ಥಿತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ – ಗೆಲ್ಲಲೇ ಬೇಕಾದ ಅನಿವಾರ್ತೆಯಲ್ಲಿ ಗುಜರಾತ್ ಟೈಟಾನ್ಸ್

ಸತತ ಸೋಲುಗಳೊಂದಿಗೆ ಕಂಗೆಟ್ಟಿರುವ ಡೆಲ್ಲಿ ಕ್ಯಾಪಿಟಲ್ಸ್ ಗೆ ಈಗ ಮಾಡು ಇಲ್ಲವೇ ಮಡಿ ಪರಿಸ್ಥಿತಿ ಬಂದಿದೆ. ಇವತ್ತು ನಿರ್ಣಾಯಕ ಕದನದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಡಿಸಿ ಸೆಣಸಾಡಲಿದೆ. ಅತ್ತ ಡೆಲ್ಲಿ ವಿರುದ್ಧ ಮೊದಲ ಮುಖಾಮುಖಿಯಲ್ಲಿ ಸೋತಿದ್ದ ಗುಜರಾತ್ ಇದೀಗ ಸೇಡು ತೀರಿಸಿಕೊಳ್ಳುವ ಕಾತರದಲ್ಲಿದೆ.

ಇದನ್ನೂ ಓದಿ: ತವರಿನಲ್ಲೇ ಚೆನ್ನೈಗೆ ಹೀನಾಯ ಸೋಲು – ಲಕ್ನೋ ಸೂಪರ್​ ಜೈಂಟ್ಸ್ ಗೆ 6 ವಿಕೆಟ್‌ ಜಯ

ರಿಷಭ್ ಪಂತ್ ನಾಯಕತ್ವದ ಡಿಸಿ ಟೀಮ್ 8 ಪಂದ್ಯಗಳನ್ನಾಡಿದ್ದು, ಕೇವಲ 3ರಲ್ಲಿ ಗೆದ್ದಿದೆ. ಪ್ಲೇ-ಆಫ್ ರೇಸ್‌ನಲ್ಲಿ ಉಳಿಯಬೇಕಿದ್ದರೆ ಇವತ್ತಿನ ಪಂದ್ಯ ಗೆಲ್ಲಲೇ ಬೇಕಿದೆ. ತಂಡದ ಸ್ಟಾರ್ ಬ್ಯಾಟ್ಸಮನ್ ಕೈಕೊಡ್ತಿದ್ದಾರೆ. ಡೇವಿಡ್ ವಾರ್ನರ್, ಪೃಥ್ವಿ ಶಾ ನಿರೀಕ್ಷೆಗೆ ತಕ್ಕಂತೆ ಬ್ಯಾಟ್ ಬೀಸ್ತಿಲ್ಲ. ರಿಷಭ್ ಪಂತ್ ಕೂಡಾ ದೊಡ್ಡ ಇನ್ನಿಂಗ್ಸ್ ಕಟ್ಟಬೇಕಿದೆ. 10 ವಿಕೆಟ್ ಕಿತ್ತಿರುವ ಕುಲೀಪ್ ಯಾದವ್ ಡೆಲ್ಲಿಯ ಶ್ರೇಷ್ಠ ಬೌಲರ್ ಎನಿಸಿಕೊಂಡಿದ್ದು ಬಿಟ್ರೆ ಬೇರೆ ಬೌಲರ್ಸ್ ಅಬ್ಬರಿಸ್ತಿಲ್ಲ.

ಗುಜರಾತ್ ಟೀಮ್ ಕೂಡಾ ಗೆಲುವಿನ ಹಳಿ ತಪ್ಪಿದೆ. ಹೀಗಾಗಿ ಡಿಸಿ ವಿರುದ್ಧ ಜಿಟಿ ಗೂ ಗೆಲ್ಲಲೇ ಬೇಕಾದ ಅನಿವಾರ್ಯತೆ ಎದುರಾಗಿದೆ. ಗುಜರಾತ್ ತಂಡ 8 ಪಂದ್ಯದಲ್ಲಿ 4 ಗೆಲುವು ಕಂಡಿದ್ರೆ ನಾಲ್ಕರಲ್ಲಿ ಸೋಲು ಕಂಡಿದೆ. ರಶೀದ್ ಖಾನ್, ರಾಹುಲ್ ಅವಾಟಿಯಾ ಮೇಲೆ ಈ ಟೀಮ್ ಡಿಪೆಂಡ್ ಆಗಿದೆ. ಕ್ಯಾಪ್ಟನ್ ಶುಬ್ಮನ್ ಗಿಲ್ ಕೂಡಾ ದೊಡ್ಡ ಇನ್ನಿಂಗ್ಸ್ ಕಟ್ಟಬೇಕಿದೆ.

ಡೆಲ್ಲಿ ಕ್ಯಾಪಿಟಲ್ಸ್: ಪೃಥ್ವಿ ಶಾ, ಡೇವಿಡ್ ವಾರ್ನರ್, ಜೇಕ್ ಫೇಸರ್, ಅಭಿಷೇಕ್ ಪೊರೆಲ್, ರಿಷಭ್ ಪಂತ್ (ನಾಯಕ), ಟ್ರಿಸ್ಟನ್ ಸ್ಟಬ್, ಅಕ್ಷರ್ ಪಟೇಲ್, ಕುಲೀಪ್ ಯಾದವ್, ಮುಕೇಶ್‌ ಕುಮಾರ್, ಇಶಾಂತ್ ಶರ್ಮಾ, ಖಲೀಲ್ ಅಹ್ಮದ್‌.

ಗುಜರಾತ್ ಟೈಟಾನ್ಸ್: ಶುಭಮನ್ ಗಿಲ್(ನಾಯಕ), ವೃದ್ಧಿಮಾನ್ ಸಾಹ, ಡೇವಿಡ್ ಮಿಲ್ಲರ್, ಅಝ್ಮತುಲ್ಲಾ ಓವರ್‌ಝೈ, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಸಾಯಿ ಕಿಶೋರ್, ನೂರ್ ಅಹ್ಮದ್‌, ಸಂದೀಪ್ ವಾರಿಯರ್, ಮೋಹಿತ್ ಶರ್ಮಾ.

 

Sulekha