ಬದುಕುವ ಛಲ.. – ದೊಡ್ಡ ಹೊಳೆಯಲ್ಲಿ ಮೊಸಳೆಗೆ ಚಳ್ಳೆಹಣ್ಣು ತಿನ್ನಿಸಿದ ಜಿಂಕೆ!  

ಬದುಕುವ ಛಲ.. – ದೊಡ್ಡ ಹೊಳೆಯಲ್ಲಿ ಮೊಸಳೆಗೆ ಚಳ್ಳೆಹಣ್ಣು ತಿನ್ನಿಸಿದ ಜಿಂಕೆ!  

ಮೊಸಳೆ ಎಷ್ಟು ಅಪಾಯಕಾರಿ ಅಂತಾ ನಮಗೆಲ್ಲರಿಗೂ ತಿಳಿದಿದೆ. ಪ್ರಾಣಿಗಳು ಮಾತ್ರವಲ್ಲದೇ ಮನುಷ್ಯರು ಕೂಡ ಅದರ ಬಳಿ ಹೋಗುವ ಧೈರ್ಯ ಮಾಡುವುದಿಲ್ಲ. ಅಪ್ಪಿತಪ್ಪಿ ಅದರ ದವಡೆಗೆ ಯಾರಾದರೂ ಬಿದ್ದರೆ ಸಾವು ಮಾತ್ರ ಖಚಿತ. ದೊಡ್ಡ ಮತ್ತು ಚಿಕ್ಕ ಪ್ರಾಣಿಗಳಿರಲಿ, ಕಾಡಿನ ರಾಜ ಸಿಂಹ ಕೂಡ ಅದರ ಹತ್ತಿರ ಹೋಗಲು ಹೆದರುತ್ತದೆ. ಇಲ್ಲೊಂದು ಜಿಂಕೆ ಹೊಳೆ ದಾಟಲು ಹೋಗಿ ಮೊಸಳೆ ದಾಳಿಗೆ ಸಿಲುಕಿದೆ. ಮೊಸಳೆ ಬಾಯಿಯಿಂದ ಜಿಂಕೆ ತಪ್ಪಿಸಿಕೊಂಡು ಜೀವ ಉಳಿಸಿಕೊಂಡಿರುವ ವಿಡಿಯೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದೆ.

ಇದನ್ನೂ ಓದಿ: ಹುಲಿ ಬಾಯಲ್ಲಿತ್ತು ಶೂ.. – ಬೋನಿನೊಳಗೆ ಹೋಗಿ ನೋಡಿದ ಸಿಬ್ಬಂದಿಗೆ ಕಾದಿತ್ತು ಬಿಗ್‌ ಶಾಕ್!

Figen ಎಂಬ ಇನ್‌ಸ್ಟಾಗ್ರಾಂನಲ್ಲಿ ಈ ವಿಡಿಯೋವನ್ನು ಪೋಸ್ಟ್‌ ಮಾಡಲಾಗಿದೆ. ವೈರಲ್‌ ಆದ ವಿಡಿಯೋದಲ್ಲಿ ಜಿಂಕೆಯೊಂದು ನದಿ ದಾಟುತ್ತಿರುತ್ತದೆ. ಈ ವೇಳೆ ಮೊಸಳೆಯೊಂದು ಪ್ರತ್ಯಕ್ಷವಾಗುತ್ತದೆ. ಜಿಂಕೆ ನದಿಯಲ್ಲಿ ಈಜುತ್ತಿರುವುದು ಕಾಣುತ್ತದೆ. ಕೂಡಲೇ ಆ ಮೊಸಳೆಯೊಂದು ಜಿಂಕೆಯನ್ನು ಬೇಟೆಯಾಡಲು ಬೆನ್ನಹಿಂದೆಯೇ ಬರುತ್ತಿದೆ, ಜಿಂಕೆ ತನ್ನ ಜೀವವನ್ನು ಉಳಿಸಲು ತನ್ನೆಲ್ಲಾ ಶಕ್ತಿಯನ್ನು ಬಳಸಿ ನದಿ ದಾಟಲು ಯತ್ನಿಸುತ್ತಿದೆ. ಆದರೆ ಮೊಸಳೆಗಳಿಗೆ ನದಿಯಲ್ಲಿ ಈಜಿ ಅಭ್ಯಾಸವಾಗಿರುವುದರಿಂದ ಹೆಚ್ಚಿನ ವೇಗದಲ್ಲಿ ಈಜುತ್ತವೆ ಆದರೆ ಕೊನೆಯಲ್ಲಿ ಮೊಸಳೆ ಜಿಂಕೆ ಬಳಿಗೆ ಬಂದು ಇನ್ನೇನು ದಾಳಿ ಮಾಡಿತು ಎನ್ನುವಷ್ಟರಲ್ಲಿ ಜಿಂಕೆ ಮತ್ತೆ ತನ್ನ ಬಲ ಪ್ರದರ್ಶನ ಮಾಡಿ ಮೊಸಳೆ ಬಾಯಿಯಿಂದ ತಪ್ಪಿಸಿಕೊಂಡು ದಡ ಸೇರಿದೆ.

ನದಿಯಲ್ಲಿ ಜಿಂಕೆಗೆ ಈಜಿ ದಡ ಸೇರುವುದು ಅಷ್ಟು ಸುಲಭವಾಗಿರಲಿಲ್ಲ ಆದರೂ ಛಲ ಬಿಡದ ಜಿಂಕೆ ತನ್ನೆಲ್ಲ ಬಲವನ್ನು ಹಾಕಿ ಈಜಿ ಮೊಸಳೆ ಬಾಯಿಯಿಂದ ತಪ್ಪಿಸಿಕೊಂಡು ದಡ ಸೇರಿರುವುದು ಮಾತ್ರ ನಿಜಕ್ಕೂ ಆಶ್ಚರ್ಯ. ಸದ್ಯ ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

Shwetha M