ಕೀನ್ಯಾ ದೇಶದಲ್ಲಿ ಬರಗಾಲ ತಂದ ಆತಂಕ – ರೆಡ್ ಬಿಲ್ಡ್ ಕ್ವೆಲಿಯಾ ಹಕ್ಕಿಗಳ ಜೀವಕ್ಕೆ ಕಂಟಕ

ಕೀನ್ಯಾ ದೇಶದಲ್ಲಿ ಬರಗಾಲ ತಂದ ಆತಂಕ – ರೆಡ್ ಬಿಲ್ಡ್ ಕ್ವೆಲಿಯಾ ಹಕ್ಕಿಗಳ ಜೀವಕ್ಕೆ ಕಂಟಕ

ಕೀನ್ಯಾ ದೇಶದ ಸರ್ಕಾರ ಬರೋಬ್ಬರಿ ಆರು ಮಿಲಿಯನ್ ರೆಡ್ ಬಿಲ್ಡ್ ಕ್ವೆಲಿಯಾ (red-billed quelea ) ಹಕ್ಕಿಗಳನ್ನ ಕೊಲ್ಲಲು ಮುಂದಾಗಿದೆ. ಕ್ವೆಲಿಯಾ ಹಕ್ಕಿಗಳು ಆಫ್ರಿಕಾದಲ್ಲಿ ಕಂಡು ಬರುವ ಸಣ್ಣ ಗಾತ್ರದ ಗುಬ್ಬಚ್ಚಿ ತರಹದ ಪಕ್ಷಿ ಪ್ರಬೇಧವಾಗಿದ್ದು ಹುಲ್ಲಿನ ಬೀಜಗಳು ಮತ್ತು ಏಕದಳ ಧಾನ್ಯಗಳು ಇವುಗಳ ಪ್ರಮುಖ ಆಹಾರವಾಗಿದೆ. ಆದರೆ, ಆಫ್ರಿಕಾ ಖಂಡದ ಸೋಮಲಿಯಾ, ಇಥಿಯೋಪಿಯಾ, ಸುಡಾನ್, ಕೀನ್ಯಾ ಮತ್ತು  ದಕ್ಷಿಣ ಸುಡಾನ್ ಮೊದಲಾದ ದೇಶಗಳು ತೀವ್ರವಾಗಿ ಬರಗಾಲವನ್ನ ಎದುರಿಸುತ್ತಾ ಇವೆ. ಮುಂದುವರೆಯುತ್ತಿರುವ ಬರಗಾಲದಿಂದ ಆಹಾರದ ಕೊರತೆಯನ್ನ ಎದುರಿಸಬೇಕಾಗುತ್ತದೆ ಎನ್ನುವ ಭಯ ಈಗ ಕೀನ್ಯಾ ದೇಶದಲ್ಲಿ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಅಲ್ಲಿಯ ಪ್ರಮುಖ ಬೆಳೆಯಾದ ಏಕದಳ ಧಾನ್ಯಗಳನ್ನ ಕ್ವೆಲಿಯಾ ಹಕ್ಕಿಗಳು ನಾಶ ಮಾಡುತ್ತಿರುವ ಕಾರಣ ಕ್ವೆಲಿಯಾ ಹಕ್ಕಿಗಳನ್ನೇ ಕೊಲ್ಲೊದಿಕ್ಕೇ ಕೀನ್ಯಾ ಸರ್ಕಾರ ಮುಂದಾಗಿದೆ.

ಇದನ್ನೂ ಓದಿ:  ಗ್ಯಾಸ್ ಸ್ಟವ್ ಬಳಕೆಯಿಂದ ಮಕ್ಕಳಲ್ಲಿ ಅಸ್ತಮಾ ಹೆಚ್ಚಳ! – ನಿಷೇಧದ ಬಗ್ಗೆ ನಡೀತಿದೆ ಜೋರು ಚರ್ಚೆ..!

ದಿ ಗಾರ್ಡಿಯನ್ ಪತ್ರಿಕೆಯಲ್ಲಿ ವರದಿಯಾದ ಪ್ರಕಾರ ಈಗಾಗಲೇ 300 ಎಕರೆ ಭತ್ತದ ಗದ್ದೆಗಳು ಕ್ವೆಲಿಯಾ ಹಕ್ಕಿಗಳಿಂದ ನಾಶವಾಗಿದೆ. ರೆಡ್ ಬಿಲ್ಡ್ ಕ್ವೆಲಿಯಾ ಹಕ್ಕಿಗಳಾಗಿದ್ದರೂ ಇವುಗಳನ್ನ ಕೃಷಿ ಕೀಟಗಳೆಂದು ಕೂಡಾ ಕರೆಯಲಾಗುತ್ತಿದೆ. ಒಂದು ಕ್ವೆಲಿಯಾ ಹಕ್ಕಿ ದಿನಕ್ಕೆ 10 ಗ್ರಾಂ ನಷ್ಟು ಧಾನ್ಯಗಳನ್ನ ತಿನ್ನುತಿದ್ದು ಈಗಾಗಲೇ ಪಶ್ಚಿಮ ಕೀನ್ಯಾದ ರೈತರು ಸುಮಾರು 60 ಟನ್ ಧಾನ್ಯಗಳನ್ನ ಕ್ವಿಲಿಯಾ ಹಕ್ಕಿಗಳಿಂದಾಗಿ ನಷ್ಟ ಮಾಡಿಕೊಂಡಿದ್ದಾರೆ. ಕ್ವೆಲಿಯಾ ಹಕ್ಕಿಗಳ ಸಂಖ್ಯೆಯನ್ನ ಕಡಿಮೆ ಮಾಡುವ ಸಾಮಾನ್ಯ ವಿಧಾನವೆಂದರೆ ಫೆಂಥಿಯಾನ್ ಕೀಟನಾಶಕ ಔಷಧಿಯನ್ನ ಸಿಂಪಡಿಸುವುದು. ಕೀನ್ಯಾ ಸರ್ಕಾರವೂ ಫೆಂಥಿಯಾನ್ ಕೀಟನಾಶಕ ಸಿಂಪಡಿಸುವ ಮೂಲಕ ಕ್ವೆಲಿಯಾ ಹಕ್ಕಿಗಳನ್ನ ಕೊಲ್ಲುವ ಪ್ರಯತ್ನ ಮಾಡುತ್ತಿದೆ. ಆದರೆ ಫೆಂಥಿಯಾನ್ ಮಾನವ ಮತ್ತೂ ಉಳಿದ ಜೀವ ಸಂಕುಲಕ್ಕೆ ವಿಷಕಾರಿಯಾಗಿದ್ದು ಈ ಬಗ್ಗೆ ತಜ್ಞರು ಎಚ್ಚರಿಸಿದ್ದಾರೆ. ಅದಾಗಿಯೂ ಫೆಂಥಿಯಾನ್ ಸಿಂಪಡಿಸುವುದು  ಚರ್ಚೆಗೆ ಗ್ರಾಸವಾಗಿದೆ.

suddiyaana