ವಿಕೃತ ಖುಷಿಗಾಗಿ ನಟಿಯರ ಡೀಪ್‌ಫೇಕ್ ವಿಡಿಯೋ – ಉತ್ತಮ ಉದ್ಯೋಗ ಒಳ್ಳೇ ಸಂಬಳವಿದ್ದ ಮೂವರಿಂದ ಇದೆಂಥಾ ಕೃತ್ಯ?

ವಿಕೃತ ಖುಷಿಗಾಗಿ ನಟಿಯರ ಡೀಪ್‌ಫೇಕ್ ವಿಡಿಯೋ – ಉತ್ತಮ ಉದ್ಯೋಗ ಒಳ್ಳೇ ಸಂಬಳವಿದ್ದ ಮೂವರಿಂದ ಇದೆಂಥಾ ಕೃತ್ಯ?

ಬೆಂಗಳೂರು ಪೊಲೀಸರು ನಟಿ ರುಕ್ಮಿಣಿ ವಸಂತ ಡೀಪ್‌ಫೇಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಅರೆಸ್ಟ್ ಮಾಡಿದ್ದಾರೆ. ಆದರೆ, ಈ ಮೂವರ ಬಗ್ಗೆ ಕೇಳಿದರೆ ನಮ್ಮ ಸಮಾಜ ಎತ್ತ ಸಾಗುತ್ತಿದೆ ಎಂಬ ಆತಂಕ ಆಗದೇ ಇರಲ್ಲ. ಯಾಕೆಂದರೆ, ಈ ರೀತಿ ಮಾಡುವುದು ವಿಕೃತ ಖುಷಿಗಾಗಿಯಂತೆ. ಅಷ್ಟೇ ಅಲ್ಲ, ಹೀಗೆ ಮಾಡಿದವರು ಕೂಡಾ ಸಾಫ್ಟ್‌ವೇರ್ ಇಂಜಿನಿಯರ್, ನರ್ಸಿಂಗ್ ಪದವೀಧರ, CA ಕಂಪನಿ ಉದ್ಯೋಗಿ.

ಇದನ್ನೂ ಓದಿ:ಫ್ರೀ ಬಸ್ ಪ್ರಯಾಣಕ್ಕೆ ಹೊಸ ರೂಲ್ಸ್ – ವೋಟರ್ ಐಡಿ ಇದ್ರೆ ಮಾತ್ರ ಸ್ಮಾರ್ಟ್ ಕಾರ್ಡ್

ನಟಿ ರುಕ್ಮಿಣಿ ವಸಂತ ಡೀಪ್‌ಫೇಕ್ ಪ್ರಕರಣದಲ್ಲಿ ಸಿಕ್ಕಿಬಿದ್ದ ಮೂವರು ಆರೋಪಿಗಳ ಜನ್ಮ ಜಾಲಾಡಿದ್ದಾರೆ ಪೊಲೀಸರು. ಜೊತೆಗೆ ಮೂವರು ಸುಶಿಕ್ಷಿತ ಆರೋಪಿಗಳ ಹಿನ್ನೆಲೆ ಬಹಿರಂಗ ಪಡಿಸಿದ್ದಾರೆ. ಇದನ್ನು ತಿಳಿದುಕೊಂಡರೆ ನಿಜಕ್ಕೂ ಅಚ್ಚರಿಯಾಗದೆ ಇರಲ್ಲ. ಈ ಪ್ರಕರಣದ ಮೊದಲ ಆರೋಪಿ 24 ವರ್ಷದ ರವಿಕುಮಾರ್. ಈತ ಬಾಗಲಕೋಟೆ ನಿವಾಸಿ. ರವಿ ಕುಮಾರ್ ಬಿಎಸ್‌ಸಿ ನರ್ಸಿಂಗ್ ಮುಗಿಸಿ ತನ್ನದೇ ಆದ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದನು. ಇತ್ತೀಚೆಗಷ್ಟೇ ಯೂಟ್ಯೂಬ್‌ನಿಂದ ಮೊದಲ ಗಳಿಕೆ (ಹಣ) ಪಡೆದಿದ್ದ ಈತನಿಗೆ ಸುಲಭವಾಗಿ ಹಣ ಸಂಪಾದಿಸುವ ಆಸೆ ಹುಟ್ಟಿತ್ತು. ಅಂದಿನಿಂದ ವೀಕ್ಷಣೆ (Views) ಹೆಚ್ಚಿಸಿಕೊಳ್ಳಲು ನಟಿಯರ ಡೀಪ್‌ಫೇಕ್ ವಿಡಿಯೋಗಳನ್ನು ಮಾಡಿ ಅಪ್ಲೋಡ್ ಮಾಡಲು ಶುರು ಮಾಡಿದ್ದನು.

ಎರಡನೇ ಆರೋಪಿ ರಂಜಿತ್ ಕುಮಾರ್. ಈತ ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್. ವಾರ್ಷಿಕ 20 ಲಕ್ಷ ರೂಪಾಯಿ ಭಾರಿ ಸಂಬಳದ ಪ್ಯಾಕೇಜ್ ಹೊಂದಿದ್ದ. ತಂತ್ರಜ್ಞಾನದ ಜ್ಞಾನವಿದ್ದ ಈತ ಕೇವಲ ವಿಕೃತ ಖುಷಿಗಾಗಿ, ಮತ್ತು ಮಜಾ ಮಾಡಲು ಎಲ್ಲಾ ಪ್ರಮುಖ ನಟಿಯರ ಎಐ ಡೀಪ್‌ಫೇಕ್ ವಿಡಿಯೋಗಳನ್ನು ತಯಾರಿಸುತ್ತಿದ್ದ.

ಇನ್ನೊಬ್ಬ ಆರೋಪಿ ಚಂದ್ರಕಾಂತ್. ಈತ ಮೂಲತಃ ತೀರ್ಥಹಳ್ಳಿಯವನು. ಬೆಂಗಳೂರಿನ ಪ್ರತಿಷ್ಠಿತ ಚಾರ್ಟೆಡ್ ಅಕೌಂಟೆಂಟ್  ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಒಳ್ಳೆಯ ಸಂಬಳ ಪಡೆಯುತ್ತಿದ್ದಾನೆ. ಕೇವಲ ವಿಕೃತ ಸಂತೋಷ ಮತ್ತು ಮಜಾ ತೆಗೆದುಕೊಳ್ಳಲು ನಟಿಯರ ಫೋಟೋಗಳನ್ನು ಡೀಪ್‌ಫೇಕ್ ಮಾಡುತ್ತಿದ್ದಾಗಿ ಈತನೂ ತಪ್ಪೊಪ್ಪಿಕೊಂಡಿದ್ದಾನೆ.

ಈ ಮೂವರು ಬಂಧಿತ ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಸುಶಿಕ್ಷಿತರು, ಒಳ್ಳೇ ಉದ್ಯೋಗದಲ್ಲಿದ್ದವರೇ ಇಂಥಾ ಸೈಬರ್ ಕ್ರೈಮ್ ಮಾಡುತ್ತಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆಯಾಗಿದೆ.

Sulekha

Leave a Reply

Your email address will not be published. Required fields are marked *