ಸಾಲಗಾರರ ಕಾಟಕ್ಕೆ ಬೇಸತ್ತು ತನ್ನ ಕಿಡ್ನಿಯನ್ನೇ ಸೇಲ್ ಮಾಡಿದ ರೈತ!

ಸಾಲ ಮಾಡಿದ್ರೆ ಅದನ್ನ ತೀರಿಸೋದು ಕಷ್ಟ. ಕೆಲವೊಮ್ಮೆ ಸಾಲಗಾರರ ಕಾಟ ತಡೆಯೋಕೆ ಆಗದೇ ಆತ್ಮಹತ್ಯೆ ಮಾಡಿಕೊಂಡಿದ್ದೂ ಇದೆ. ಆದ್ರೀಗ ಇಲ್ಲೊಬ್ಬ ರೈತ ಸಾಲ ಪಾವತಿಸಲು ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ರಿಷಬ್, ನಾನು, ರಕ್ಷಿತ್ ಒಟ್ಟಿಗೆ ಸಿನಿಮಾ ಮಾಡ್ತೀವಿ.. ಆದ್ರೆ ಕಾಂತಾರದಲ್ಲಿ ನಟಿಸಲ್ಲ ಎಂದ ರಾಜ್ ಬಿ ಶೆಟ್ಟಿ!
ಈ ಘಟನೆ ಮಹಾರಾಷ್ಟ್ರದ, ಚಂದ್ರಾಪುರದಲ್ಲಿ ನಡೆದಿದೆ. ರೋಷನ್ ಸದಾಶಿವ್ ಕುಡೆ ಎಂಬಾತ 2021ರಲ್ಲಿ ಸಾಲ ಮಾಡಿದ್ದರು. ಸದಾಶಿವ್ ಹಸು ಖರೀದಿಸಲು 1 ಲಕ್ಷ ಸಾಲ ಮಾಡಿದ್ದಾರೆ. ಇದಕ್ಕೆ 40% ಬಡ್ಡಿ ಹಾಕಲಾಗಿತ್ತು. ಆದ್ರೆ ಖರೀಸಿದ ಹಸು ಸಾವನ್ನಪ್ಪಿದೆ. ಇದ್ರಿಂದಾಗಿ ನಷ್ಟ ಆಗಿದ್ದು, ಸರಿಯಾದ ಸಮಯಕ್ಕೆ ಸಾಲ ತೀರಿಸಲು ಸಾಧ್ಯ ಆಗಿಲ್ಲ. ಇದ್ರಿಂದಾಗಿ ಅವರ ಸಾಲ 70 ಲಕ್ಷ ರೂ.ಗೆ ತಲುಪಿತ್ತು. ದಿನ ಕಳೆದಂತೆ ಸಾಲಗಾರರ ಕಾಟ ಹೆಚ್ಚಾಗಿದೆ. ತಮ್ಮ ಭೂಮಿಯ ಒಂದು ಭಾಗವನ್ನು, ಹಾಗೆಯೇ ಅವರ ಟ್ರ್ಯಾಕ್ಟರ್ ಮತ್ತು ಮನೆಯ ವಸ್ತುಗಳನ್ನು ಮಾರಿದರು, ಆದರೂ ಸಾಲ ತೀರಿಸಲಾಗಲಿಲ್ಲ.ಸಾಲ ವಸೂಲು ಮಾಡಲು ಬಂದವರು ಕಿಡ್ನಿಯನ್ನು ಮಾರುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಹಾಗಾಗಿ ಬೇರೆ ದಾರಿ ಕಾಣದೆ ತಮ್ಮ ಕಿಡ್ನಿಯನ್ನ 8 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಈ ವಿಷಯ ಬಹಿರಂಗವಾದ ನಂತರ, ಪೊಲೀಸರು ತನಿಖೆ ಆರಂಭಿಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಇದೀಗ ಈ ಪ್ರರಕಣ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಿಶೋರ್ ಬವಾಂಕುಲೆ, ಮನೀಶ್ ಘಟ್ಬಂಧೆ, ಲಕ್ಷ್ಮಣ್ ಉರ್ಕುಡೆ, ಪ್ರದೀಪ್ ಬವಾಂಕುಲೆ, ಸಂಜಯ್ ಬಲ್ಲಾರ್ಪುರೆ ಮತ್ತು ಸತ್ಯವಾನ್ ಬೋರ್ಕರ್ ವಿರುದ್ಧ ಅಕ್ರಮ ಸಾಲ ನೀಡಿದ ಆರೋಪ ಹೊರಿಸಲಾಗಿದೆ. ಈಗಾಗಲೇ ನಾಲ್ವರನ್ನ ಅರೆಸ್ಟ್ ಮಾಡಲಾಗಿದೆ ಎಂದು ವರದಿಯಾಗಿದೆ.

ನೋಡಿರಿ

