ಹೋಟೆಲ್‌ ತಿಂಡಿ ಊಟದ ದರ ಶೇ 10ರಷ್ಟು ಹೆಚ್ಚಳಕ್ಕೆ ತೀರ್ಮಾನ –  ಆಗಸ್ಟ್‌ 1 ರಿಂದ ಹೊಸ ದರ ಜಾರಿ

ಹೋಟೆಲ್‌ ತಿಂಡಿ ಊಟದ ದರ ಶೇ 10ರಷ್ಟು ಹೆಚ್ಚಳಕ್ಕೆ ತೀರ್ಮಾನ –  ಆಗಸ್ಟ್‌ 1 ರಿಂದ ಹೊಸ ದರ ಜಾರಿ

ಬೆಂಗಳೂರು: ರಾಜ್ಯದ ಜನರಿಗೆ ಬೆಲೆ ಏರಿಕೆ ಶಾಕ್‌ ತಟ್ಟಿದೆ. ಅಕ್ಕಿ ಬೆಲೆ, ತರಕಾರಿ, ದಿನನಿತ್ಯ ವಸ್ತುಗಳ ದರ ಗಣನೀಯವಾಗಿ ಏರಿಕೆ ಕಂಡಿದೆ. ಬಡ, ಮಧ್ಯಮವರ್ಗ ಮಾತ್ರವಲ್ಲದೇ ಶ್ರೀಮಂತ ವರ್ಗಕ್ಕೂ ಬೆಲೆ ಏರಿಕೆ ಬಿಸಿ ತಟ್ಟಿದೆ. ಇದೀಗ ಹೋಟೆಲ್‌ಗಳ ತಿಂಡಿ-ತಿನಿಸುಗಳ ಬೆಲೆಯಲ್ಲಿ ಶೇ 10ರಷ್ಟು ಹೆಚ್ಚಳವಾಗಲಿದ್ದು, ಇದೇ ಆಗಸ್ಟ್‌ 1 ರಿಂದ ಬೆಲೆ ಏರಿಕೆ ಮಾಡಲಾಗುತ್ತಿದೆ ಎಂದು ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘ ತಿಳಿಸಿದೆ.

ಇದನ್ನೂ ಓದಿ: ಜ್ಞಾನವಾಪಿಯಲ್ಲಿ ವೈಜ್ಞಾನಿಕ ಸಮೀಕ್ಷೆ ಪ್ರಾರಂಭ – ಆಗಸ್ಟ್ 4ರಂದು ನ್ಯಾಯಾಲಯಕ್ಕೆ ASI ವರದಿ ಸಲ್ಲಿಕೆ!

‘ಈಗಾಗಲೇ ಅಕ್ಕಿ, ತರಕಾರಿ ಸೇರಿ ದಿನನಿತ್ಯದ ವಸ್ತುಗಳ ಬೆಲೆಗಳು ಗಗನಕ್ಕೇರಿದ್ದು, ಹೋಟೆಲ್‌ ಉದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಒಂದು ಕೆ.ಜಿ. ಕಾಫಿ ಪುಡಿಗೆ 180ರಿಂದ 210 ಹೆಚ್ಚಳವಾಗಿದೆ. ಆಗಸ್ಟ್ 1ರಿಂದ ಹಾಲಿನ ದರವು ಹೆಚ್ಚಾಗಿದೆ. ಇದರಿಂದ, ಕಾಫಿ ಮತ್ತು ಚಹಾ ಬೆಲೆ 2 ರಿಂದ 3 ಹೆಚ್ಚಳವಾಗಲಿದೆ. ತಿಂಡಿ- ತಿನಿಸುಗಳ ದರದಲ್ಲಿ 5 ಹಾಗೂ ಊಟಕ್ಕೆ 10 ಹೆಚ್ಚಳವಾಗಲಿದೆ. ಈ ಬಗ್ಗೆ ಮಂಗಳವಾರ ನಡೆಯಲಿರುವ ಸಂಘದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಸಂಘದ ಗೌರವ ಕಾರ್ಯದರ್ಶಿ ವಿರೇಂದ್ರ ಕಾಮತ್‌ ಮಾಹಿತಿ ನೀಡಿದರು.

‘ಈಗಾಗಲೇ ಕೆಲ ಹೋಟೆಲ್‌ಗಳಲ್ಲಿ ದರಗಳನ್ನು ಹೆಚ್ಚಿಸಲಾಗಿದೆ. ಅಧಿಕೃತವಾಗಿ ಆಗಸ್ಟ್ 1ರಂದು ಎಲ್ಲ ತಿಂಡಿ-ತಿನಿಸುಗಳ ದರಗಳಲ್ಲಿ ಹೆಚ್ಚಳವಾಗಲಿದೆ’ ಎಂದು ಸಂಘದ ಅಧ್ಯಕ್ಷ ಪಿ.ಸಿ. ರಾವ್ ಹೇಳಿದರು.

ತಿಂಡಿ-ಊಟದ ಪ್ರಸ್ತುತ ದರ

  • ಮಸಾಲೆ ದೋಸೆ 50-60 ರೂ.
  • ಪೂರಿ ಸಾಗು  40-50 ರೂ.
  • ರೈಸ್‌ಬಾತ್‌  35-45 ರೂ.
  • ಚೌಚೌ ಬಾತ್‌ 40-50 ರೂ.
  • ಕಾಫಿ-ಟೀ 15-20 ರೂ.
  • ಫ್ರೈಡ್‌ರೈಸ್‌ 80-100 ರೂ.
  • ಊಟ (ಚಪಾತಿ, ಅನ್ನ ಸೇರಿ) 60-80 ರೂ.
  • ನಾರ್ಥ್‌ ಇಂಡಿಯನ್‌ ಥಾಲಿ 100-110 ರೂ.
  • ಇಡ್ಲಿ-ವಡೆ    40-50 ರೂ.

suddiyaana