ಮೊದಲ ಏಕದಿನ ಪಂದ್ಯ ಗೆದ್ದು ಬೀಗಿದ ನ್ಯೂಜಿಲೆಂಡ್ – ಧವನ್ ಪಡೆಗೆ ಸೋಲು
ಟೀಂ ಇಂಡಿಯಾ ಎದುರು ಟಾಮ್ ಲೇಥಮ್ ಆಕರ್ಷಕ ಶತಕ

ಮೊದಲ ಏಕದಿನ ಪಂದ್ಯ ಗೆದ್ದು ಬೀಗಿದ ನ್ಯೂಜಿಲೆಂಡ್ – ಧವನ್ ಪಡೆಗೆ ಸೋಲುಟೀಂ ಇಂಡಿಯಾ ಎದುರು ಟಾಮ್ ಲೇಥಮ್ ಆಕರ್ಷಕ ಶತಕ

ನ್ಯೂಜಿಲೆಂಡ್ ತಂಡ ಶುಕ್ರವಾರ ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ಟೀಮ್ ಇಂಡಿಯಾದ ವಿರುದ್ಧ ಗೆಲುವು ಸಾಧಿಸಿದೆ. ಟಾಮ್ ಲೇಥಮ್ ಅವರ ಶತಕ ಮತ್ತು ನಾಯಕ ಕೇನ್ ವಿಲಿಯಮ್ಸನ್ ಅವರ ಅತ್ಯುತ್ತಮ ಇನ್ನಿಂಗ್ಸ್ ಆಧಾರದ ಮೇಲೆ ನ್ಯೂಜಿಲೆಂಡ್ ಭಾರತದ ವಿರುದ್ಧ ಜಯಸಾಧಿಸಿದೆ.

ಇದನ್ನೂ ಓದಿ :  ‘ಝಾಕಿರ್ ನಾಯಕ್​ ನನ್ನ ವಿಶ್ವಕಪ್​ ಗೆ ಆಹ್ವಾನಿಸಿಲ್ಲ’-ಕತಾರ್ ಸರ್ಕಾರ

ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಧವನ್ ಪಡೆಯನ್ನು ಏಳು ವಿಕೆಟ್‌ಗಳಿಂದ ಕಿವೀಸ್ ಮಣಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 306 ರನ್ ಗಳಿಸಿತು. ಈ ಗುರಿಯನ್ನು ಬೆನ್ನಟ್ಟಿದ ಆತಿಥೇಯ ತಂಡ 47.1 ಓವರ್‌ಗಳಲ್ಲಿ ಜಯ ಸಾಧಿಸಿದೆ. ಲೇಥಮ್ ಅಜೇಯ 145 ಮತ್ತು ನಾಯಕ ವಿಲಿಯಮ್ಸನ್ ಅಜೇಯ 94 ರನ್ ಗಳಿಸಿದರು. ಇದರೊಂದಿಗೆ ನ್ಯೂಜಿಲೆಂಡ್ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0ಯಿಂದ ಮುನ್ನಡೆ ಸಾಧಿಸಿದೆ.

suddiyaana