ಭಾರತ ಸೇರಿ ಜಗತ್ತಿಗೆ ಕಡು ಬಡತನದ ಎಚ್ಚರಿಕೆ ನೀಡಿದ ಮೋದಿ – ಪ್ರಧಾನಿ ಮಾತಿನ ಬೆನ್ನಲ್ಲೇ ಶಾಕಿಂಗ್ ಸತ್ಯ ರಿವೀಲ್!

ಭಾರತ ಸೇರಿ ಜಗತ್ತಿಗೆ ಕಡು ಬಡತನದ ಎಚ್ಚರಿಕೆ ನೀಡಿದ ಮೋದಿ – ಪ್ರಧಾನಿ ಮಾತಿನ ಬೆನ್ನಲ್ಲೇ ಶಾಕಿಂಗ್ ಸತ್ಯ ರಿವೀಲ್!

ಕೆಲ ದಿನಗಳ ಹಿಂದೆ ಭಾರತೀಯರು ಅನವಶ್ಯಕವಾಗಿ ಬಂಗಾರ ಖರೀದಿ ಮಾಡದಂತೆ ಕರೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಈಗ ಮತ್ತೊಂದು ಎಚ್ಚರಿಕೆಯ ಸಂದೇಶ ಕೊಟ್ಟಿದ್ದಾರೆ. ಹಾಗೇ ಮೋದಿಯವರ ಮಾತಿನ ಮರ್ಮದ ಹಿಂದಿನ ಉದ್ದೇಶವೇನು ಅನ್ನೋ ಬಗ್ಗೆ ಆತಂಕ ಶುರುವಾಗಿದೆ. ಭಾರತ ಸೇರಿದಂತೆ ಜಗತ್ತಿನಾದ್ಯಂತ ಕಡುಬಡತನ ತಲೆ ದೋರಲಿದೆಯಾ ಅನ್ನೋ ಭೀತಿ ಎದುರಾಗಿದೆ.

ಇದನ್ನೂ ಓದಿ : KKR ಗೆದ್ದರೆ RCBಗೆ ಹೇಗೆ ಲಾಭವಾಗುತ್ತೆ? – ತಿಲಕ್‌ ವರ್ಮ ಬಣ್ಣದ ಬಗ್ಗೆ ಅರ್ಷದೀಪ್ ನಿಂದನೆ ಸರಿನಾ?

ಅಮೆರಿಕ-ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧದಿಂದಾಗಿ ಭಾರತದಲ್ಲಿ ಸಾಕಷ್ಟು ಆರ್ಥಿಕ ಸಮಸ್ಯೆಗಳು ಉಂಟಾಗುತ್ತಿವೆ. ಇಂಧನ ಪೂರೈಕೆಯಲ್ಲಿ ಭಾರೀ ವ್ಯತ್ಯಯವಾಗಿದೆ. ಇದೇ ರೀತಿಯ ಪರಿಸ್ಥಿತಿ ಮುಂದುವರಿದರೆ ಹಾಗೇ ಜಗತ್ತನ್ನು ಕಾಡುತ್ತಿರುವ ಸರಣಿ ಬಿಕ್ಕಟ್ಟುಗಳಿಂದ ಜಾಗತಿಕ ಸಮುದಾಯ ಪಾಠ ಕಲಿಯದಿದ್ದರೆ, ಪ್ರಪಂಚದಾದ್ಯಂತ ಮತ್ತೊಮ್ಮೆ ಭೀಕರ ಬಡತನ ತಲೆದೂಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಠಿಣ ಎಚ್ಚರಿಕೆ ನೀಡಿದ್ದಾರೆ. ಕಳೆದ ಕೆಲವು ವರ್ಷಗಳ ಅವಧಿಯನ್ನು ಡಿಸಾಸ್ಟರ್ ಡಿಕೇಡ್ ಎಂದು ಬಣ್ಣಿಸಿರುವ ಅವರು, ಜಾಗತಿಕ ಸ್ಥಿರತೆಗೆ ಎದುರಾಗಿರುವ ಸವಾಲುಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ನವದೆಹಲಿಯಲ್ಲಿ ನಡೆದ ಆರ್ಥಿಕ ತಜ್ಞರ ಜತೆ ಉನ್ನತ ಮಟ್ಟದ ಸಭೆಯನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ಮೋಡಿ, ಜಾಗತಿಕ ಆರ್ಥಿಕತೆಯ ಸಧ್ಯದ ಪರಿಸ್ಥಿತಿಯನ್ನು ತೆರೆದಿಟ್ಟಿದ್ದಾರೆ. ಪ್ರಧಾನಿ ಮೋದಿಯವರ ಮಾತುಗಳೇ ಈಗ ಆರ್ಥಿಕ ವಲಯದಲ್ಲಿ ಆಘಾತ ಮೂಡಿಸಿದೆ.

ಕಳೆದ ಕೆಲವು ವಾರಗಳಿಂದ ನಡೆಯುತ್ತಿರೋ ಯುದ್ಧ ಮತ್ತು ರಾಜತಾಂತ್ರಿಕ ಬಿಕ್ಕಟ್ಟುಗಳಿಂದಾಗಿ ತೈಲ ಹಾಗೂ ಆಹಾರ ಧಾನ್ಯಗಳ ಬೆಲೆ ಗಗನಕ್ಕೇರಿದ್ದು, ಹಣದುಬ್ಬರ ಅಪಾಯಕಾರಿ ಮಟ್ಟವನ್ನು ತಲುಪಿದೆ. ಕಳೆದ ಒಂದು ದಶಕ ನಿಜಕ್ಕೂ ದುರಂತದ ದಶಕವಾಗಿದೆ. ಸೂಕ್ತ ನೀತಿಗಳು, ಬಲಿಷ್ಠ ಆಡಳಿತ ಮತ್ತು ನಿರಂತರ ಆರ್ಥಿಕ ಸುಧಾರಣೆಗಳು ಇಲ್ಲದಿದ್ದರೆ , ಕಳೆದ ಹತ್ತು ವರ್ಷಗಳಲ್ಲಿ ಬಡತನ ನಿರ್ಮೂಲನೆಯಲ್ಲಿ ಸಾಧಿಸಿದ ಪ್ರಗತಿಯು ಉಲ್ಟಾ ಆಗುವುದು ಗ್ಯಾರಂಟಿ. ಜಗತ್ತು ಮತ್ತೆ ಬಡತನದ ಕೂಪಕ್ಕೆ ತಳ್ಳಲ್ಪಡಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು. ಹಾಗೇ ಜಾಗತಿಕ ಬಿಕ್ಕಟ್ಟುಗಳ ನಡುವೆಯೂ ಭಾರತ ಹೇಗೆ ಚೇತರಿಸಿಕೊಂಡಿತು ಎಂಬುದನ್ನು ವಿವರಿಸಿದ ಪಿಎಂ ಮೋದಿ, ಸಮಯೋಚಿತ ನೀತಿಗಳು ಮತ್ತು ಆರ್ಥಿಕ ಸುಧಾರಣೆಗಳ ಕಾರಣದಿಂದಾಗಿ ಭಾರತವು ಕೋವಿಡ್ ಆಘಾತದಿಂದ ಹೊರಬಂದಿದ್ದಲ್ಲದೆ, ಮತ್ತಷ್ಟು ಬಲಿಷ್ಠವಾಗಿ ಹೊರಹೊಮ್ಮಿದೆ. ಭವಿಷ್ಯದ ಆಘಾತಗಳನ್ನು ತಡೆಯಲು ಜಾಗತಿಕ ನಾಯಕರು ಸ್ವಾವಲಂಬನೆ ಆತ್ಮನಿರ್ಭರತೆ, ನಾವೀನ್ಯತೆ , ಕೌಶಲ್ಯಾಭಿವೃದ್ಧಿ ಮತ್ತು ಎಲ್ಲರನ್ನೂ ಒಳಗೊಂಡ ಬೆಳವಣಿಗೆಯತ್ತ ಗಮನ ಹರಿಸಬೇಕು ಎಂದು ಅವರು ಕರೆ ನೀಡಿದ್ದಾರೆ.

ಭಾರತ ದೇಶ ಹೇಳಿ ಕೇಳಿ ಹೆಚ್ಚು ಜನಸಂಖ್ಯೆಯನ್ನ ಹೊಂದಿರುವ ದೇಶ. ಹೀಗಾಗಿ ಆರ್ಥಿಕ ಬಿಕ್ಕಟ್ಟು ಎದುರಾಗದೆ ಅತಿದೊಡ್ಡ ಸಂಕಷ್ಟ ಎದುರಾಗಲಿದೆ. ಯಾಕಂದರೆ ಭಾರತವು ಹೆಚ್ಚು ಅಪಾಯಕ್ಕೆ ಒಳಗಾಗುವ ದೇಶಗಳಲ್ಲಿ ಒಂದಾಗಿದೆ. ಏಕೆಂದರೆ ಅದರ ಕಚ್ಚಾ ತೈಲ ಆಮದುಗಳಲ್ಲಿ ಸುಮಾರು ಶೇ.46 ತೈಲ ಮಧ್ಯಪ್ರಾಚ್ಯದಿಂದ ಬರುತ್ತಿದೆ. ಕರೆನ್ಸಿ ಅಪಮೌಲ್ಯವೂ ಭಾರತದ ಮೇಲೆ ಪರಿಣಾಮ ಬೀರಲಿದೆ  ಎಂದು ಭೌಗೋಳಿಕ ರಾಜಕೀಯ ಅಪಾಯಗಳ ಕುರಿತಾದ ಜಾಗತಿಕ ವರದಿಯಲ್ಲಿ ಮೂಡೀಸ್‌ ಅಭಿಪ್ರಾಯಪಟ್ಟಿದೆ. ತೈಲ ಆಪತ್ತಿನಿಂದ ಭಾರತದ ಜಿಡಿಪಿ ಶೇ.6.8ರ ಬದಲು 6ಕ್ಕೆ ಇಳಿಯಬಹುದು ಎಂದು ಮೂಡೀಸ್‌ ಅಂದಾಜಿಸಿತ್ತು. ಇದರ ಬೆನ್ನಲ್ಲೇ ಈ ವರದಿ ಬಂದಿದೆ. ತೈಲ ಆಮದುದಾರ ಪ್ರಮುಖ ದೇಶಗಳಾದ ಚೀನಾ, ಭಾರತ, ಜಪಾನ್ ಮತ್ತು ಕೊರಿಯಾಗಳು ಇರಾನ್ ಜೊತೆ ದ್ವಿಪಕ್ಷೀಯವಾಗಿ ಮಾತುಕತೆ ನಡೆಸುತ್ತವೆ ಎಂದು ನಾವು ನಿರೀಕ್ಷಿಸುತ್ತೇವೆ. ಬಹುಶಃ ಲಾರಕ್ ದ್ವೀಪದ ಬಳಿ ಮತ್ತು ಒಮಾನಿ ಪ್ರಾದೇಶಿಕ ಜಲಮಾರ್ಗದ ಮೂಲಕ ಪ್ರತ್ಯೇಕ ತೈಲ ಸಾಗಣೆ ಕಾರಿಡಾರ್‌ ರೂಪುಗೊಳ್ಳಬಹುದು. ಆದಾಗ್ಯೂ 2026ರಲ್ಲಿ ಯುದ್ಧಕ್ಕಿಂತ ಮೊದಲು ಇದ್ದಂತೆ ಪೂರೈಕೆ ಸಹಜ ಸ್ಥಿತಿಗೆ ಬರುವುದು ಕಷ್ಟ ಸಾಧ್ಯ ಎನ್ನಲಾಗಿದೆ.

Shantha Kumari

Leave a Reply

Your email address will not be published. Required fields are marked *