ಸ್ಮೃತಿ Vs ಕೌರ್.. ಗೆಲ್ಲೋದ್ಯಾರು – RCB & MIನ ವೀಕ್ ನೆಸ್ ಏನು?
ಪೆರ್ರಿ ಇಲ್ಲದ ಬೆಂಗಳೂರು ಹೇಗಿದೆ?

ಸ್ಮೃತಿ Vs ಕೌರ್.. ಗೆಲ್ಲೋದ್ಯಾರು – RCB & MIನ ವೀಕ್ ನೆಸ್ ಏನು?ಪೆರ್ರಿ ಇಲ್ಲದ ಬೆಂಗಳೂರು ಹೇಗಿದೆ?

ನಾಲ್ಕನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಅಖಾಡ ರೆಡಿಯಾಗಿದೆ. ಫಸ್ಟ್ ಮ್ಯಾಚಲ್ಲೇ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಹಾಗೇ ಮಾಜಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಂ ಮುಖಾಮುಖಿಯಾಗಲಿವೆ. ಡಬ್ಲ್ಯೂಪಿಎಲ್​ನಲ್ಲಿ 3 ಸೀಸನ್ಸ್ ಮುಗಿದಿದ್ದು ಐದು ತಂಡಗಳ ಪೈಕಿ ಆರ್​ಸಿಬಿ ಮತ್ತು ಎಂಐ ಸಕ್ಸಸ್​ಫುಲ್ ಟೀಂಗಳಾಗಿ ಕಾಣ್ತಿವೆ. ಯಾಕಂದ್ರೆ ಮುಂಬೈ ತಂಡ 2023 ಮತ್ತು 2025ರಲ್ಲಿ ಅಂದ್ರೆ ಎರಡು ಸಲ ಕಪ್ ಗೆದ್ರೆ ಬೆಂಗಳೂರು ಟೀಂ 2024ರಲ್ಲಿ ಟ್ರೋಫಿಗೆ ಮುತ್ತಿಕ್ಕಿದೆ. ಌಂಡ್ ಒನ್ ಮೋರ್ ಥಿಂಗ್ ಮುಂಬೈ ತಂಡವನ್ನ ಲೀಡ್ ಮಾಡ್ತಿರೋದು ಟೀಂ ಇಂಡಿಯಾ ನಾಯಕಿ ಹರ್ಮನ್ ಪ್ರೀತ್ ಕೌರ್ ಹಾಗೇ ಭಾರತದ ತಂಡದ ಉಪನಾಯಕಿ ಸ್ಮೃತಿ ಮಂದಾನ ಬೆಂಗಳೂರು ಕ್ಯಾಪ್ಟನ್ ಆಗಿದ್ದಾರೆ. ಕೌರ್ ಮತ್ತು ಸ್ಮೃತಿ ಪಾಲಿಗೂ ಈ ಪಂದ್ಯ ಪ್ರತಿಷ್ಠೆಯೇ ಆಗಿದೆ. ಟೂರ್ನಿಯ ಮೊದಲ ಪಂದ್ಯ ಗೆದ್ದು ಶುಭಾರಂಭ ಮಾಡೋಕೆ ಇಬ್ರೂ ಎದುರು ನೋಡ್ತಿದ್ದಾರೆ.

ಇದನ್ನೂ ಓದಿ : 2026ರಲ್ಲಿ KING ನಡೆದಿದ್ದೇ ದಾರಿ – ಚರಿತ್ರೆ ಸೃಷ್ಟಿಸೋ ಅವತಾರಗಳೆಷ್ಟು?

ಬ್ಯಾಟಿಂಗ್ ಮತ್ತು ಬೌಲಿಂಗ್ ಓಕೆ.. ಆಲ್ ರೌಂಡರ್ಸ್ ವೀಕ್!

2026ರ ಐಪಿಎಲ್​ಗೆ ಆರ್​ಸಿಬಿಯ ಬ್ಯಾಟಿಂಗ್ ಲೈನಪ್ ತುಂಬಾ ಚೆನ್ನಾಗಿ ಕಾಣ್ತಿದೆ. ಸ್ಮೃತಿ ಒನ್ ಆಫ್ ದಿ ಬೆಸ್ಟ್ ಬ್ಯಾಟರ್. ಌಂಡ್ ರಿಚಾ ಘೋಷ್ ಪಂದ್ಯದ ಮಧ್ಯ ಮತ್ತು ಕೊನೆಯ ಓವರ್‌ಗಳಲ್ಲಿ ಬ್ಯಾಟಿಂಗ್ ಶಕ್ತಿಯನ್ನು ಹೆಚ್ಚಿಸುತ್ತಾರೆ. ಗ್ರೇಸ್ ಹ್ಯಾರಿಸ್‌ನಂತಹ ವಿದೇಶಿ ಆಟಗಾರ್ತಿಯರು ತಮ್ಮ ಆಕ್ರಮಣಕಾರಿ ಆಟದ ಶೈಲಿಯೊಂದಿಗೆ ಹೆಚ್ಚಿನ ಅವಕಾಶಗಳನ್ನು ನೀಡುವ ಮೂಲಕ ಅವರ ಬ್ಯಾಟಿಂಗ್ ಲೈನ್‌ಅಪ್‌ ಡೆಪ್ತ್ ಅನ್ನಿಸ್ತಿದೆ. ಇನ್ನು ಸ್ಪಿನ್ನರ್​ಗಳಾಗಿ ಶ್ರೇಯಾಂಕ ಪಾಟೀಲ್, ರಾಧಾ ಯಾದವ್, ಪ್ರೇಮಾ ರಾವತ್ ಮತ್ತು ಲಿನ್ಸೆ ಸ್ಮಿತ್ ಬ್ರೇಕ್ ಥ್ರ್ಯೂ ತಂದುಕೊಡಬಹುದು. ಇನ್ನು ಆರ್​ಸಿಬಿಯ ಪ್ಲಸ್ ಅಂಧ್ರೆ ಕಳೆದ ವರ್ಷದ ODI ವಿಶ್ವಕಪ್‌ನಲ್ಲಿ ಭಾಗವಹಿಸಿದ್ದ ಒಂಬತ್ತು ಆಟಗಾರ್ತಿಯರು ತಂಡದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ನಾಡಿನ್ ಡಿ ಕ್ಲರ್ಕ್ ಮತ್ತು ಆಸ್ಟ್ರೇಲಿಯಾದ ತಾರೆಯರಾದ ಗ್ರೇಸ್ ಹ್ಯಾರಿಸ್ ಮತ್ತು ಜಾರ್ಜಿಯಾ ವೋಲ್ ಅವರಂತಹ ಪವರ್-ಹಿಟ್ಟರ್​ಗಳಿದ್ದಾರೆ. ಬಟ್ ಮೈನಸ್ ಏನಂದ್ರೆ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡ್ರಲ್ಲೂ ಇಂಪ್ಯಾಕ್ಟ್ ಮಾಡಬಲ್ಲ ಪ್ರಮುಖ ಆಲ್​ರೌಂಡರ್​ನ ಕೊರತೆ ಇದೆ. ಌಂಡ್ ಎಲ್ಲಿಸ್ ಪೆರ್ರಿ ಇಲ್ಲದ್ದೂ ವೀಕ್​ನೆಸ್ ಆಗುತ್ತೆ.

ಆರ್ ಸಿಬಿಗೆ ಕಾಡಲಿದೆ ಎಲ್ಲಿಸ್ ಪೆರ್ರಿ ಆಬ್ಸೆನ್ಸ್!

ವುಮೆನ್ಸ್ ಪ್ರೀಮಿಯರ್ ಲೀಗ್​ನಲ್ಲಿ ಆರ್​ಸಿಬಿ ಪಾಲಿಗೆ ಎಲ್ಲಿಸ್ ಪೆರ್ರಿ ಒಂಥರಾ ಹಾರ್ಟ್ ಬೀಟ್ ನಂತಿದ್ರು. ಬ್ಯಾಟಿಂಗ್ ಌಂಡ್ ಬೌಲಿಂಗ್ ಎರಡ್ರಲ್ಲೂ ಆಪತ್ಬಾಂಧವಾಗಿದ್ರು. ಹೀಗಾಗಿಯೇ ಮೆಗಾ ಹರಾಜಿಗೂ ಮುನ್ನ ಫ್ರಾಂಚೈಸಿ ಅವ್ರನ್ನ ಉಳಿಸಿಕೊಂಡಿತ್ತು. ಆದ್ರೆ ವೈಯಕ್ತಿಕ ಕಾರಣಗಳಿಂದಾಗಿ ಪಂದ್ಯಾವಳಿಯಲ್ಲಿ ಆಡಲು ಪೆರ್ರಿಗೆ ಸಾಧ್ಯವಾಗುವುದಿಲ್ಲ. ಪೆರ್ರಿ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಮತ್ತು ನಾಲ್ಕನೇ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ್ತಿ. ಬಟ್ ಈ ಸೀಸನ್​ನಲ್ಲಿ ಪೆರ್ರಿ ಇಲ್ಲದ್ದು ಹೊಡೆತ ಕೊಡಲಿದೆ. ಅಲ್ದೇ ಪೆರಿಯ ಬದಲಿಯಾಗಿ ಸಯಾಲಿ ಸತ್‌ಘರೆ ಅವರನ್ನು ಖರೀದಿ ಮಾಡಲಾಗಿದೆ. ಬಟ್ ಸಯಾಲಿ ಪ್ಲೇಯಿಂಗ್ 11ನಲ್ಲಿ ಆಡೋದೇ ಡೌಟ್ ಇದೆ.

ಪರ್ಸನಲ್ ಪ್ರಾಬ್ಲಮ್ಸ್ ನಿಂದ ಹೊರ ಬರ್ತಾರಾ ಸ್ಮೃತಿ?

ಇನ್ನು ಆರ್​ಸಿಬಿ ಕ್ಯಾಪ್ಟನ್ ಸ್ಮೃತಿ ಮಂದಾನ ಅವ್ರ ಪರ್ಸನಲ್ ಲೈಫಲ್ಲಿ ಕಳೆದ 2 ತಿಂಗಳಲ್ಲೇ ಸಾಕಷ್ಟು ಏರುಪೇರುಗಳಾಗಿವೆ. 2025 ರ ನವೆಂಬರ್ 2 ರಂದು ಮಹಿಳಾ ODI ವಿಶ್ವಕಪ್ ಗೆದ್ದ ನಂತ್ರ ನವೆಂಬರ್ 23 ರಂದು ಪಲಾಶ್ ಮುಚ್ಚಲ್ ಜೊತೆ ಸ್ಮೃತಿ ಮದುವೆ ಫಿಕ್ಸ್ ಆಗಿತ್ತು. ಬಟ್ ಮದುವೆ ದಿನವೇ ಮುರಿದು ಬಿದ್ದಿತ್ತು. ಆ ಬಳಿಕ ಡಿಸೆಂಬರ್‌ 21ರಿಂದ ಶ್ರೀಲಂಕಾ ವಿರುದ್ಧದ T20I ಸರಣಿ ಮೂಲಕ ಮತ್ತೆ ಮೈದಾನಕ್ಕಿಳಿದ್ರು. ಆದ್ರೆ ಮೊದಲ 3 ಪಂದ್ಯಗಳಲ್ಲಿ ಅರ್ಧಶತಕ ಗಳಿಸಲು ಸಾಧ್ಯವಾಗಲಿಲ್ಲ. ನಾಲ್ಕನೇ ಟಿ20ಐನಲ್ಲಿ 80 ರನ್ ಗಳಿಸಿದ್ರು. ಆ ನಂತ್ರ 5ನೇ ಮ್ಯಾಚಲ್ಲಿ ವಿಶ್ರಾಂತಿ ನೀಡಲಾಗಿತ್ತು. ಈಗ ಡಬ್ಲ್ಯೂಪಿಎಲ್ ಅಖಾಡಕ್ಕೆ ಇಳೀತಿದ್ದು ಸ್ಮೃತಿ ಅವ್ರ ಮನಸ್ಥಿತಿ ಬಗ್ಗೆಯೂ ಯೋಚಿಸಬೇಕಾಗುತ್ತೆ.

3 ಆವೃತ್ತಿಗಳಲ್ಲಿ 2 ಕಪ್ ಗೆದ್ದಿದೆ ಮುಂಬೈ ಇಂಡಿಯನ್ಸ್!

ಇನ್ನು ಮುಂಬೈ ಇಂಡಿಯನ್ಸ್ ಕಳೆದ 3 ಆವೃತ್ತಿಗಳಲ್ಲಿ ಮೊಸ್ಟ್ ಸಕ್ಸಸ್​ಫುಲ್ ಟೀಂ ಆಗಿದೆ. ಎರಡು ಸಲ ಟೈಟಲ್ ಗೆದ್ದಿದ್ದಾರೆ. ಅವ್ರ ಅತಿದೊಡ್ಡ ಪ್ಲಸ್ ಪಾಯಿಂಟ್ ಅಂದ್ರೆ ಮೆಗಾ ಆಕ್ಷನ್​ಗೂ ಮುನ್ನ ದೊಡ್ಡ ಆಟಗಾರ್ತಿಯರನ್ನ ಉಳಿಸಿಕೊಂಡಿದೆ. ನಾಯಕಿ ಹರ್ಮನ್‌ಪ್ರೀತ್ ಜೊತೆಗೆ, ಹೇಲಿ ಮ್ಯಾಥ್ಯೂಸ್, ನ್ಯಾಟ್ ಸಿವರ್-ಬ್ರಂಟ್, ಅಮನ್‌ಜೋತ್ ಕೌರ್ ಮತ್ತು ಯುವ ವಿಕೆಟ್ ಕೀಪರ್ ಜಿ ಕಮಲಿನಿಯನ್ನು ಉಳಿಸಿಕೊಂಡಿದೆ. ಹಾಗೆ ಮೆಗಾ ಆಕ್ಷನ್​ನಲ್ಲೂ ಅಳೆದು ತೂಗಿ ಖರೀದಿ ಮಾಡಿದೆ. ಬಟ್ ವೇಗದ ಬೌಲಿಂಗ್ ದಾಳಿ ಸ್ವಲ್ಪ ವೀಕ್ ಅನ್ನಿಸ್ತಿದೆ. ಌಂಡ್ ಹೇಲಿ ಮ್ಯಾಥ್ಯೂಸ್ ಫಿಟ್​ನೆಸ್ ಕೂಡ ಪ್ರಶ್ನಾರ್ಥಕವಾಗಿದೆ. ಹಾಗೇ ಮುಂಬೈನ ಕಮಲಿನಿ ಮತ್ತು ರಾಹಿಲಾ ಫಿರ್ದೌಸ್ ಇಬ್ಬರೂ ಯುವ ವಿಕೆಟ್ ಕೀಪರ್ಸ್. ಎಕ್ಸ್​ಪೀರಿಯನ್ಸ್ ಕಡಿಮೆ. ಸೋ ತುಂಬಾ ಪ್ರೆಶರ್  ಟೈಮಲ್ಲಿ ಹ್ಯಾಂಡಲ್ ಮಾಡೋದು ಕಷ್ಟ ಆಗ್ಬೋದು.  ಉಳಿದಂತೆ ತಂಡ ಸ್ಟ್ರಾಂಗ್ ಆಗಿಯೇ ಇದೆ.

ಇನ್ನು ಆರ್​ಸಿಬಿಗೆ ಕಳೆದ ವರ್ಷ ಚೆನ್ನಾಗಿರಲಿಲ್ಲ. 8 ಪಂದ್ಯಗಳಲ್ಲಿ 3 ಪಂದ್ಯಗಳನ್ನು ಮಾತ್ರ ಗೆದ್ದಿತು. ಆರಂಭದಲ್ಲಿ ಗುಜರಾತ್ ಮತ್ತು ದೆಹಲಿಯನ್ನು ಸೋಲಿಸುವ ಮೂಲಕ ಸೀಸನ್ ಸ್ಟಾರ್ಟ್ ಮಾಡಿತ್ತು.  ಆದರೆ ಕಳೆದ 6 ಪಂದ್ಯಗಳ ಪೈಕಿ 5 ರಲ್ಲಿ ಸೋತು ಪ್ಲೇಆಫ್‌ಗೆ ತಲುಪಲು ಸಹ ಸಾಧ್ಯವಾಗಲಿಲ್ಲ. ಸೋ ಈ ವರ್ಷ ಮತ್ತೆ ಕಂ ಬ್ಯಾಕ್ ಮಾಡೋ ಟಾರ್ಗೆಟ್​ನಲ್ಲಿದೆ. ಇನ್ನು ಡಬ್ಲ್ಯೂಪಿಎಲ್​ನಲ್ಲಿ ಒಟ್ಟು 7 ಬಾರಿ ಉಭಯ ತಂಡಗಳು ಮುಖಾಮುಖಿ ಆಗಿವೆ. ಇದ್ರಲ್ಲಿ ಮುಂಬೈ ನಾಲ್ಕು ಸಲ ಗೆದ್ರೆ ಬೆಂಗಳೂರು ಟೀಂ 3 ಸಲ ಗೆದ್ದಿದ್ದಾರೆ.

Shantha Kumari