ಫೈನಲ್‌ಗೆ ಡೆಲ್ಲಿಎಂಟ್ರಿ – RCB VS DCಯಲ್ಲಿ ಗೆಲ್ಲೋದ್ಯಾರು?

ಫೈನಲ್‌ಗೆ  ಡೆಲ್ಲಿಎಂಟ್ರಿ – RCB VS  DCಯಲ್ಲಿ ಗೆಲ್ಲೋದ್ಯಾರು?

ಡೆಲ್ಲಿ ಕ್ಯಾಪಿಟಲ್ಸ್  ತಂಡವು ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಮತ್ತೊಮ್ಮೆ ಫೈನಲ್ ತಲುಪಿದೆ. ಲೀಗ್‌ನ ಮೊದಲ ಮೂರು ಋತುಗಳಲ್ಲಿ ಡೆಲ್ಲಿ ತಂಡ, ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದು ಫೈನಲ್ ತಲುಪಿದೆ. ಈ ಬಾರಿ, ಎಲಿಮಿನೇಟರ್ ಅನ್ನು ಗೆಲ್ಲುವ ಮೂಲಕ ಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ದೆಹಲಿ ತಂಡವು ಗುಜರಾತ್ ಜೈಂಟ್ಸ್  ವಿರುದ್ಧದ ಎಲಿಮಿನೇಟರ್ ಅನ್ನು 7 ವಿಕೆಟ್‌ಗಳಿಂದ ಗೆದ್ದುಕೊಂಡಿತು. ಜೆಮಿಮಾ ರೊಡ್ರಿಗಸ್‌ ನಾಯಕತ್ವದ ಡೆಲ್ಲಿ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ. ಮಹಿಳಾ ಪ್ರೀಮಿಯರ್ ಲೀಗ್ ಫೈನಲ್ ಫೆಬ್ರವರಿ 5 ರಂದು ನಡೆಯಲಿದೆ.

ಇದನ್ನೂ ಓದಿ: ತಿಲಕ್ ಕಂ ಬ್ಯಾಕ್.. ಯಾರು ಔಟ್? – SA ವಾರ್ಮ್ ಅಪ್ ನಲ್ಲೇ ಕ್ಲೈಮ್ಯಾಕ್ಸ್  

ಬುಧವಾರ ಇಲ್ಲಿನ ಬಿಸಿಐ ಕ್ರೀಡಾಂಗಣದಲ್ಲಿ ನಡೆದಿದ್ದ ಎಲಿಮಿನೇಟರ್‌ ಪಂದ್ಯದಲಿ ಡೆಲ್ಲಿ ನಾಯಕಿ ಜೆಮಿಮಾ ರೊಡ್ರಿಗಸ್ ಟಾಸ್ ಗೆದ್ದು ಮೊದಲು ಬೌಲ್‌ ಮಾಡಲು ಆಯ್ಕೆ ಮಾಡಿಕೊಂಡರು. ಗುಜರಾತ್ ಜಯಂಟ್ಸ್‌ ತಂಡ, ತನ್ನ ಪಾಲಿನ 20 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 168 ರನ್ ಗಳಿಸಿತು. ಡೆಲ್ಲಿ ತಂಡವು ಸ್ಫೋಟಕ ಬ್ಯಾಟಿಂಗ್ ಮೂಲಕ ಪ್ರತಿಕ್ರಿಯಿಸಿ 16ನೇ ಓವರ್‌ನಲ್ಲಿ ಗುರಿಯನ್ನು ತಲುಪಿತು. ಆ ಮೂಲಕ ಡೆಲ್ಲಿ ನಾಲ್ಕನೇ ಬಾರಿ ಫೈನಲ್ ತಲುಪಿದ್ದರೂ, ತಂಡವು ಇನ್ನೂ ಲೀಗ್ ಪ್ರಶಸ್ತಿಯನ್ನು ಗೆದ್ದಿಲ್ಲ. ಹಿಂದಿನ ಮೂರು ಫೈನಲ್‌ಗಳಲ್ಲಿ ಸೋತಿತ್ತು.

ಗುಜರಾತ್ ತಂಡ ಕಳಪೆ ಆರಂಭವನ್ನು ಪಡೆಯಿತು. ಈ ತಂಡ 59 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು, ಆದರೆ ಆರಂಭಿಕ ಆಟಗಾರ್ತಿ ಬೆಥ್‌ ಮೂನಿ‌, ಜಾರ್ಜಿಯಾ ವೇರ್‌ಹ್ಯಾಮ್ ಜೊತೆ ಐದನೇ ವಿಕೆಟ್‌ಗೆ 61 ರನ್‌ಗಳ ಪಾಲುದಾರಿಕೆಯೊಂದಿಗೆ ಇನಿಂಗ್ಸ್ ಅನ್ನು ಸ್ಥಿರಗೊಳಿಸಿದರು. 25 ಎಸೆತಗಳಲ್ಲಿ 35 ರನ್ ಗಳಿಸಿದ ನಂತರ ವೇರ್‌ಹ್ಯಾಮ್ ನಿರ್ಗಮಿಸಿದರು, ಮೂನಿ ಜವಾಬ್ದಾರಿಯನ್ನು ವಹಿಸಿಕೊಂಡರು. ಅವರು 51 ಎಸೆತಗಳಲ್ಲಿ ಆರು ಬೌಂಡರಿಗಳು ಸೇರಿದಂತೆ ಅಜೇಯ 62 ರನ್ ಗಳಿಸಿದರು. ಕಾಶ್ವಿ ಗೌತಮ್ 10 ಎಸೆತಗಳಲ್ಲಿ ಮೂರು ಬೌಂಡರಿಗಳು ಸೇರಿದಂತೆ 18 ರನ್ ಗಳಿಸಿದರು. ಡೆಲ್ಲಿ ಕ್ಯಾಪಿಟಲ್ಸ್ ಪರ ಚಿನೆಲ್ಲೆ ಹೆನ್ರಿ ಮೂರು ವಿಕೆಟ್ ಪಡೆದರೆ, ನಂದಿನಿ ಶರ್ಮಾ ಎರಡು ವಿಕೆಟ್ ಪಡೆದರು.

Kishor KV