ದೇಶಭಕ್ತಿ ಸಿನಿಮಾದಲ್ಲಿ ಬಿಚ್ಚಮ್ಮಳಾದ ದೀಪಿಕಾ ಪಡುಕೋಣೆ – ಪತ್ನಿಯ ಹಸಿಬಿಸಿ ದೃಶ್ಯಗಳನ್ನು ನೋಡಿ ಬೆಂಕಿ ಎಂದ ರಣ್‌ವೀರ್ ಸಿಂಗ್
ಬಾಲಿವುಡ್ ಬ್ಯೂಟಿಕ್ವೀನ್ ದೀಪಿಕಾ ಪಡುಕೋಣೆ ಈಗ ಬಿಚ್ಚಮ್ಮ ಅಂತಾ ಕರೆಸಿಕೊಳ್ಳುತ್ತಿದ್ದಾರೆ. ಶಾರುಖ್ ಖಾನ್ ಜೊತೆ ಪಠಾಣ್ ಸಿನಿಮಾದಲ್ಲಿ ಬಿಂದಾಸ್ ಆಗಿ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿರುವ ಡಿಪ್ಪಿ ಈಗ ಮತ್ತಷ್ಟೂ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ಕಾಟೇರ ಸಿನಿಮಾ ನೋಡೇ ಬಿಟ್ರಾ ಸುದೀಪ್? – ಫ್ಯಾನ್ಸ್ ಪ್ರಶ್ನೆಗೆ ಕಿಚ್ಚ ಕೊಟ್ಟ ಉತ್ತರ ಏನು?
ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆಯವರ ಫೈಟರ್ ಚಿತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ಸಿಕ್ಕಾಪಟ್ಟೆ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಇಬ್ಬರೂ ಏರ್ಫೋರ್ಸ್ ಆಫೀಸರ್ ಪಾತ್ರಗಳಲ್ಲಿ ನಟಿಸಿದ್ದಾರೆ. ಏರ್ಫೋರ್ಸ್ ಆಫೀಸರ್ ಆಗಿರುವ ದೀಪಿಕಾಳ ಬಹುತೇಕ ಬಟ್ಟೆಯಿಲ್ಲದೇ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಇದರಲ್ಲಿ ರೋಚಕ ಸನ್ನಿವೇಶಗಳ ಜೊತೆಗೆ ರೋಮ್ಯಾಂಟಿಕ್ ಸನ್ನಿವೇಶವೂ ಹೆಚ್ಚಿದೆ. ವಿಮಾನಗಳ ಫೈಟಿಂಗ್ ದೃಶ್ಯಗಳನ್ನು ರೋಚಕವಾಗಿ ತೋರಿಸಲಾಗಿದೆ. ಪಾಕಿಸ್ತಾನದ ವಿರುದ್ಧ ಸಾರಿರುವ ಸಮರದ ಬಗ್ಗೆಯೂ ತೋರಿಸಲಾಗಿದೆ. ಪುಲ್ವಾಮಾ ದಾಳಿಯ ಬಳಿಕ ಶಾಂತಿ ಕದಡಿದಾಗ ಶಂಷೇರ್ ಪಠಾನಿಯಾ ಮತ್ತವನ ತಂಡವನ್ನು ಜೀವಮಾನದ ಕಾರ್ಯಾಚರಣೆಗೆ ನಿಯೋಜಿಸಲಾಗುತ್ತದೆ. ದೇಶದ ಗಡಿಯಲ್ಲಿ ಏರ್ಸ್ಟ್ರೈಕ್ ನಡೆಸುವ ಮೂಲಕ ಶಂಷೇರ್ ದೇಶವನ್ನು ದುಷ್ಟರಿಂದ ಕಾಪಾಡುವ ಕಥೆಯನ್ನು ಹೇಳಲಾಗಿದೆ. ವೈಮಾನಿಕ ದಾಳಿಯ ರೋಚಕ ಸನ್ನಿವೇಶಗಳಿಂದ ಟ್ರೈಲರ್ ಗಮನ ಸೆಳೆಯುತ್ತದೆ ಆದರೆ ಇಂಥ ದೇಶಭಕ್ತಿ ಮೆರೆವ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಮತ್ತು ಹೃತಿಕ್ ರೋಷನ್ ಅವರ ರೊಮ್ಯಾನ್ಸ್ ಸೀನ್ ಹೇರಳವಾಗಿದೆ. ಫೈಟರ್ ಜೆಟ್ನ ಸಾಹಸವೇನೋ ರೋಮಾಂಚನಗೊಳಿಸುವಂತಿದೆ. ಹೃತಿಕ್, ದೀಪಿಕಾ ಮತ್ತು ಅನಿಲ್ ಕಪೂರ್ ಸರತಿಯಲ್ಲಿ ಪ್ಯಾಟಿ, ಮಿನ್ನಿ ಮತ್ತು ರಾಕಿ ಸ್ಕ್ವಾಡ್ರನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಬಿಕಿನಿ ತೊಟ್ಟು ಸಾಗರ ತೀರದಲ್ಲಿ ದೀಪಿಕಾ, ಹೃತಿಕ್ ರೋಷನ್ ಜೊತೆ ಇಂಟಿಮೇಟ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಲಿಪ್ಲಾಕ್ ಕೂಡ ನೋಡಬಹುದು. ಆ್ಯಕ್ಷನ್, ರೊಮ್ಯಾನ್ಸ್, ಎಮೋಷನ್, ದೇಶಭಕ್ತಿ ಎಲ್ಲಾ ಅಂಶಗಳನ್ನು ಚಿತ್ರದಲ್ಲಿ ಸೇರಿಸಲಾಗಿದೆ. ಆದರೆ ರೊಮ್ಯಾನ್ಸ್ ಹೆಸರಿನಲ್ಲಿ ಇಷ್ಟು ಕಳಪೆ ಮಟ್ಟದ ದೃಶ್ಯಗಳನ್ನು ತೋರಿಸುವ ಉದ್ದೇಶವೇನು ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.
ಆದರೆ, ಡಿಪ್ಪಿ ಗಂಡ ರಣವೀರ್ ಸಿಂಗ್ ಮಾತ್ರ ಟ್ರೇಲರ್‌ನಲ್ಲಿ ಪತ್ನಿ ದೀಪಿಕಾ ಬೆಂಕಿ ಹಚ್ಚಿದ್ದಾಳೆ ಎಂದು ಶ್ಲಾಘಿಸಿದ್ದಾರೆ. ದೀಪಿಕಾ ಟ್ರೇಲರ್‌ನಲ್ಲಿ ಬೆಂಕಿ ಹಚ್ಚಿದ್ದಾಳೆ. ಇದನ್ನು ನೋಡಿ ನನಗೆ ತುಂಬಾ ಅಚ್ಚರಿಯಾಯಿತು. ಬೆರಗುಗೊಳಿಸುವ ನಟನೆ ಎಂದು ಶ್ಲಾಘಿಸಿದ್ದಾರೆ. ಈ ಚಿತ್ರದಲ್ಲಿ ಹೃತಿಕ್ ರೋಷನ್ ಶರ್ಟ್ ಲೆಸ್ ಆಗಿ ಕಾಣಿಸಿಕೊಂಡಿದ್ದರೆ, ದೀಪಿಕಾ ಪೂರ್ಣ ಬೆತ್ತಲಾಗಲಿಲ್ಲ ಎನ್ನುವುದಷ್ಟೇ ಸಮಾಧಾನ ಎನ್ನುತ್ತಿದ್ದಾರೆ ನೆಟ್ಟಿಗರು.