ಕಿಂಗ್ ಕೊಹ್ಲಿ ಕೆಣಕಿದ DC – ಇಷ್ಟದ ಫುಡ್ ನೆಪದಲ್ಲಿ ಟಾರ್ಗೆಟ್
ಡೆಲ್ಲಿಗೆ ವಿರಾಟ ರೂಪ ತೋರಿಸ್ತಾರಾ?

ಬೆಂಗಳೂರು ವರ್ಸಸ್ ಡೆಲ್ಲಿ ನಡುವಿನ ಪೈಪೋಟಿಗೆ ಕೌಂಟ್ಡೌನ್ ಶುರುವಾಗಿದೆ. ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿರೋ ಈ ಪಂದ್ಯದಲ್ಲಿ ಗೆಲ್ಲೋಕೆ ಎರಡೂ ತಂಡಗಳು ಈಗಾಗ್ಲೇ ಭರ್ಜರಿ ಪ್ರಾಕ್ಟೀಸ್ನೂ ಕೂಡ ಮಾಡ್ತಿವೆ. ಆದ್ರೆ ಪಂದ್ಯಕ್ಕೂ ಮುನ್ನ ಡಿಸಿ ಫ್ರಾಂಚೈಸಿ ಕಿಚ್ಚು ಹಚ್ಚಿದೆ. ಬೆಂಗಳೂರಿಗೆ ಬಂದಿಳಿದ ಡೆಲ್ಲಿ ಆಟಗಾರರನ್ನ ಕರೆತಂದ ಡಿಸಿ ಫ್ರಾಂಚೈಸಿಯ ಹಿಂಭಾಗದ ನಂಬರ್ ಪ್ಲೇಟ್ ಕೆಳಭಾಗದಲ್ಲಿ ಒಂದು ಪ್ರಶ್ನೆಯನ್ನ ಕೇಳೋ ರೀತಿ ಬರಹ ಬರೆಯಲಾಗಿತ್ತು. ಈ ಬರಹವೇ ನಾನಾ ಸ್ವರೂಪ ಪಡೆದಿದೆ.
ಇದನ್ನೂ ಓದಿ : ರಾಜಸ್ಥಾನ್ ರಾಯಲ್ಸ್ ವಿರುದ್ಧ ಗುಜರಾತ್ಗೆ ಗೆಲುವು – ಪಾಯಿಂಟ್ಸ್ ಪಟ್ಟಿಯಲ್ಲಿ No.1ಸ್ಥಾನ ಪಡೆದ GT
ಯೆಸ್.. ಇದೇ ಬರಹ ಈಗ ಕೊಹ್ಲಿ ಅಭಿಮಾನಿಗಳ ಗಮನ ಸೆಳೆದಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬಸ್ನ ಹಿಂಭಾಗದಲ್ಲಿ Anyone up for some ದಾಲ್ ಮಖಾನಿ, ಪನೀರ್ ಖುರ್ಚನ್ ಮತ್ತು ಗಾರ್ಲಿಕ್ ನಾನ್ ಎಂದು ಬರೆಯಲಾಗಿದೆ. ಅಂದ್ರೆ ಯಾರಾದ್ರೂ ದಾಲ್ ಮಖಾನಿ, ಪನೀರ್ ಖುರ್ಚನ್ ಮತ್ತು ಗಾರ್ಲಿಕ್ ನಾನ್‌ಗೆ ಸಿದ್ಧರಿದ್ದೀರಾ ಎನ್ನುವ ಪ್ರಶ್ನೆ ಇದು. ಌಕ್ಚುಲಿ ಕಿಂಗ್ ವಿರಾಟ್ ಕೊಹ್ಲಿಯ ಫೇವರೆಟ್ ಡಿಷಸ್ ಇವು. ಭಾರತೀಯ ಫುಟ್ಬಾಲ್ ದಂತಕತೆ ಸುನಿಲ್ ಛೆಟ್ರಿ ಅವರ ಜೊತೆ ಇನ್ಸ್ಟಾಗ್ರಾಂ ಲೈವ್ ಚಾಟ್ನಲ್ಲಿ ಕೊಹ್ಲಿ ತಾವು ಇಷ್ಟಪಟ್ಟು ತಿನ್ನೋ ಡಿಷಸ್ಗಳನ್ನ ಹೇಳಿದ್ರು. ಸೋ ಇದನ್ನೇ ಉಲ್ಲೇಖ ಮಾಡಿ ಈ ರೀತಿಯಾಗಿ ಡೆಲ್ಲಿ ತಂಡ ಟಾಂಟ್ ಕೊಡೋ ರೀತಿಯಲ್ಲಿ ಟೆಕ್ಸ್ಟ್ ಹಾಕಿದೆ ಎನ್ನಲಾಗ್ತಿದೆ. ಆದ್ರೆ ಡಿಸಿಯವ್ರಿಗೆ ಗೊತ್ತಿದೆ. ಯಾಮಾರಿದ್ರೆ ಕೊಹ್ಲಿ ಅವ್ರ ಇಡೀ ತಂಡವನ್ನೇ ತಿಂದು ಬಿಡ್ತಾರೆ ಅನ್ನೋದು. ಯಾಕಂದ್ರೆ ಡೆಲ್ಲಿ ವಿರುದ್ಧ ಕೊಹ್ಲಿ ರೆಕಾರ್ಡ್ಸ್ ಅದ್ಭುತವಾಗಿದೆ.
ನಿಜ ಹೇಳ್ಬೇಕಂದ್ರೆ ಡೆಲ್ಲಿ ತಂಡಕ್ಕೆ ಕಿಂಗ್ ವಿರಾಟ್ ಕೊಹ್ಲಿಯೇ ವಿಲನ್. ಯಾಕಂದ್ರೆ ಡಿಸಿ ವಿರುದ್ಧ ಕೊಹ್ಲಿ ರನ್ ಮಳೆಯನ್ನೇ ಹರಿಸಿದ್ದಾರೆ. ಅದ್ಭುತ ದಾಖಲೆ ಹೊಂದಿದ್ದಾರೆ. ಲೀಗ್ ಇತಿಹಾಸದಲ್ಲಿ ಡೆಲ್ಲಿ ವಿರುದ್ಧ 29 ಪಂದ್ಯಗಳನ್ನ ಆಡಿರೋ ವಿರಾಟ್ 134.99ರ ಸ್ಟ್ರೈಕ್ರೇಟ್ನಲ್ಲಿ 1,057 ರನ್ ಗಳಿಸಿದ್ದಾರೆ. ಅದೂ ಕೂಡ 50.33ರ ಸರಾಸರಿಯಲ್ಲಿ. ಪ್ರಸ್ತುತ ಈ ಸೀಸನ್ನಲ್ಲೂ ಸಾಲಿಡ್ ಫಾರ್ಮ್ನಲ್ಲಿದ್ದಾರೆ. ಕಳೆದ ನಾಲ್ಕು ಪಂದ್ಯಗಳಿಂದ 143.85ರ ಸ್ಟ್ರೈಕ್ರೇಟ್ನಲ್ಲಿ 164 ರನ್ ಬಾರಿಸಿದ್ದಾರೆ. ಆರ್ಸಿಬಿ ಪರ ಹೈಯೆಸ್ಟ್ ರನ್ ಸ್ಕೋರರ್ ಆಗಿದ್ದಾರೆ. ಇನ್ನು ಐಪಿಎಲ್ ಕರಿಯರ್ನಲ್ಲಿ ಒಟ್ಟಾರೆ 256 ಪಂದ್ಯಗಳನ್ನ ಆಡಿರೋ ವಿರಾಟ್ ಕೊಹ್ಲಿ 8,168 ರನ್ ಬಾರಿಸಿದ್ದಾರೆ. ಹೈಯೆಸ್ಟ್ ರನ್ 113. ಇದ್ರಲ್ಲಿ 8 ಶತಕಗಳು ಹಾಗೇ 57 ಅರ್ಧಶತಕಗಳೂ ಸೇರಿವೆ. ಅಲ್ದೇ ಐಪಿಎಲ್ನಲ್ಲಿ ಸೀಸನ್ನಲ್ಲಿ ಹೈಯೆಸ್ಟ್ ಸ್ಕೋರ್, ಸೆಂಚುರೀಸ್ ಸೇರಿದಂತೆ ಸಾಕಷ್ಟು ರೆಕಾರ್ಡ್ಸ್ ಕೊಹ್ಲಿ ಹೆಸರಲ್ಲೇ ಇವೆ.