ನಟಿ ಕಾಜೋಲ್ ಬಟ್ಟೆ ಬದಲಾಯಿಸುತ್ತಿರುವ ವಿಡಿಯೋ ವೈರಲ್!‌

ನಟಿ ಕಾಜೋಲ್ ಬಟ್ಟೆ ಬದಲಾಯಿಸುತ್ತಿರುವ ವಿಡಿಯೋ ವೈರಲ್!‌

ಡೀಪ್​ ಫೇಕ್​ ವಿಡಿಯೋ ದೇಶಾದ್ಯಂತ ಭಾರಿ ಹಲ್​ಚಲ್​ ಸೃಷ್ಟಿಸಿದೆ. ಯಾರದ್ದೋ ದೇಹಕ್ಕೆ ಇನ್ನಾದರೋ ಮುಖ ಹಾಕಿ ಮೀಮ್ಸ್​ ಮಾಡುವುದು ಮಾಮೂಲು. ಆದರೆ, ಅಶ್ಲೀಲ ಎನ್ನುವ ವಿಡಿಯೋ ಒಂದಕ್ಕೆ ಇನ್ನೊಬ್ಬರ ಮುಖವನ್ನು ಹಾಕಿ ವಿಡಿಯೋ ಮಾಡಿ ಕಿಡಿಗೇಡಿಗಳು ವೈರಲ್‌ ಮಾಡುತ್ತಿದ್ದಾರೆ. ಇದೀಗ ಸೆಲೆಬ್ರಿಟಿಗಳನ್ನು ಟಾರ್ಗೆಟ್‌ ಮಾಡಿರುವ ಕಿಡಿಗೇಡಿಗಳು ಒಂದೊಂದೇ ವಿಡಿಯೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹರಿಬಿಡುತ್ತಿದ್ದಾರೆ. ಇನ್ನು ಡೀಪ್‌ ಪೇಕ್‌ ಕಾಟ ಸಿನಿಮಾರಂಗಕ್ಕೆ ತಪ್ಪಿದಂತೆ ಕಾಣುತ್ತಿಲ್ಲ. ರಶ್ಮಿಕಾ ಮಂದಣ್ಣ ಅವರ ವಿಡಿಯೋವನ್ನು ವೈರಲ್‌ ಮಾಡಿದ ಬಳಿಕ, ಕತ್ರಿನಾ ಕೈಫ್‌ ಫೋಟೋವನ್ನು ಆಶ್ಲೀಲವಾಗಿ ಡೀಪ್‌ ಫೇಕ್‌ ಮಾಡಲಾಗಿತ್ತು. ಇದೀಗ ಬಾಲಿವುಡ್‌ ಮತ್ತೊಬ್ಬ ನಟಿಯ ಡೀಪ್‌ ಫೇಕ್‌ ವಿಡಿಯೋವನ್ನು ಭಾರಿ ವೈರಲ್‌ ಆಗುತ್ತಿದೆ.

ಇದನ್ನೂ ಓದಿ:  ಬಹುಕಾಲದ ಗೆಳತಿ ಜೊತೆ ಗಾಯಕ ವಾಸುಕಿ ವೈಭವ್ ಮದುವೆ – ಚಿತ್ರರಂಗದ ಗಣ್ಯರಿಂದ ನವದಂಪತಿಗೆ ಶುಭಾಶಯ

ಹೌದು, ಖ್ಯಾತ ನಟಿ ಕಾಜೋಲ್ ಅವರ ಮುಖವನ್ನು ಜೋಡಿಸಿ ವಿಡಿಯೋವೊಂದು ವೈರಲ್‌ ಮಾಡಲಾಗಿದೆ. ಕಾಜೋಲ್‌ ಬಟ್ಟೆ ಬದಲಾಯಿಸುತ್ತಿರುವ ವಿಡಿಯೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಎಐ ಮೂಲಕ ಡೀಪ್‌ ಫೇಕ್‌ ಮಾಡಿ ಹರಿದು ಬಿಡಲಾಗಿದೆ.

ಈ ವಿಡಿಯೋವನ್ನು ಜೂ.5 ರಂದು ಟಿಕ್‌ ಟಾಕ್‌ ನಲ್ಲಿ ಸೋಶಿಯಲ್‌ ಮೀಡಿಯಾ ತಾರೆಯೊಬ್ಬರು ʼಗೆಟ್ ರೆಡಿ ವಿತ್ ಮಿ ಟ್ರೆಂಡ್ʼ ಅಡಿಯಲ್ಲಿ ಅಪ್‌ ಲೋಡ್‌ ಮಾಡಲಾಗಿತ್ತು. ಇದೇ ವಿಡಿಯೋವನ್ನು ಬಳಸಿಕೊಂಡು ವಿಡಿಯೋದಲ್ಲಿರುವವರ ಮುಖಕ್ಕೆ ಕಾಜೋಲ್‌ ಅವರ ಮುಖವನ್ನು ಜೋಡಿಸಲಾಗಿದೆ ಎಂದು ಫ್ಯಾಕ್ಟ್‌ ಚೆಕ್‌ ಮಾಡುವ ʼಬೂಮ್‌ʼ ವರದಿ ಮಾಡಿದೆ. ಸದ್ಯ ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಬಿಟೌನ್‌ ತಾರೆಯರು ಮಾತ್ರವಲ್ಲದೆ ಹಾಲಿವುಡ್‌ ಕಲಾವಿದರು ಕೂಡ ಡೀಪ್‌ ಫೇಕ್‌ ಬಲೆಗೆ ಸಿಲುಕಿದ್ದಾರೆ.

Shwetha M