ಡಿಸಿಎಂ ಡಿ.ಕೆ ಶಿವಕುಮಾರ್‌ಗೆ ತಪ್ಪದ ಕಾನೂನು ಸಂಕಷ್ಟ – ಅಕ್ರಮ ಆಸ್ತಿಗಳಿಕೆ ಪ್ರಕರಣಕ್ಕೆ ಸಂಬಂಧಿಸಿ ಆಪ್ತರಿಗೂ ಸಿಬಿಐ ನೋಟಿಸ್‌!

ಡಿಸಿಎಂ ಡಿ.ಕೆ ಶಿವಕುಮಾರ್‌ಗೆ ತಪ್ಪದ ಕಾನೂನು ಸಂಕಷ್ಟ – ಅಕ್ರಮ ಆಸ್ತಿಗಳಿಕೆ ಪ್ರಕರಣಕ್ಕೆ ಸಂಬಂಧಿಸಿ ಆಪ್ತರಿಗೂ ಸಿಬಿಐ ನೋಟಿಸ್‌!

ಹೊಸ ವರ್ಷ ಆರಂಭದಲ್ಲೇ ಡಿಸಿಎಂ ಡಿಕೆ ಶಿವಕುಮಾರ್‌ ಅವರಿಗೆ ಬಿಗ್‌ಶಾಕ್‌ ಎದುರಾಗಿದೆ. ಮತ್ತೆ ಕಾನೂನು ಸಂಕಷ್ಟ ಎದುರಿಸುವಂತೆ ಆಗಿದೆ. ಆದಾಯಕ್ಕಿಂತ ಹೆಚ್ಚು ಆಸ್ತಿಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಕೆಶಿ ಕುಟುಂಬಕ್ಕೆ ಹಾಗೂ ಆಪ್ತರಿಗೆ ಸಿಬಿಐ ನೋಟಿಸ್ ಜಾರಿ ಮಾಡಿದೆ.

ಹೌದು, ಸರ್ಕಾರ ಕೇಸ್‌ ವಾಪಸ್ ಪಡೆದ ನಂತರ ಸೇಫ್ ಎಂದುಕೊಂಡಿದ್ದ ಡಿಸಿಎಂ ಡಿಕೆ ಶಿವಕುಮಾರ್‌ಗೆ ಸಿಬಿಐ ಶಾಕ್ ನೀಡಿದೆ. ಡಿಕೆಶಿ ಕುಟುಂಬಕ್ಕೆ ಹಾಗೂ ಅವರ ವ್ಯಾವಹಾರಿಕ ಆಪ್ತರಿಗೆ ಸಿಬಿಐ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

ಇದನ್ನೂ ಓದಿ: ಮೊಬೈಲ್‌ ಬಿತ್ತೆಂದು ಮೆಟ್ರೋ ಟ್ರ್ಯಾಕ್‌ಗೆ ಹಾರಿದ ಮಹಿಳೆ!

ಸೋಮವಾರ ಡಿಕೆಶಿಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ನೋಟಿಸ್‌ ನೀಡಿತ್ತು. ಇದೀಗ ಅಪರ ಆಪ್ತರಿಗೂ ನೋಟಿಸ್‌ ಜಾರಿ ಮಾಡಿರುವುದು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಶಿ, ಮುಂದೆ ನನಗೂ ವೈಯಕ್ತಿಕವಾಗಿ ನೋಟಿಸ್ ಕೊಡ್ತಾರೆ. ಇದು ರಾಜಕೀಯವಾಗಿ ನನ್ನನ್ನು ಮುಗಿಸುವ ಷಡ್ಯಂತ್ರ ಎನ್ನುವ ಮೂಲಕ ಡಿಕೆಶಿ ಹೊಸ ರಾಜಕೀಯ ದಾಳ ಉರುಳಿಸಿದ್ದಾರೆ

ಸರ್ಕಾರ ಕೇಸಿನ ಶಿಫಾರಸ್ಸನ್ನು ವಾಪಸ್‌ ಪಡೆದ ನಂತರವೂ ಸಿಬಿಐ ತಮ್ಮ ವಿರುದ್ಧ ಬಿದ್ದಿಗೆ ಬಿದ್ದಿದೆ. ಇದರ ಹಿಂದೆ ರಾಜಕೀಯ ಎದುರಾಳಿಗಳಾದ ದೊಡ್ಡ ದೊಡ್ಡವರ ಕೈವಾಡವಿದೆ ಎನ್ನುವುದು ಡಿಕೆಶಿ ಆರೋಪ.

ಏನಿದು ಪ್ರಕರಣ?

2017 ರಲ್ಲಿ ಡಿ.ಕೆ.ಶಿವಕುಮಾರ್ ವಾಸ್ತವ್ಯವಿದ್ದ ಈಗಲ್‌ಟನ್ ರೆಸಾರ್ಟ್ ಮತ್ತು ಅವರ ಸಹಚರರ ಮೇಲೆ ದಾಳಿ ಮೇಲೆ ದಾಳಿ ಮಾಡಿದ್ದ ಆದಾಯ ತೆರಿಗೆ ಇಲಾಖೆ ಸುಮಾರು 8.59 ಕೋಟಿ ಹಣ ವಶಪಡಿಸಿಕೊಂಡಿತ್ತು. ಲೆಕ್ಕಕ್ಕೆ ಸಿಗದ ಈ ಹಣವನ್ನು ಡಿ.ಕೆ.ಶಿವಕುಮಾರ್ ತಮ್ಮ ಸಹಚರರ ಬಳಿ ಇರಿಸಿದ್ದರು ಎಂದು ಆರೋಪಿಸಿತ್ತು. ಇದೇ ಪ್ರಕರಣದಲ್ಲಿ ಇಡಿ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿತ್ತು. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿದ್ದ ಇಡಿ ಪಿಸಿ ಆ್ಯಕ್ಟ್ ನಡಿ ತನಿಖೆ ನಡೆಸಲು ಸಿಬಿಐಗೆ ನೀಡಲು ಶಿಫಾರಸು ಮಾಡಿತ್ತು. ಶಿಫಾರಸು ಆಧರಿಸಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಸಿಬಿಐ ತನಿಖೆಗೆ ನೀಡಿತ್ತು.

Shwetha M