ಒಂದು ಹಾವು.. ಮೂರು ಮುಂಗುಸಿಯ ಬಿಗ್‌ ಫೈಟ್‌! – ರಣರೋಚಕ ಕಾದಾಟದಲ್ಲಿ ಗೆದ್ದಿದ್ಯಾರು?

ಒಂದು ಹಾವು.. ಮೂರು ಮುಂಗುಸಿಯ ಬಿಗ್‌ ಫೈಟ್‌! – ರಣರೋಚಕ ಕಾದಾಟದಲ್ಲಿ ಗೆದ್ದಿದ್ಯಾರು?

ಹಾವು ಹಾಗೂ ಮುಂಗುಸಿ ಬದ್ಧ ವೈರಿಗಳು.. ಎದುರಿಗೆ ಸಿಕ್ಕಿದ್ರೆ ಕಾದಾಟಕ್ಕೆ ನಿಲ್ಲುತ್ತವೆ. ಮುಂಗುಸಿ ಹಾವನ್ನ ಕೊಲ್ಲೋವರೆಗೂ ಬಿಡುವುದಿಲ್ಲ. ಅಟ್ಟಿಸಿಕೊಂಡು ಹೋಗಿ ಸೆಣೆಸಾಟ ನಡೆಸುತ್ತದೆ. ಇದೀಗ ಮೂರು ಮುಂಗುಸಿಗಳು ಹಾವಿನೊಂದಿಗೆ ಕಾದಾಟ ನಡೆಸಿರುವ ದೃಶ್ಯ ಸೆರೆಯಾಗಿದೆ. ಇದರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ: ಅಡಕತ್ತರಿಯಲ್ಲಿ ಸಿಪಿ ಯೋಗೇಶ್ವರ್‌ ! – ಸಿಪಿವೈ ಭವಿಷ್ಯ ಹೆಚ್‌ಡಿಕೆ ಕೈಯಲ್ಲಿ?

ಪಾಟ್ನಾ ವಿಮಾನ ನಿಲ್ದಾಣದ ರನ್ವೇಯಲ್ಲಿ ಮೂರು ಮುಂಗುಸಿಗಳು ಮತ್ತು ಹಾವಿನ ನಡುವೆ ದೊಡ್ಡ ಕಾಳಗವೇ ನಡೆದಿದೆ.  ಮೂರು ಮುಂಗುಸಿಗಳು ರನ್‌ವೇ ಪಕ್ಕದಲ್ಲಿ ಹಾವಿನ ಜೊತೆ ಹೋರಾಡುತ್ತಿವೆ. ಮುಂಗುಸಿಯಿಂದ ತನ್ನನ್ನು ರಕ್ಷಿಸಿಕೊಳ್ಳಲು ಹಾವು ತನ್ನ ಹಲ್ಲುಗಳನ್ನು ಮುಂದಕ್ಕೆ ಚಾಚುತ್ತಿದೆ. ನಂತರ, ಇನ್ನೂ ಎರಡು ಮುಂಗುಸಿಗಳು ಸೇರಿಕೊಂಡು ಮೂರು ಕಡೆಯಿಂದ ಹಾವಿನ ಮೇಲೆ ದಾಳಿ ಮಾಡಲು ಪ್ರಾರಂಭಿಸುತ್ತವೆ. ಮುಂಗುಸಿಯ ದಾಳಿಯನ್ನು ತಪ್ಪಿಸಲು ಹಾವು ಹೆಡೆ ಎತ್ತುತ್ತಿದೆ. ಆದರೆ ಮುಂಗುಸಿಗಳು ಹಾವನ್ನು ಮುಗಿಸಲೇ ಬೇಕು ಎಂದು ಪಣತೊಟ್ಟು ಅದರ ಮೇಲೆ ದಾಳಿ ಮುಂದುವರಿಸುತ್ತಿವೆ. ಈ ದೃಶ್ಯವನ್ನ ವಿಮಾನ ನಿಲ್ದಾಣದಲ್ಲಿ ಕುಳಿತಿದ್ದ ಪ್ರಯಾಣಿಕರೊಬ್ಬರು ಈ ವಿಡಿಯೊವನ್ನು ಸೆರೆಹಿಡಿದಿದ್ದಾರೆ.

ಮುಂಗುಸಿ ಮತ್ತು ಹಾವುಗಳು ಜಗಳವಾಡುವ ಈ ಅಪರೂಪದ ಘಟನೆಗಳು ಕಂಡು ಸೋಶಿಯಲ್ ಮಿಡಿಯಾದ ನೆಟ್ಟಿಗರು ಕಾಮೆಂಟ್ ಮೂಲಕ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಇದು ಪೈಪೋಟಿಯಂತೆ ಕಾಣುತ್ತಿರಬಹುದು ಆದರೆ ಆ ಮುಂಗುಸಿಗಳು ಈ ಹಾವನ್ನು ತಿನ್ನಲು ಬಯಸುತ್ತವೆ” ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. “ಭಾರತ ದೇಶದಲ್ಲಿ ನಮ್ಮ ಮುಂಗುಸಿ ಕೂಡ ಒಲಿಂಪಿಕ್ ಪದಕಗಳನ್ನು ಗೆಲ್ಲಬಲ್ಲದು!” ಎಂದು ವ್ಯಂಕ್ಯವಾಗಿ ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು “ನಾಗಿನ್ 6 ಚಿತ್ರದ ಟೀಸರ್ ಬಂದಿದೆ” ಎಂದು ಹೇಳಿದ್ದಾರೆ.

Shwetha M