ಬ್ರಹ್ಮೋಸ್ ಕ್ಷಿಪಣಿಗಳಿಗಾಗಿ ₹15,000 ಕೋಟಿಯ ಒಪ್ಪಂದ – ಭಾರತೀಯ ನೌಕಾಪಡೆಗೆ ಆನೆಬಲ..!

ಬ್ರಹ್ಮೋಸ್ ಕ್ಷಿಪಣಿಗಳಿಗಾಗಿ ₹15,000 ಕೋಟಿಯ ಒಪ್ಪಂದ – ಭಾರತೀಯ ನೌಕಾಪಡೆಗೆ ಆನೆಬಲ..!

ಭಾರತೀಯ ನೌಕಾಪಡೆಗೆ ಈಗ ಮತ್ತಷ್ಟು ಆನೆಬಲ ಬಂದಂತಾಗಿದೆ. ಕೇಂದ್ರ ರಕ್ಷಣಾ ಸಚಿವಾಲಯವು ಸೂಪರ್ ಸಾನಿಕ್ ಬ್ರಹ್ಮೋಸ್ ಕ್ಷಿಪಣಿಗಳಿಗಾಗಿ ಮತ್ತೊಂದು ದೊಡ್ಡ ಒಪ್ಪಂದ ಮಾಡಿಕೊಂಡಿದೆ. ನೌಕಾಪಡೆಯ ಮುಂಚೂಣಿಯ ಯುದ್ಧನೌಕೆಗಳಿಗಾಗಿ 200 ಬ್ರಹ್ಮೋಸ್ ಕ್ಷಿಪಣಿಗಳ ಖರೀದಿಯ ಒಪ್ಪಂದವನ್ನ ಅಂತಿಮಗೊಳಿಸಿದೆ. ಕ್ಷಿಪಣಿಗಳು ಮತ್ತು ಅದಕ್ಕೆ ಸಂಬಂಧಿಸಿದ ಸಲಕರಣೆಗಳ ಖರೀದಿ ಪ್ರಸ್ತಾವನೆಗೆ ರಾಜನಾಥ್ ಸಿಂಗ್ ನೇತೃತ್ವದ ರಕ್ಷಣಾ ಸ್ವಾಧೀನ ಮಂಡಳಿ ಅನುಮೋದನೆ ನೀಡಿದೆ. ನಂತರ ಪ್ರಧಾನ ಮಂತ್ರಿ ನೇತೃತ್ವದ ಕ್ಯಾಬಿನೆಟ್ ಸಮಿತಿಗೆ ಅಂತಿಮ ಒಪ್ಪಿಗೆಗಾಗಿ ಕಳುಹಿಸಲು ತೀರ್ಮಾನಿಸಲಾಗಿದೆ.

ಇದನ್ನೂ ಓದಿ :  2040ರ ಹೊತ್ತಿಗೆ ಸಮುದ್ರಗಳಲ್ಲಿ 3 ಪಟ್ಟು ಹೆಚ್ಚಾಗುತ್ತೆ ಪ್ಲಾಸ್ಟಿಕ್ – ವಿಜ್ಞಾನಿಗಳು ಕೊಟ್ಟ ಎಚ್ಚರಿಕೆ ಏನು..?

ಒಪ್ಪಂದದ ಪ್ರಕಾರ ಬ್ರಹ್ಮೋಸ್ ಕ್ಷಿಪಣಿಗಳ ಪೂರೈಕೆಯು ದೀರ್ಘಾವದಿ ಸಮಯ ತೆಗೆದುಕೊಳ್ಳುತ್ತದೆ. ಅವುಗಳ ಸಂಖ್ಯೆ ಮತ್ತು ಸಂರಚನೆ ಆಧಾರದ ಮೇಲೆ ಅಂತಿಮ ವೆಚ್ಚ ನಿರ್ಧಾರವಾಗುತ್ತದೆ. ಸದ್ಯಕ್ಕೆ ಬ್ರಹ್ಮೋಸ್ ಕ್ಷಿಪಣಿಗಳ ಖರೀದಿಗೆ 15 ಸಾವಿರ ಕೋಟಿ ರೂಪಾಯಿಯ ಒಪ್ಪಂದ ಮಾಡಿಕೊಳ್ಳಲಾಗಿದೆ.

suddiyaana