RCB ಸತತ ಸೋಲು.. ಸಿಡಿಯುತ್ತಿದ್ದ ಕೊಹ್ಲಿ ಮನಸ್ಸಲ್ಲಿ ಅದೆಂಥಾ ನೋವಿದೆ ಗೊತ್ತಾ?
ಆರ್ಸಿಬಿ ತನ್ನ ಸೂಪರ್ ಸ್ಟಾರ್ ಆಟಗಾರರ ಹೊರತಾಗಿಯೂ ಮುಗ್ಗರಿಸಿದೆ.. ಕಿಂಗ್ ಕೊಹ್ಲಿ ಘರ್ಜಿಸದಿದ್ದರೆ ಆರ್ಸಿಬಿಯ ಉಳಿದ ಆಟಗಾರರಿಗೆ ಬ್ಯಾಟಿಂಗೇ ಬರಲ್ಲ ಎಂಬಂತಾಗಿದೆ.. ಇದು ಕೊಹ್ಲಿಯನ್ನು ಎಲ್ಲರಿಗಿಂತ ಹೆಚ್ಚು ಹರ್ಟ್ ಮಾಡಿದಂತಿದೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸೋತ ನಂತರ ಆರ್ಸಿಬಿಯ ಡ್ರೆಸ್ಸಿಂಗ್ ರೂಂನಲ್ಲಿ ನಡೆದ ಘಟನೆಯನ್ನು ನೋಡಿದ್ರೆ ಈ ಟೀಂ ಪ್ಲೇ ಆಫ್ ಆಸೆಯನ್ನೇ ಕೈಬಿಟ್ಟಿದೆಯೇ ಎಂಬಂತಾಗಿದೆ.. ಇಷ್ಟಕ್ಕೂ ಆರ್ಸಿಬಿಯ ಡ್ರೆಸ್ಸಿಂಗ್ನಲ್ಲಿ ಏನಾಯ್ತು ಅನ್ನೋ ಮಾಹಿತಿ ಇಲ್ಲಿದೆ..
ಇದನ್ನೂ ಓದಿ: ಬೌಲರ್ಗ ಳಿಗೆ ನರೈನ್ ಎಚ್ಚರಿಕೆ! – ಆಲೌಟಾದ್ರೂ ಪಂತ್ ಮೆಚ್ಚುಗೆ ಗಳಿಸಿದ್ದೇಕೆ?
ಕೆ.ಎಲ್.ರಾಹುಲ್ ನೇತೃತ್ವದ ಎಲ್ಎಸ್ಜಿ ವಿರುದ್ಧ ಆರ್ಸಿಬಿ ಎಷ್ಟು ಕೆಟ್ಟದಾಗಿ ಸೋತಿದೆ ಅಂದ್ರೆ, ಐಪಿಎಲ್ನಲ್ಲಿ ಇವ್ರು ಆಡೋದೇ ಸೋಲೋದಕ್ಕಾ ಎಂಬ ಅನುಮಾನ ದಿನದಿಂದ ದಿನಕ್ಕೆ ಜಾಸ್ತಿಯಾಗುವಂತಾಗಿದೆ.. ಹಾಗಿದ್ದರೂ ಆರ್ಸಿಬಿ ಪ್ಯಾನ್ಸ್ ಮಾತ್ರ ತಮ್ಮ ತಂಡವನ್ನು ಬಿಟ್ಟುಕೊಡ್ತಿಲ್ಲ.. ಏನೇ ಇರಲಿ… ಒಗ್ಗಟ್ಟಿರಲಿ ಎಂಬ ರೀತಿಯಲ್ಲಿ ಆರ್ಸಿಬಿ ಫ್ಯಾನ್ಸ್ ತಮ್ಮ ಮೆಚ್ಚಿನ ತಂಡದ ಬೆನ್ನಿಗೆ ನಿಂತಿದ್ದಾರೆ.. ಈ ವಿಚಾರದಲ್ಲಿ ಮಾತ್ರ ಐಪಿಎಲ್ನ ಎಲ್ಲಾ ಟೀಂಗಳಿಗಿಂತಲೂ ಹೆಚ್ಚಿನ ಅದೃಷ್ಟವಂತ ಟೀಂ ಅಂದ್ರೆ ಅದು ಆರ್ಸಿಬಿ.. ಯಾಕಂದ್ರೆ ಇವರು ಕಪ್ ಗೆಲ್ಲದಿದ್ದರೂ ಎಲ್ಲಾ ಟೀಂಗಳಿಗಿಂತ ಹೆಚ್ಚು ಫ್ಯಾನ್ ಫಾಲೋವರ್ಸ್ ಹೊಂದಿರುವ ತಂಡ ಎಂಬ ಹೆಗ್ಗಳಿಕೆಯನ್ನು ಹೊಂದಿದೆ.. ಆದ್ರೆ ಎಲ್ಎಸ್ಜಿ ವಿರುದ್ಧದ ಸೋಲಿನ ನಂತರ ಆರ್ಸಿಬಿ ಮ್ಯಾನೇಜ್ಮೆಂಟ್ಗೂ ತಲೆ ಕೆಟ್ಟು ಹೋದಂತಿದೆ.. ಯಾಕಂದ್ರೆ ಇಡೀ ತಂಡ ಲೆಕ್ಕಗಿಂತ ಜಾಸ್ತಿಯೇ ಈಗ ಕಿಂಗ್ ಕೊಹ್ಲಿಯ ಮೇಲೆ ಅವಲಂಬಿತವಾಗಿದೆ..
ಮಿಸ್ಟರ್ ಕನ್ಸಿಸ್ಟೆನ್ಸಿ ಎನ್ನಿಸಿಕೊಂಡಿರುವ ಫಾಫ್ ಡು ಪ್ಲೆಸಿಸ್ ಕೂಡ ಫ್ಲಾಪ್ ಆಗ್ತಿದ್ದಾರೆ.. ಮ್ಯಾಕ್ಸಿಗಂತೂ ತಾನು ಬ್ಯಾಟ್ಸ್ಮನ್ ಅನ್ನೋದೇ ಮರೆತು ಹೋಗಿದೆ.. ಕೇವಲ ಬೌಲಿಂಗ್ನಲ್ಲಿ ಮಾತ್ರ ಟೀಂಗೆ ಬರ ಬಂದಿರುವ ಸ್ಪಿನ್ ವಿಭಾಗದಲ್ಲಿ ಸ್ವಲ್ಪ ಕೊಡುಗೆ ನೀಡ್ತಿದ್ದಾರೆ.. ಗ್ರೀನ್ಗೆ ಹದಿನೇಳೂವರೆ ಕೋಟಿ ಕೊಟ್ಟು ಖರೀದಿಸಿದ್ದು ಏಕೆ ಎಂಬುದೇ ಫ್ಯಾನ್ಸ್ಗೆ ಈಗಲೂ ಮಿಲಿಯನ್ ಡಾಲರ್ ಪ್ರಶ್ನೆ.. ಯಾಕಂದ್ರೆ ಈ ಗ್ರೀನ್.. ಬೌಲಿಂಗ್ನಲ್ಲೂ ಮಿಂಚುತ್ತಿಲ್ಲ.. ಬ್ಯಾಟಿಂಗ್ನಲ್ಲೂ ಹೊಡೆಯುತ್ತಿಲ್ಲ.. ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದ್ದಾರೆ ಈ ಕೋಟಿ ಕೋಟಿ ವೀರ.. ಉಳಿದಂತೆ ರಜತ್ ಪಟೀದಾರ್ ಟೀಂಗೆ ಚೆನ್ನಾಗಿಯೇ ಕಂಟ್ರಿಬ್ಯೂಟ್ ಮಾಡಬಲ್ಲ ಪ್ರತಿಭಾವಂತ ಆಟಗಾರ. ಆದ್ರೆ ಈ ಬಾರಿ ಪಟೀದಾರ್ಗೂ ಫಾರ್ಮ್ ಕೈಕೊಟ್ಟಿದೆ.. ಒಂದು ಮ್ಯಾಚ್ನಲ್ಲಿ ಆಡಿದ್ರೆ ಇನ್ನೊಂದ್ರಲ್ಲಿ ಎಡವ್ತಾರೆ.. ಹೀಗಾಗಿ ಅವರನ್ನೂ ನಂಬೋದು ಕಷ್ಟ.. ವಿಕೆಟ್ ಕೀಪರ್ ಅನುಜ್ ರಾವತ್ ಮೇಲೂ ಭರವಸೆ ಇಡುವಂತಿಲ್ಲ.. ದಿನೇಶ್ ಕಾರ್ತಿಕ್ ಮಾತ್ರ ತನ್ನ ಆಟವನ್ನು ಆಡ್ತಾರೆ.. ಆದ್ರೆ ಅವರಿಗೂ ಮ್ಯಾಚ್ ಫಿನಿಷ್ ಮಾಡೋದಿಕ್ಕೆ ಉಳಿದವರು ಸಾಥ್ ಕೊಟ್ರಷ್ಟೇ ಚೇಸಿಂಗ್ ಸಾಧ್ಯವಿದೆ ಎಂಬುದು ಸದ್ಯ ನಾವು ಕ್ವಿಕ್ ಆಗಿ ಆರ್ಸಿಬಿ ಪ್ಲೇಯರ್ಸ್ ನೋಡಿದ್ರೆ ಹೇಳಬಹುದು.. ಆದ್ರೆ ಎಲ್ಎಸ್ಜಿ ವಿರುದ್ಧದ ಮ್ಯಾಚ್ ಮುಗಿದ್ಮೇಲೆ ಡ್ರೆಸ್ಸಿಂಗ್ ರೂಂನಲ್ಲಿ ಟೀಂ ಮೀಟಿಂಗ್ ನಡೆದಿತ್ತು.. ಆ ಮೀಟಿಂಗ್ನಲ್ಲಿ ಕಿಂಗ್ ಕೊಹ್ಲಿಯ ಮುಖ ನೋಡಿದ್ರೆ.. ಅಯ್ಯೋ ಶಿವನೇ ಅಂತ ಅನ್ನಿಸದೇ ಇರಲು ಸಾಧ್ಯವೇ ಇಲ್ಲ.. ಪಾಪ ನೋಡಿ.. ಹೆಂಗೆ ಕುಳಿತಿದ್ದಾರೆ ಕಿಂಗ್ ಕೊಹ್ಲಿ.. ಈ ರೀತಿಯಲ್ಲಿ ಕೈಕಟ್ಟಿ ಕುಳಿತಿರುವ ಕಿಂಗ್ ಕೊಹ್ಲಿಯ ಪರಿಸ್ಥಿತಿ ನೋಡಿದ್ರೇನೇ ಆರ್ಸಿಬಿ ಎಂತಾ ಸ್ಥಿತಿಗೆ ತಲುಪಿದೆ ಎಂದು ಆರ್ಥವಾಗುತ್ತದೆ..
ಇನ್ನು ಕೊಹ್ಲಿ ಹೀಗೆ ಕೈಕಟ್ಟಿ ಕುಳಿತಿಕೊಳ್ಳೋದಿಕ್ಕೂ ಕಾರಣವೂ ಇದೆ.. ಅದೇನಂದ್ರೆ ಟೀಂ ಮೀಟಿಂಗ್ನಲ್ಲಿ ಆರ್ಸಿಬಿ ಕೋಚ್ ಆ್ಯಂಡಿ ಫ್ಲವರ್, ಸೋಲಿನ ಕಾರಣಗಳನ್ನು ವಿವರಿಸಿದ್ದಾರೆ..ಜೊತೆಗೆ ಇದೊಂದು ಕಠಿಣ ದಿನವಾಗಿತ್ತು. ಈ ರೂಂನಲ್ಲಿ ಕುಳಿತಿರುವ ಪ್ರತಿಯೊಬ್ಬರಿಗೂ ನೋವಾಗಿದೆ. ಆದರೆ ನಮ್ಮ ಮುಂದೆ ದೊಡ್ಡ ಅವಕಾಶಗಳಿವೆ. ಅವುಗಳಿಗೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎನ್ನುವುದು ಮುಖ್ಯ.. ಎಂದು ಹೆಡ್ ಕೋಚ್ ಆ್ಯಂಡಿ ಫ್ಲವರ್, ಆಟಗಾರರನ್ನು ಉದ್ದೇಶಿಸಿ ಮಾತಾಡಿದ್ದಾರೆ.. ಕೋಚ್ ಹೇಳಿದ ಅಷ್ಟೂ ನೋವು ಕೂಡ ಕಿಂಗ್ ಕೊಹ್ಲಿಯ ಮುಖದಲ್ಲಿ ವ್ಯಕ್ತವಾಗುತ್ತಿತ್ತು.. ಯಾವುದೇ ತಂಡಕ್ಕೆ ಸೋಲು ಹೊಸದೇನಲ್ಲ.. ಕೊಹ್ಲಿಗೂ ಕ್ರಿಕೆಟ್ನಲ್ಲಿ ಸೋಲುಗಳು ಮಾಮೂಲು.. ಆದ್ರೆ ಫ್ಯಾನ್ಸ್ಗೇ ಆರ್ಸಿಬಿ ಸೋಲಿನ ಬಗ್ಗೆ ಇಷ್ಟೆಲ್ಲಾ ಹರ್ಟ್ ಆಗಿರುವಾಗ ತಂಡದ ಗೆಲುವನ್ನೇ ಪ್ರತಿಷ್ಠೆಯಾಗಿ ಇಟ್ಟುಕೊಂಡಿರುವ ಕಿಂಗ್ ಕೊಹ್ಲಿಗೆ ಅದೆಷ್ಟು ನೋವಾಗಿರಬಹುದು ಎನ್ನುವುದನ್ನು ಊಹಿಸೋದು ಕಷ್ಟ. ಇದರ ನಡುವೆ ನಾಯಕ ಫಾಫ್ ಡುಪ್ಲೆಸಿಸ್ ಮಾತ್ರ, ಆಗಿದ್ದಾಯ್ತು.. ಇಂತ ಕೆಟ್ಟ ಪರಿಸ್ಥಿತಿಯಲ್ಲೂ ಫ್ಯಾನ್ಸ್ ಮಾತ್ರ ತಂಡವನ್ನು ಬಿಟ್ಟುಕೊಟ್ಟಿಲ್ಲ.. ನಿಮ್ಮಿಂದ ಸಿಕ್ಕಿರುವ ಅದ್ಭುತ ಬೆಂಬಲಕ್ಕೆ ಧನ್ಯವಾದ.. ಕಳೆದೆರಡು ಪಂದ್ಯಗಳಲ್ಲಿ ನಿಮ್ಮನ್ನು ನಿರಾಶೆಗೊಳಿಸಿದ್ದೇವೆ.. ಇದರಿಂದ ಟೀಂಗೂ ಸಿಕ್ಕಾಪಟ್ಟೆ ನೋವಾಗಿದೆ.. ಆದ್ರೆ ಮತ್ತೆ ನಾವು ಗೆಲುವಿನ ಟ್ರ್ಯಾಕ್ಗೆ ಮರಳುತ್ತೇವೆ ಎಂಬ ವಿಶ್ವಾಸವನ್ನು ಆರ್ಸಿಬಿ ನಾಯಕ ವ್ಯಕ್ತಪಡಿಸಿದ್ದಾರೆ..
ಎಲ್ಎಸ್ಜಿ ವಿರುದ್ಧದ ಸೋಲಿನ ನಂತರ ಡ್ರೆಸ್ಸಿಂಗ್ ರೂಂನಲ್ಲಿ ಕಿಂಗ್ ಕೊಹ್ಲಿ ಕುಳಿತಿದ್ದ ರೀತಿಯನ್ನು ನೋಡಿದ್ರೆ ಅವರ ಎದೆಯಲ್ಲಿ ಎಂಥಾ ಜ್ವಾಲಾಮುಖಿ ಎದ್ದಿರಬಹುದು ಎನ್ನುವುದು ಫ್ಯಾನ್ಸ್ಗೂ ಅರ್ಥವಾಗ್ತಿದೆ.. ಆ ಜ್ವಾಲಾಮುಖಿ ಬ್ಯಾಟ್ ಮೂಲಕ ಸಿಡಿದರೆ ಮುಂದಿನ ಪಂದ್ಯಗಳಲ್ಲಿ ಕೇವಲ ಹಾಫ್ ಸೆಂಚುರಿ ಅಲ್ಲ.. ಸೆಂಚುರಿಗಳನ್ನು ಕೊಹ್ಲಿ ಬ್ಯಾಟ್ನಿಂದ ನಿರೀಕ್ಷೆ ಮಾಡಬಹುದು.. ಕಳೆದ ಸೀಸನ್ನಲ್ಲೂ ಬ್ಯಾಕ್ ಟು ಬ್ಯಾಕ್ ಹಂಡ್ರೆಡ್ ಬಾರಿಸಿದ್ದ ಕೊಹ್ಲಿಯನ್ನು ಅಭಿಮಾನಿಗಳು ಕಿಂಗ್ ಅಂತ ಹೊಗಳೋದು ಸುಮ್ಮನೆ ಏನೂ ಅಲ್ಲ.. ಈಗಲೂ ಅಷ್ಟೇ.. ಕಿಂಗ್ ಕೊಹ್ಲಿ ಒಮ್ಮ ಸಿಡಿಯಲು ಆರಂಭಿಸಿದ್ರೆ, ನಂತರ ಆರ್ಸಿಬಿಯ ಬ್ಯಾಟಿಂಗ್ ಚಿಂತೆ ಸಂಪೂರ್ಣ ಮಂಗಮಾಯ ಆಗಬಹುದು.. ಆದ್ರೆ ಆರ್ಸಿಬಿಯ ಬೌಲಿಂಗ್ ಯುನಿಟ್ ನೋಡ್ತಿದ್ದರೆ ಈ ಟೀಂ ಕೇವಲ ಕೊಹ್ಲಿ ಬ್ಯಾಟಿಂಗ್ನಿಂದ ಮಾತ್ರ ಗೆದ್ದು ಬಿಡುತ್ತದೆ ಎಂದು ನಿರೀಕ್ಷೆ ಇಟ್ಟುಕೊಳ್ಳೋದು ತಪ್ಪಾಗಬಹುದು.. ಏನೇ ಆದ್ರೂ ಆರ್ಸಿಬಿ ಕೋಚ್ ಆ್ಯಂಡಿ ಫ್ಲವರ್ ಮುಂದೆ ದೊಡ್ಡ ಅವಕಾಶಗಳು ಎದುರಾಗಲಿವೆ ಎಂಬ ಆಶಾದಾಯಕ ಮಾತುಗಳನ್ನು ಡ್ರೆಸ್ಸಿಂಗ್ ರೂಂನಲ್ಲಿ ಹೇಳಿದ್ದಾರೆ.. ಈಗಲೂ ಆರ್ಸಿಬಿ ಮುಂದಿನ ಆರೇಳು ಪಂದ್ಯಗಳಲ್ಲಿ ಗೆಲುವು ಸಾಧಿಸಿದರೂ ಪ್ಲೇಆಫ್ ಗೆ ಹೋಗುವ ಅವಕಾಶ ಇದ್ದೇ ಇದೆ.. ಇದನ್ನು ಗುರಿಯಿಟ್ಟೇ ಫ್ಲವರ್ ಆ ಮಾತುಗಳನ್ನು ಹೇಳಿರೋದು ಸ್ಪಷ್ಟವಿದೆ..
ಆದ್ರೆ ಕಿಂಗ್ ಕೊಹ್ಲಿಯ ಹೊರತಾಗಿ ಉಳಿದ ಆರ್ಸಿಬಿ ಆಟಗಾರರು ಎಷ್ಟು ಸೀರಿಯಸ್ ಆಗಿ ಕೋಚ್ ಮಾತು ಕೇಳ್ತಾರೆ ಎನ್ನುವುದು ಮುಖ್ಯ.. ಹಾಗಿದ್ದರೆ ಮಾತ್ರ ಆರ್ಸಿಬಿ ಗೆಲ್ಲೋದನ್ನು ನಿರೀಕ್ಷೆ ಮಾಡಬಹುದು.. ಇಲ್ಲದೇ ಹೋದ್ರೆ ಮತ್ತೆ ಆರ್ಸಿಬಿ ಡ್ರೆಸ್ಸಿಂಗ್ ರೂಂನಲ್ಲಿ ಮೋಟಿವೇಷನಲ್ ಸ್ಪೀಚ್ ಮತ್ತು ಸೋಲಿನ ಶವಪರೀಕ್ಷೆ ಮಾತ್ರ ನಡೆಯಲು ಸಾಧ್ಯ ಅನ್ನೋದ್ರಲ್ಲಿ ಅನುಮಾನ ಬೇಕಿಲ್ಲ..