ಕ್ಯಾಪ್ಟನ್‌ ವೈಭವ್‌ನಿಂದ 57 ವರ್ಷದ ದಾಖಲೆ ಉಡೀಸ್ – WTCಯಲ್ಲಿ INDಕ್ಕಿಂತ ಬಾಂಗ್ಲಾ ಬೆಸ್ಟ್

ಕ್ಯಾಪ್ಟನ್‌  ವೈಭವ್‌ನಿಂದ 57 ವರ್ಷದ ದಾಖಲೆ ಉಡೀಸ್ – WTCಯಲ್ಲಿ INDಕ್ಕಿಂತ ಬಾಂಗ್ಲಾ ಬೆಸ್ಟ್

ಥಾಯ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ 94 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಸ್ಟಾರ್ ಆಲ್‌ರೌಂಡರ್ ದೀಪ್ತಿ ಶರ್ಮಾ ಮಹಿಳಾ T20I ಕ್ರಿಕೆಟ್‌ನಲ್ಲಿ ಹೊಸ ವಿಶ್ವ ದಾಖಲೆ ಬರೆದಿದ್ದಾರೆ. ಥಾಯ್ಲೆಂಡ್ ವಿರುದ್ಧದ ಏಷ್ಯಾಕಪ್ ಪಂದ್ಯದಲ್ಲಿ 3 ವಿಕೆಟ್ ಪಡೆಯುವ ಮೂಲಕ ಅವರು ಮಹಿಳಾ T20Iಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ದೀಪ್ತಿ ಇದೀಗ 171 ವಿಕೆಟ್‌ಗಳೊಂದಿಗೆ ಅಗ್ರಸ್ಥಾನಕ್ಕೇರಿದ್ದು, ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಮಹಿಳಾ ಏಷ್ಯಾಕಪ್‌ನಲ್ಲಿ ಭಾರತ ತನ್ನ ಮೊದಲ ಪಂದ್ಯದಲ್ಲೇ ಥಾಯ್ಲೆಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಈ ಟೂರ್ನಿಯಲ್ಲಿ ಭಾರತ ಅತ್ಯಂತ ಯಶಸ್ವಿ ತಂಡವಾಗಿದ್ದು, ಇದೀಗ ಮುಂದಿನ ಪಂದ್ಯಗಳತ್ತ ಗಮನ ಹರಿಸಿದೆ. ಭಾರತ, ಪಾಕಿಸ್ತಾನ, ಥಾಯ್ಲೆಂಡ್ ಮತ್ತು ಹಾಂಗ್‌ಕಾಂಗ್ ಗ್ರೂಪ್ Aನಲ್ಲಿವೆ. ಸೆಪ್ಟೆಂಬರ್ 5ರಂದು ಭಾರತ–ಪಾಕಿಸ್ತಾನ ಮುಖಾಮುಖಿಯಾಗಲಿದ್ದು, ಆ ಪಂದ್ಯಕ್ಕೆ ಈಗಾಗಲೇ ಭಾರೀ ಕುತೂಹಲ ಮೂಡಿದೆ.

ಟೀಮ್ ಇಂಡಿಯಾ ಮತ್ತೊಮ್ಮೆ  WTC ಫೈನಲ್ ತಲುಪುವ ರೇಸ್‌ನಲ್ಲಿದೆ.  ವಿಪರ್ಯಾಸ ಅಂದ್ರೆ ಭಾರತ ಸ್ಟ್ರಾಂಗ್ ಟೀಂ ಆದ್ರೂ ಬಾಂಗ್ಲಾ ದೇಶಕ್ಕಿಂತ ಹಿಂದಿದೆ. ಬಾಂಗ್ಲಾ 6 ಪಂದ್ಯ ಆಡಿ ಮೂರಲ್ಲಿ ಗೆದ್ದು ಪಾಯಿಂಟ್ಸ್ ಟೇಬಲ್‌ನಲ್ಲಿ 4ನೇ ಸ್ಥಾನದಲ್ಲಿದ್ರೆ, ಟೀಂ ಇಂಡಿಯಾ ಆಡಿರೋ 11 ಪಂದ್ಯದಲ್ಲಿ 5 ಪಂದ್ಯ ಗೆದ್ದು 5ನೇ ಸ್ಥಾನದಲ್ಲಿದೆ.  ಇಲ್ಲಿ  55.56% PCT ಹೊಂದಿರೋ ಬಾಂಗ್ಲಾ ಇತಿಹಾಸ ಸೃಷ್ಟಿಸಲು ಕಾಯುತ್ತಿದ್ದಾರೆ, 51.52 PCT ಹೊಂದಿರೋ ಟೀಂ ಇಂಡಿಯಾ  ಮುಂದಿರೋ ಎಲ್ಲಾ ಪಂದ್ಯ ಗೆಲ್ಲಲೇ ಬೇಕಾದ ಇಕ್ಕಟ್ಟಿನಲ್ಲಿದೆ.

ಟೀಮ್ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ತಮ್ಮ ಹೊಸ ಟ್ಯಾಟೂ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ವಿರಾಟ್ ಕೊಹ್ಲಿ ಅವರ ಹೊಸ ಟ್ಯಾಟೂ ನೀರಿನ ಮೇಲ್ಮೈಗೆ ಒಂದು ಹನಿ ಬಿದ್ದಾಗ ಮೂಡುವ ವೃತ್ತಾಕಾರದ ಅಲೆಗಳು  ವಿನ್ಯಾಸವನ್ನು ಹೊಂದಿದೆ. ಇದು ಕೊಹ್ಲಿ ಅವರ ಎಡಗೈ ಬೈಸೆಪ್ಸ್ ಭಾಗದಲ್ಲಿದ್ದ ಹಳೆಯ ಟ್ಯಾಟೂಗಳ ಜೊತೆ ಕಲಾತ್ಮಕವಾಗಿ ವಿಲೀನಗೊಳ್ಳುವಂತೆ ಅತ್ಯಂತ ಸೂಕ್ಷ್ಮವಾಗಿ ಬಿಡಿಸಲಾಗಿದೆ.  ಟ್ಯಾಟೂ ಹಿಂದೆ ಇರುವ ಅರ್ಥವೇನು ಅನ್ನೋದರ ಚರ್ಚೆ ಜೋರಾಗಿದ್ದು, ನಿಜವಾದ ಅರ್ಥದ ಬಗ್ಗೆ ಟ್ಯಾಟೋ ಆರ್ಟಿಸ್ಟ್ ಮಾಹಿತಿ ಹಂಚಿಕೊಂಡಿಲ್ಲ.

ಇದನ್ನೂ ಓದಿ: 26 ಬಾಲ್.. 77 ರನ್ಸ್.. ಸಿಡಿದ ಅಭಿ – T-20I ಡ್ರಾಪ್ ಭೀತಿಗೆ ಬೆಂಕಿಯಾದ್ರಾ?

ಶ್ರೀಲಂಕಾ ಪ್ರವಾಸ ಮುಗಿದ ನಂತರ, ಭಾರತದ ಪ್ರಮುಖ ಕ್ರಿಕೆಟಿಗರು ಹೊಸ ಸೀಸನ್‌ಗೆ ತಯಾರಿ ನಡೆಸುತ್ತಿದ್ದಾರೆ. ಶ್ರೇಯಸ್ ಅಯ್ಯರ್, ಯಶಸ್ವಿ ಜೈಸ್ವಾಲ್ ಮತ್ತು ರವೀಂದ್ರ ಜಡೇಜಾ ಸೇರಿದಂತೆ ಹಲವು ಆಟಗಾರರು ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಸೀಸನ್ ಆರಂಭದ ಮೊದಲು ಫಿಟ್‌ನೆಸ್ ಪರೀಕ್ಷೆ ಮುಗಿಸಿದ್ದಾರೆ. ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ನಿತೀಶ್ ಕುಮಾರ್ ರೆಡ್ಡಿ ಗಾಯದಿಂದಾಗಿ ಈಗಿನ ಫಿಟ್‌ನೆಸ್ ಪರೀಕ್ಷೆಯಲ್ಲಿ ಭಾಗವಹಿಸಿಲ್ಲ.

ನನ್ನ ಹೆಂಡತಿ ದೇವಿಕ ಶೆಟ್ಟಿ ನನಗೆ ಧೈರ್ಯ ತುಂಬಿದ್ದಾಳೆ ಎಂದು ಸೂರ್ಯಕುಮಾರ್ ಯಾದವ್ ನೆನೆಪಿಸಿಕೊಂಡಿದ್ದಾರೆ. ಒಂದು ದಿನ ನನ್ನ ಪತ್ನಿ, ‘ನೀವು 13-15 ವರ್ಷದವರಿದ್ದಾಗ ಕ್ರಿಕೆಟ್ ಆಡಲು ಆರಂಭಿಸಿದ್ದು ಏಕೆ ಎಂದು ಯೋಚಿಸಿ. ಆಟದ ಮೇಲಿದ್ದ ಅದೇ ಕ್ರೇಜ್ ಹಾಗೂ ಪ್ಯಾಷನ್ ಅನ್ನು ಮತ್ತೆ ಕಂಡುಕೊಳ್ಳಿ’ ಎಂದು ಧೈರ್ಯ ತುಂಬಿದ್ದಾರೆ ಎಂದು ಸೂರ್ಯಕುಮಾರ್ ನೆನಪಿಸಿಕೊಂಡಿದ್ದಾರೆ.

ದುಲೀಪ್ ಟ್ರೋಫಿಯ ಸೆಮಿಫೈನಲ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಅಬ್ಬರಿಸಿದ್ದಾರೆ. ಈ ಅಬ್ಬರದೊಂದಿಗೆ ಯುವ ದಾಂಡಿಗ  57 ವರ್ಷಗಳ ಹಳೆಯ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.  ಐಪಿಎಲ್ ಮತ್ತು ಟೀಮ್ ಇಂಡಿಯಾ ಬಳಿಕ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲೂ ಅಬ್ಬರಿಸಿರುವ 15 ವರ್ಷದ ವೈಭವ್, ಬಿರುಸಿನ ಅರ್ಧಶತಕ ಸಿಡಿಸುವ ಮೂಲಕ ದುಲೀಪ್ ಟ್ರೋಫಿ ಇತಿಹಾಸದಲ್ಲೇ ಅರ್ಧಶತಕ ಬಾರಿಸಿದ ಅತ್ಯಂತ ಕಿರಿಯ ಬ್ಯಾಟರ್ ಎನಿಸಿಕೊಂಡಿದ್ದಾರೆ. ಲಕ್ಷ್ಮಣ್ ಸಿಂಗ್ ಅವರು 1969 ರಲ್ಲಿ ತಮ್ಮ 16ನೇ ವಯಸ್ಸಿನಲ್ಲಿ ಈ ದಾಖಲೆ ಬರೆದಿದ್ದರು.

IPLನ ವಿವಾದಾತ್ಮಕ Impact Player ನಿಯಮ ಮತ್ತೆ ಚರ್ಚೆಗೆ ಬಂದಿದೆ. IPL 2026 ಮುಗಿದ ಬಳಿಕ ನಿಯಮವನ್ನು ಪರಿಶೀಲಿಸುವುದಾಗಿ BCCI ಹೇಳಿತ್ತು. ಇದೀಗ ಮುಂದಿನ IPL ಆವೃತ್ತಿಗೂ ಮುನ್ನ ಎಲ್ಲಾ 10 ಫ್ರಾಂಚೈಸಿಗಳಿಂದ ಅಭಿಪ್ರಾಯ ಕೇಳಲಾಗಿದೆ. ತಂಡಗಳು ಇಂದು ಅಂದ್ರೆ  ಆಗಸ್ಟ್ 31ರೊಳಗೆ ತಮ್ಮ ಅಭಿಪ್ರಾಯ ನೀಡಬೇಕಿದೆ. ನಿಯಮ ಮುಂದುವರಿಯುತ್ತದೆಯೇ ಅಥವಾ ಬದಲಾಗುತ್ತದೆಯೇ ಎಂಬ ಕುತೂಹಲ ಹೆಚ್ಚಾಗಿದೆ.

ಲಾರ್ಡ್ಸ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಪಾಕಿಸ್ತಾನವನ್ನು 194 ರನ್‌ಗಳಿಂದ ಸೋಲಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಸರಣಿಯನ್ನು ಇಂಗ್ಲೆಂಡ್ 2–0 ಅಂತರದಲ್ಲಿ ವಶಪಡಿಸಿಕೊಂಡಿದೆ. ಪಾಕಿಸ್ತಾನಕ್ಕೆ 389 ರನ್‌ಗಳ ಗುರಿ ನೀಡಲಾಗಿತ್ತು. ಸೌದ್ ಶಕೀಲ್ 97 ರನ್ ಗಳಿಸಿ ಹೋರಾಡಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಈ ಸರಣಿ ಸೋಲಿನೊಂದಿಗೆ ಪಾಕಿಸ್ತಾನ್ ತಂಡ ಅಧಿಕೃತವಾಗಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ರೇಸ್​ನಿಂದ ಹೊರಬಿದ್ದಂತಾಗಿದೆ.

ಪಾಕಿಸ್ತಾನದ ಪ್ರಮುಖ ಬ್ಯಾಟರ್ ಬಾಬರ್ ಅಜಂ ಇಂಗ್ಲೆಂಡ್ ವಿರುದ್ಧದ ಲಾರ್ಡ್ಸ್ ಟೆಸ್ಟ್‌ನಲ್ಲೂ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 6 ರನ್ ಗಳಿಸಿ ಔಟಾದರು. ಅವರ ಬ್ಯಾಟಿಂಗ್ ವೈಫಲ್ಯ ಪಾಕಿಸ್ತಾನದ ಸೋಲಿಗೆ ಪ್ರಮುಖ ಕಾರಣಗಳಲ್ಲಿ ಒಂದಾಯಿತು. ಸರಣಿಯ ಆರಂಭದಲ್ಲಿ ಗಾಯದಿಂದ ಹೊರಗಿದ್ದ ಬಾಬರ್, ಎರಡನೇ ಟೆಸ್ಟ್‌ಗೆ ಮರಳಿದರೂ ಬ್ಯಾಟ್‌ನಿಂದ ತಂಡಕ್ಕೆ ನೆರವಾಗಲು ಸಾಧ್ಯವಾಗಲಿಲ್ಲ.

Kishor KV

Leave a Reply

Your email address will not be published. Required fields are marked *