ಡೆತ್ ಓವರ್ ಸ್ಪೆಷಲಿಸ್ಟ್ ಡೇವಿಡ್  – ಸಿಕ್ಸರ್ ಗಳಲ್ಲೇ ದಾಖಲೆ ಬರೆದ ಟಿಮ್  

ಡೆತ್ ಓವರ್ ಸ್ಪೆಷಲಿಸ್ಟ್ ಡೇವಿಡ್  – ಸಿಕ್ಸರ್ ಗಳಲ್ಲೇ ದಾಖಲೆ ಬರೆದ ಟಿಮ್  

2 ವರ್ಷಗಳ ಬಳಿಕ ಕೆಕೆಆರ್ ವಿರುದ್ಧ ಭರ್ಜರಿ ಗೆಲುವು. 6,155 ದಿನಗಳ ನಂತ್ರ ಚೆನ್ನೈ ಭದ್ರಕೋಟೆ ಛಿದ್ರ. ಆರಂಭದಲ್ಲೇ ಹಳೇ ಲೆಕ್ಕಗಳನ್ನೆಲ್ಲಾ ಚುಕ್ತಾ ಮಾಡಿ ಮೂರನೇ ಪಂದ್ಯಕ್ಕೆ ರೆಡಿಯಾಗಿರೋ ಆರ್​ಸಿಬಿ ಗುಜರಾತ್ ಬೇಟೆಗೆ ಸರ್ವಸನ್ನದ್ಧವಾಗಿದೆ. ಈ ಮ್ಯಾಚ್​ನಲ್ಲೂ ಟಿಮ್ ಡೇವಿಡ್ ಪವರ್ ಹಿಟ್ಟರ್ ಆಗ್ತಾರಾ ಅಂತಾ ಫ್ಯಾನ್ಸ್ ಕಾಯ್ತಿದ್ದಾರೆ.

ಇದನ್ನೂ ಓದಿ : ಬೆಂಗಳೂರಿನಲ್ಲಿ ಆಲಿಕಲ್ಲು ಸಹಿತ ಅಬ್ಬರಿಸಲಿದೆ ಮಳೆ – ಕರ್ನಾಟಕದ ಹಲವೆಡೆ ಮಳೆ ಪೂರ್ವ ಮುಂಗಾರು ಆರ್ಭಟ ಶುರು

ಚೆನ್ನೈ ವಿರುದ್ಧದ ಪಂದ್ಯದಲ್ಲಿ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ಟಿಮ್ ಡೇವಿಡ್ ಕೇವಲ 8 ಎಸೆತಗಳಲ್ಲಿ ಅಜೇಯ 22 ರನ್ ಗಳಿಸಿದರು. ಸ್ಯಾಮ್ ಕರನ್ ಎಸೆದ 20ನೇ ಓವರ್‍‌ನಲ್ಲಿ ಡೇವಿಡ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಬ್ಯಾಕ್ ಟು ಬ್ಯಾಕ್ 3 ಸಿಕ್ಸರ್ ಗಳನ್ನ ಬಾರಿಸಿದ್ರು. ಈ ಮೂಲಕ ಐಪಿಎಲ್ ಡೆತ್‌ ಓವರ್‍‌ಗಳಲ್ಲಿ ಅತಿಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆ ಟಿಮ್ ಡೇವಿಡ್ ಹೆಸರಿನಲ್ಲಿದೆ. ಈವರೆಗೆ ಐಪಿಎಲ್ ಡೆತ್ ಓವರ್‍‌ಗಳಲ್ಲಿ ಡೇವಿಡ್ ಒಟ್ಟು 28 ಸಿಕ್ಸರ್ ಬಾರಿಸಿ ನಂಬರ್ 1 ಪ್ಲೇಸ್ ನಲ್ಲಿದ್ದಾರೆ.

ಮೆಗಾ ಹರಾಜಿಗೂ ಮುನ್ನ 2 ಕೋಟಿಯ ಮೂಲ ಬೆಲೆಯೊಂದಿಗೆ ಮೆಗಾ ಹರಾಜಿನಲ್ಲಿ ಹೆಸರನ್ನು ನೋಂದಾಯಿಸಿಕೊಂಡಿದ್ದ ಆಸ್ಟ್ರೇಲಿಯಾದ ಆಲ್‌ರೌಂಡರ್ ಟಿಮ್ ಡೇವಿಡ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ 3 ಕೋಟಿ ರೂ.ಗೆ ಖರೀದಿ ಮಾಡಿತ್ತು. ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ಡೇವಿಡ್ ಅವರನ್ನು ಬಿಡುಗಡೆಗೊಳಿಸಿತ್ತು. ಡೇವಿಡ್ ಅವರು ಮುಂಬೈ ಇಂಡಿಯನ್ಸ್‌ಗೆ ಸೇರುವ ಮೊದಲು 2021 ರಲ್ಲಿ ಆರ್​ಸಿಬಿ ತಂಡ ಸೇರುವ ಮೂಲಕ ಐಪಿಎಲ್ ಕರಿಯರ್ ಸ್ಟಾರ್ಟ್ ಮಾಡಿದ್ರು.     2023 ರಲ್ಲಿ 16 ಪಂದ್ಯಗಳನ್ನು ಆಡಿದ್ದ ಡೇವಿಡ್ ಸುಮಾರು 160 ರ ಸ್ಟ್ರೈಕ್ ರೇಟ್‌ನಲ್ಲಿ 231 ರನ್ ಗಳಿಸಿದ್ದರು.  2024ರಲ್ಲಿ 13 ಪಂದ್ಯಗಳನ್ನು ಆಡಿ 155 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ 241 ರನ್ ಗಳಿಸಿದ್ದರು.

ಎರಡು ಮ್ಯಾಚ್​ಗಳನ್ನ ಗೆದ್ದಿರೋ ಆರ್​ಸಿಬಿಯಲ್ಲಿ ಒಬ್ರಿಗಿಂತ ಒಬ್ರು ಪವರ್ ಹಿಟ್ಟರ್​ಗಳಾಗಿ ಕಾಣ್ತಿದ್ದಾರೆ. ಫಿಲ್ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ ಜೋಡಿ ಪವರ್ ಪ್ಲೇನಲ್ಲಿ ಧಮಾಕೇಧಾರ್ ಪರ್ಫಾಮೆನ್ಸ್ ನೀಡ್ತಿದೆ. ಇವ್ರಿಬ್ಬರ ಪವರ್ ಹಿಟ್ಟಿಂಗ್ ನಿಂದ ಪವರ್ ಪ್ಳೇನಲ್ಲಿ ಉತ್ತಮ ಸ್ಕೋರ್ ಕಲೆ ಹಾಕ್ತಿದ್ದಾರೆ. ಆ ನಂತ್ರ ಬರೋ ರಜತ್ ಪಾಟೀದಾರ್ ಅಂತೂ ಸಿಕ್ಸ್, ಫೋರ್​ಗಳ ಮೇಲೆಯೇ ಕಾನ್ಸಂಟ್ರೇಟ್ ಮಾಡ್ತಿದ್ದಾರೆ. ಇನ್ನು ದೇವದತ್ ಪಡಿಕ್ಕಲ್ ಫಸ್ಟ್ ಮ್ಯಾಚಲ್ಲಿ ನಿರಾಸೆ ಮಾಡಿದ್ರೂ ಚೆನ್ನೈ ವಿರುದ್ಧದ ಮ್ಯಾಚಲ್ಲಿ ಭರವಸೆ ಮೂಡಿಸಿದ್ದಾರೆ. ಇವ್ರ ಜೊತೆಗೆ ಜಿತೇಶ್ ಶರ್ಮಾ, ಲಿವಿಂಗ್ ಸ್ಟೋನ್ ಕೂಡ ಅಗ್ರೆಸ್ಸಿವ್ ಬ್ಯಾಟಿಂಗ್ ಇಂಟೆಂಟ್ ತೋರಿಸಿದ್ದಾರೆ. 7ನೇ ಸ್ಲಾಟ್​ನಲ್ಲಿ ಕಣಕ್ಕಿಳಿದಿದ್ದ ಟಿಮ್ ಡೇವಿಬ್ ಸಿಕ್ಸರ್​ಗಳ ಮೂಲಕವೇ ಲಾಸ್ಟ್ ಓವರ್​ಗಳಲ್ಲಿ ಡೀಲ್ ಮಾಡ್ತಿದ್ದಾರೆ. ಕೃನಾಲ್ ಪಾಂಡ್ಯ ಕೂಡ ಆಲ್​ರೌಂಡರ್ ಆಗಿರೋದ್ರಿಂದ ಒಂದಷ್ಟು ರನ್ಸ್ ನಿರೀಕ್ಷೆ ಮಾಡ್ಬೋದು. ಹೀಗಾಗಿ ನಂಬರ್ 1ನಿಂದ ನಂಬರ್ 8ವರೆಗೂ ಬ್ಯಾಟಿಂಗ್ ಸಾಮರ್ಥ್ಯ ಇದ್ದು ಆರ್ ಸಿಬಿ ಟೀಂ ಹ್ಯಾಟ್ರಿಕ್ ವಿಕ್ಟರಿ ನಿರೀಕ್ಷೆಯಲ್ಲಿದೆ.

Shantha Kumari

Leave a Reply

Your email address will not be published. Required fields are marked *