ಶಾರುಖ್ ಖಾನ್ ಕೆನ್ನೆಗೆ ಮುತ್ತಿಟ್ಟ ದೀಪಿಕಾ ಪಡುಕೋಣೆ – ಬಾಲಿವುಡ್ ಬೆಡಗಿ ಕಿಸ್ಸಿಂಗ್ ಫೋಟೋ ಫುಲ್ ವೈರಲ್
ಬಾಲಿವುಡ್ ನಟ ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆಗೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ಇತ್ತೀಚೆಗಷ್ಟೇ ಇಬ್ಬರ ಅಭಿನಯದ ಪಠಾಣ್ ಸಿನಿಮಾ ಭರ್ಜರಿ ಸಕ್ಸಸ್ ಕಂಡಿತ್ತು. ಇದೀಗ ಈ ಜೋಡಿ ಮತ್ತೊಮ್ಮೆ ಸುದ್ದಿ ಮಾಡುತ್ತಿದೆ. ಶಾರುಖ್ ಖಾನ್ಗೆ ನಟಿ ದೀಪಿಕಾ ಪಡುಕೋಣೆ ಸಿಹಿ ಮುತ್ತು ನೀಡಿದ್ದಾರೆ. ಈ ಇಬ್ಬರೂ ಜವಾನ್ ಸಿನಿಮಾದ ಪೋಸ್ಟ್ ರಿಲೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹಣ ಪಡೆಯದೇ ಜವಾನ್ ಸಿನಿಮಾದಲ್ಲಿ ದೀಪಿಕಾ ನಟಿಸಿದ್ದಾರೆ.
ಇದನ್ನೂ ಓದಿ : ಬಾಲಿವುಡ್‌ನಲ್ಲಿ ಸೌತ್ ಲೇಡಿ ಸೂಪರ್‌ಸ್ಟಾರ್ ಖದರ್ – ಅತಿ ಹೆಚ್ಚು ಸಂಭಾವನೆ ಪಡೆದು ಸುದ್ದಿಯಾದ ನಯನತಾರಾ
ಬಾಲಿವುಡ್ ನ ಖ್ಯಾತ ನಟಿ ದೀಪಿಕಾ ಪಡುಕೋಣೆಗೆ ಈ ಹಿಂದೆ ಶಾರುಖ್ ಖಾನ್ (Shah Rukh Khan) ಮುತ್ತಿಟ್ಟು (Kiss) ಸಖತ್ ಸುದ್ದಿಯಾಗಿದ್ದರು. ಇದೀಗ ಸ್ವತಃ ದೀಪಿಕಾ ಪಡುಕೋಣೆ ಅವರೇ ಶಾರುಖ್ ಖಾನ್ ಗೆ ಕಿಸ್ ಮಾಡಿ ವೈರಲ್ ಆಗಿದ್ದಾರೆ. ಮುತ್ತಿಡುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಹಂಚಿಕೆಯಾಗಿದ್ದು, ದೀಪಿಕಾಗೆ ಹಲವರು ಗಂಡನನ್ನು ನೆನಪಿಸಿದ್ದಾರೆ. ಶಾರುಖ್ ಖಾನ್ ಜೊತೆ ಪಠಾಣ್, ಜವಾನ್ ಸೇರಿದಂತೆ ಒಂದರ ಮೇಲೊಂದು ಚಿತ್ರಗಳನ್ನು ಮಾಡುತ್ತಿದ್ದಾರೆ ದೀಪಿಕಾ ಪಡುಕೋಣೆ. ಅದರಲ್ಲೂ ಪಠಾಣ್ ಸಿನಿಮಾದ ಕೇಸರಿ ಹಾಡಿಗಾಗಿ ಈ ಜೋಡಿ ವಿವಾದಕ್ಕೆ ಕಾರಣವಾಗಿತ್ತು. ಕೇಸರಿ ಬಣ್ಣದ ಬಿಕಿನಿ ಹಾಕಿದ್ದಾರೆ ಎನ್ನುವ ಕಾರಣಕ್ಕಾಗಿ ದೀಪಿಕಾ ಮೇಲೆ ಹಿಂದೂಪರ ಹೋರಾಟಗಾರರು ಮುಗಿಬಿದ್ದಿದ್ದರು. ಇದೀಗ ಮುತ್ತಿನ ಫೋಟೋ ಇಟ್ಟುಕೊಂಡು ಮತ್ತೊಮ್ಮೆ ಟ್ರೋಲ್ ಮಾಡಲಾಗುತ್ತಿದೆ.
ಶಾರುಖ್ ಖಾನ್ ನಟನೆಯ ‘ಜವಾನ್’ ಚಿತ್ರಕ್ಕೆ ನಟಿ ದೀಪಿಕಾ ಪಡುಕೋಣೆ (Deepika Padukone) ಬರೋಬ್ಬರಿ 15 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗಿತ್ತು. ಅತಿಥಿ ಪಾತ್ರಕ್ಕೆ ಅಷ್ಟೊಂದು ಹಣ ಕೊಟ್ಟಿದ್ದಾರಾ ಎಂದು ಅಚ್ಚರಿಯನ್ನೂ ಹಲವರು ವ್ಯಕ್ತ ಪಡಿಸಿದ್ದರು. ಆ ಪ್ರಮಾಣದಲ್ಲಿ ಸಂಭಾವನೆ (Remuneration) ಪಡೆದ ವಿಚಾರ ವೈರಲ್ ಕೂಡ ಆಗಿತ್ತು. ಈ ವಿಷಯ ದೀಪಿಕಾ ಪಡುಕೋಣೆಗೂ ತಲುಪಿದೆ. ಜವಾನ್ ಸಿನಿಮಾಗಾಗಿ ದೀಪಿಕಾ ಪಡುಕೋಣೆ 15 ಕೋಟಿ ರೂಪಾಯಿ ಪಡೆದಿದ್ದಾರೆ ಎನ್ನುವ ವಿಚಾರ ಗೊತ್ತಾಗುತ್ತಿದ್ದಂತೆಯೇ ದೀಪಿಕಾ ಆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಜವಾನ್ ಚಿತ್ರಕ್ಕಾಗಿ ತಾವು ಒಂದು ಪೈಸೆಯನ್ನೂ ಸಂಭಾವನೆ ಪಡೆದಿಲ್ಲ ಎಂದು ಹೇಳಿಕೊಂಡಿದ್ದಾರೆ. ಶಾರುಖ್ ಖಾನ್ ಅವರಿಗಾಗಿ ನಾನು ಉಚಿತವಾಗಿ ನಟಿಸಿದ್ದೇನೆ ಎಂದಿದ್ದಾರೆ. ಈ ಹಿಂದೆಯೂ ತಾವು ಹಲವು ಸಿನಿಮಾಗಳಲ್ಲಿ ಈ ರೀತಿ ಉಚಿತವಾಗಿ ನಟಿಸಿದ್ದನ್ನು ಸ್ಮರಿಸಿದ್ದಾರೆ.