RAP*E ಕೇಸ್.. ಅಭಿಷೇಕ್ ಪೊರೆಲ್ ಅರೆಸ್ಟ್ – ಕರ್ನಾಟಕದ ಯುವತಿಗೆ ಮೋಸ ಮಾಡಿದ್ರಾ?
ಮದುವೆ ನೆಪ.. 3 ವರ್ಷ ಸಲ್ಲಾಪ.. ಆಗಿದ್ದೇನು?

RAP*E ಕೇಸ್.. ಅಭಿಷೇಕ್ ಪೊರೆಲ್ ಅರೆಸ್ಟ್ – ಕರ್ನಾಟಕದ ಯುವತಿಗೆ ಮೋಸ ಮಾಡಿದ್ರಾ?ಮದುವೆ ನೆಪ.. 3 ವರ್ಷ ಸಲ್ಲಾಪ.. ಆಗಿದ್ದೇನು?

ಕ್ರಿಕೆಟರ್​ಗಳಿಗೆ ಪ್ರೊಫೆಷನಲ್ ಕೆರಿಯರ್​ ಗ್ರೋತ್ ಬಗ್ಗೆ ಫೋಕಸ್ ಮಾಡೋದು ಎಷ್ಟು ಮುಖ್ಯವೂ ಪರ್ಸನಲ್ ಲೈಫ್​ನೂ ಕೂಡ ಅಷ್ಟೇ ಕ್ಲೀನ್ ಌಂಡ್ ಕ್ಲಿಯರ್ ಆಗಿ ಇಟ್ಕೊಳ್ಳೋದು ಅಷ್ಟೇ ಮುಖ್ಯ. ಸ್ವಲ್ಪ ಯಾಮಾರಿದ್ರೂ ಎರಡೂ ಒಟ್ಟೊಟ್ಟಿಗೆ ಸ್ಪಾಯ್ಲ್ ಆಗಿ ಬಿಡುತ್ತೆ. ಈಗ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರ ಅಭಿಷೇಕ್ ಪೊರೆಲ್ ಪರಿಸ್ಥಿತಿ ಹಾಗೇ ಆಗಿದೆ. ಐಪಿಎಲ್​ನಲ್ಲಿ ಮಿಂಚೋಕೆ ಶುರು ಮಾಡಿದ್ದ ಈ ಯಂಗ್ ಪ್ಲೇಯರ್ ಈಗ ಅರೆಸ್ಟ್ ಆಗಿದ್ದಾರೆ. ಅದೂ ಕೂಡ ಮದುವೆಯಾಗೋದಾಗಿ ಸರಸ ಸಲ್ಲಾಪ ಆಡಿ ಯುವತಿಗೆ ಮೋಸ ಮಾಡಿದ್ದಾರೆ ಅನ್ನೋ ಆರೋಪದಲ್ಲಿ. ಕರ್ನಾಟಕ ಮೂಲಕ ವೈದ್ಯಕೀಯ ವಿದ್ಯಾರ್ಥಿನಿ ನೀಡಿದ್ದ ಕಂಪ್ಲೇಂಟ್ ಕ್ರಿಕೆಟರ್​ಗೆ ಕಂಟಕವಾಗಿದೆ.

ಇದನ್ನೂ ಓದಿ :  ಲಂಕೆಯಲ್ಲಿ KL & ಪಡಿಕ್ಕಲ್ ಪರಾಕ್ರಮ – ಟೀಂ ಇಂಡಿಯಾಗೆ ಕೈಕೊಡುತ್ತಾ ಬ್ಯಾಟಿಂಗ್?

ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ವಿಕೆಟ್ ಕೀಪರ್ ಕಂ ಬ್ಯಾಟರ್ ಆಗಿರುವ ಬಂಗಾಳದ ಕ್ರಿಕೆಟಿಗ ಅಭಿಷೇಕ್ ಪೊರೆಲ್ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಯುವತಿಗೆ ಮೋಸ ಮಾಡಿದ್ದಲ್ಲದೆ ಆಕೆ ಮೇಲೆ ಹಲ್ಲೆ ಮಾಡಿದ್ದಾರೆ. ಹಾಗೇ ಜೀವ ಬೆದರಿಕೆ ಹಾಕಿದ್ದಾರೆ ಎನ್ನುವ ಗಂಭೀರ ಆರೋಪದಲ್ಲಿ ಲಾಕ್ ಮಾಡಿದ್ದಾರೆ.  ವೈದ್ಯಕೀಯ ವಿದ್ಯಾರ್ಥಿನಿ ನೀಡಿದ್ದ ಕಂಪ್ಲೇಂಟ್ ಆಧರಿಸಿ ಹೂಗ್ಲಿ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಎಸ್​ಪಿ ಕುನ್ವರ್ ಭೂಷಣ್ ಸಿಂಗ್ ಕೂಡ ಕನ್ಫರ್ಮ್ ಮಾಡಿದ್ದಾರೆ.

ಮದುವೆಯಾಗುತ್ತೇನೆಂದು ಕರ್ನಾಟಕ ಮೂಲದ ಯುವತಿಗೆ ಮೋಸ!

ಸದ್ಯ ಸಂತ್ರಸ್ತ ಯುವತಿ ಕರ್ನಾಟಕ ಮೂಲದವರಾಗಿದ್ದು ಬಂಗಾಳದಲ್ಲಿ ಮೆಡಿಕಲ್ ವ್ಯಾಸಂಗ ಮಾಡ್ತಿದ್ರು. ಯುವತಿ ನೀಡಿರೋ ಕಂಪ್ಲೇಂಟ್ ಪ್ರಕಾರ ಇಬ್ಬರೂ ಕೂಡ ಕಳೆದ ಮೂರು ವರ್ಷಗಳಿಂದ ಲವ್​ನಲ್ಲಿದ್ದರು. ಕಳೆದ ವರ್ಷದಿಂದ ಇಬ್ಬರ ನಡುವೆ ಮಿಸ್ ಅಂಡರ್ ಸ್ಟಾಂಡಿಂಗ್ ಇತ್ತು. ಆಗಿಂದ ಪೊರೆಲ್ ಆಕೆಯನ್ನ ಅವಾಯ್ಡ್ ಮಾಡತೊಡಗಿದ್ರು. ಆದ್ರೆ ಮದುವೆಯಾಗುವುದಾಗಿ ಹೇಳಿ ತನ್ನ ಜೊತೆ ದೈಹಿಕ ಸಂಬಂಧ ಬೆಳೆಸಿದ್ದರು ಆದ್ರೀಗ ಮದುವೆಯಾಗಲು ನಿರಾಕರಿಸಿ ಹೊಡೆದಿದ್ದಾರೆ. ಬೆದರಿಕೆ ಹಾಕಿದ್ದಾರೆ ಎಂದು ಜೂನ್ ತಿಂಗಳಿನಲ್ಲಿ  ದೂರು ದಾಖಲಿಸಿದ್ದರು. ಇನ್ನು ಅಭಿಷೇಕ್ ಪೊರೆಲ್ ಯುವತಿಯನ್ನ ಮನೆಯಲ್ಲಿ ಕೂಡಿ ಹಾಕಿ ಊಟ ಕೊಡದೆ ಟಾರ್ಚರ್ ಮಾಡ್ತಿದ್ರು ಅನ್ನೋದನ್ನೂ ಉಲ್ಲೇಖಿಸಿದ್ರು. ಆ ನಂತ್ರದಲ್ಲಿ ಮನೆಯಿಂದ ತಪ್ಪಿಸಿಕೊಂಡಿದ್ದಾಗಿ ಕಂಪ್ಲೇಂಟ್ ನೀಡಿದರು. ಪ್ರಕರಣದ ತನಿಖೆ ನಡೆಸಿದ ಕೊಲ್ಕತ್ತಾ ಹೈಕೋರ್ಟ್, ಕ್ರಿಕೆಟಿಗ ಅಭಿಷೇಕ್ ಪೊರೆಲ್ ಅವರನ್ನು ಬಂಧಿಸುವಂತೆ ಪೊಲೀಸರಿಗೆ ಸೂಚನೆ ನೀಡಿತ್ತು. ನ್ಯಾಯಾಲಯದ ನಿರ್ದೇಶನದ ಬೆನ್ನಲ್ಲೇ ಪೊಲೀಸರು ಪೊರೆಲ್​ರನ್ನ ಬಂಧಿಸಿದ್ದಾರೆ. ಆದ್ರೆ ತಮ್ಮ ಮೇಲಿನ ಆರೋಪಗಳನ್ನೆಲ್ಲಾ ಪೊರೆಲ್ ನಿರಾಕರಿಸಿದ್ದಾರೆ.

ಇನ್ನು ಪೊರೆಲ್ ಅವ್ರ ಕ್ರಿಕೆಟ್ ಕೆರಿಯರ್ ಬಗ್ಗೆ ನೋಡೋದಾದ್ರೆ ಎಡಗೈ ಟಾಪ್ ಆರ್ಡರ್ ಬ್ಯಾಟರ್ ಆಗಿರುವ ಅಭಿಷೇಕ್ ಪೊರೆಲ್ 2023 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮೂಲಕ ಐಪಿಎಲ್‌ಗೆ ಪದಾರ್ಪಣೆ ಮಾಡಿದರು. 2024 ಮತ್ತು 2025 ರ ಸೀಸನ್‌ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕಾರಣ ಇವರನ್ನು ₹4 ಕೋಟಿ ನೀಡಿ ತಂಡದಲ್ಲೇ ಉಳಿಸಿಕೊಳ್ಳಲಾಗಿತ್ತು. ಕಳೆದ ಐಪಿಎಲ್ ಋತುವಿನಲ್ಲಿ ಅವರು 4 ಇನ್ನಿಂಗ್ಸ್‌ಗಳಿಂದ 108 ರನ್ ಗಳಿಸಿದ್ದರು. 2021-22ರ ಋತುವಿನಲ್ಲಿ ಬಂಗಾಳ ತಂಡದ ಪರ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಇವರು, ಭಾರತ ‘ಎ ತಂಡದ ಪರ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಪ್ರವಾಸಗಳಲ್ಲೂ ಭಾಗವಹಿಸಿದ್ದರು. ಪೊರೆಲ್‌ಗೆ 32 ಪ್ರಥಮ ದರ್ಜೆ ಹಾಗೂ 23 ಲಿಸ್ಟ್-ಎ ಪಂದ್ಯಗಳನ್ನು ಆಡಿದ್ದಾರೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ದೆಹಲಿ ವಿರುದ್ಧ ಕೇವಲ 130 ಎಸೆತಗಳಲ್ಲಿ ಅಜೇಯ 170 ರನ್ ಬಾರಿಸಿದ್ದು ಹಾಗೂ ಚಂಡೀಗಢ ವಿರುದ್ಧ 84 ಎಸೆತಗಳಲ್ಲಿ 106 ರನ್ ಗಳಿಸಿದ್ದು ಇವರ ದೇಶೀಯ ಕ್ರಿಕೆಟ್‌ನ ಅತ್ಯುತ್ತಮ ಇನ್ನಿಂಗ್ಸ್‌ಗಳಾಗಿವೆ. ಈಗಷ್ಟೇ ಐಪಿಎಲ್​ನಲ್ಲಿ ಮಿಂಚೋ ಮೂಲಕ ಮುಂದಿನ ದಿನಗಳಲ್ಲಿ ಟೀಂ ಇಂಡಿಯಾಗೂ ಕಾಲಿಡೋ ಪ್ಲ್ಯಾನ್​ನಲ್ಲಿದ್ರು. ಆದ್ರೆ ಅವ್ರ ಪರ್ಸನಲ್ ಲೈಫ್​ನ ಈ ಸುನಾಮಿ ಅವ್ರ ಕ್ರಿಕೆಟ್ ಕೆರಿಯರ್ ಮೇಲೆ ಅತಿದೊಡ್ಡ ಪರಿಣಾಮ ಬೀರಲಿದೆ. ಈಗಾಗ್ಲೇ ಆರ್​ಸಿಬಿ ಪರ 2025ರಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಯಶ್ ದಯಾಳ್ ಕೂಡ ಇಂಥದ್ದೇ ಕೇಸ್​ನಲ್ಲಿ ಸಿಲುಕಿ 2026ರ ಐಪಿಎಲ್​ನಿಂದಲೇ ಹೊರಗುಳಿದಿದ್ರು. ಹಾಗೇ ಉತ್ತರ ಪ್ರದೇಶ ಪರ ಡೊಮೆಸ್ಟಿಕ್ ಕ್ರಿಕೆಟ್​ನಲ್ಲೂ ಅವಕಾಶ ಸಿಕ್ಕಿರಲಿಲ್ಲ. ಈಗ ಪೊರೆಲ್ ಅರೆಸ್ಟ್ ಕೂಡ ಆಗಿರೋದ್ರಿಂದ ಮುಂದಿನ ದಿನಗಳಲ್ಲಿ ಅವ್ರ ಕ್ರಿಕೆಟ್ ಅವಕಾಶಗಳ ಬಗ್ಗೆ ಬಹುದೊಡ್ಡ ಪ್ರಶ್ನೆಯೂ ಎದ್ದಿದೆ.

Shantha Kumari