ದೆಹಲಿ ಚಳಿಗಾಲದ ಅಧಿವೇಶನ  – ಆಮ್ಲಜನಕ ಸಿಲಿಂಡರ್ ನೊಂದಿಗೆ ಸದನಕ್ಕೆ ಆಗಮಿಸಿದ ಬಿಜೆಪಿ ಶಾಸಕರು

ದೆಹಲಿ ಚಳಿಗಾಲದ ಅಧಿವೇಶನ  – ಆಮ್ಲಜನಕ ಸಿಲಿಂಡರ್ ನೊಂದಿಗೆ ಸದನಕ್ಕೆ ಆಗಮಿಸಿದ ಬಿಜೆಪಿ ಶಾಸಕರು

ನವದೆಹಲಿ: ದೆಹಲಿ ವಿಧಾನಮಂಡಲದ ಚಳಿಗಾಲ ಅಧಿವೇಶನ ಸೋಮವಾರ ಆರಂಭವಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಾಗಿದೆ. ಸರ್ಕಾರ ಮಾಲಿನ್ಯ ನಿಯಂತ್ರಣ ಮಾಡುವಲ್ಲಿ ವಿಫಲವಾಗಿದೆ ಎಂದು ಬಿಜೆಪಿ ಶಾಸಕರು ಆಮ್ಲಜನಕ ಸಿಲಿಂಡರ್ ನೊಂದಿಗೆ ಸದನಕ್ಕೆ ಆಗಮಿಸಿ, ದೆಹಲಿ ಸರ್ಕಾರದ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.

ವಿರೋಧ ಪಕ್ಷದ ನಾಯಕ ಗಪ್ತಾ,  ರಾಮ್ ವೀರ್ ಸಿಂಗ್ ಬಿದ್ಗುರಿ, ಒಪಿ ಶರ್ಮ ಮತ್ತು ಅಭಯ್ ವರ್ಮಾ ಆಮ್ಲಜನಕ ಸಿಲಿಂಡರ್ ನೊಂದಿದೆ ಸದನಕ್ಕೆ ಆಗಮಿಸಿದ್ದಾರೆ.

ಇದನ್ನೂ ಓದಿ: ಇನ್ಮುಂದೆ ಸಾಕು ನಾಯಿಗಳಿಗೂ ಟ್ಯಾಕ್ಸ್! – ನಗರಸಭೆಯಿಂದ ಬಂತು ಹೊಸ ರೂಲ್ಸ್…

ಈ ವೇಳೆ ಸಿಲಿಂಡರ್ ಸದನದ ಹೊರಗೆ ಬಿಟ್ಟು ಬರುವಂತೆ ವಿರೋಧ ಪಕ್ಷದ ನಾಯಕರಲ್ಲಿ, ಸ್ಪೀಕರ್ ರಾಮ ನಿವಾಸ್ ಗೋಯಲ್ ಸೂಚಿದ್ದಾರೆ.  ಅಲ್ಲದೇ ಇಷ್ಟು ಭದ್ರತೆಯಿದ್ದರೂ ಆಮ್ಲಜನಕ ಸಿಲಿಂಡರ್ ಅನ್ನು ಸದನಕ್ಕೆ ತಂದಿದ್ದು ಹೇಗೆ ಎಂದು ಪ್ರಶ್ನಿಸಿದ್ದಾರೆ.

ಈ ಘಟನೆಯನ್ನು ಭದ್ರತಾ ಲೋಪ ಎಂದು ಪರಿಗಣಿಸಿದ್ದಾರೆ. ಅಲ್ಲದೇ ತಮ್ಮ ಕೊಠಡಿಗೆ ಭದ್ರತಾ ಸಿಬ್ಬಂದಿಗಳನ್ನು ಕರೆದು ಎಚ್ಚರಿಕೆ ನೀಡಿದ್ದಾರೆ.

 

suddiyaana