ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಮೊದಲ ಸೋಲು – ಖಾತೆ ತೆರೆದ ಡೆಲ್ಲಿ ಕ್ಯಾಪಿಟಲ್ಸ್‌!

ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಮೊದಲ ಸೋಲು – ಖಾತೆ ತೆರೆದ ಡೆಲ್ಲಿ ಕ್ಯಾಪಿಟಲ್ಸ್‌!

ಇಂಡಿಯನ್ ಪ್ರೀಮಿಯರ್ ಲೀಗ್​ನ (ಐಪಿಎಲ್​ 2024) 13ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ಜಯ ಸಾಧಿಸಿದೆ. ಬ್ಯಾಕ್​ ಟು ಬ್ಯಾಕ್​​ 2 ಪಂದ್ಯದಲ್ಲಿ ಹೀನಾಯ ಸೋಲು ಕಂಡಿದ್ದ ಡೆಲ್ಲಿ ಕ್ಯಾಪಿಟಲ್ಸ್​​ ಚೆನ್ನೈ ವಿರುದ್ಧ ಮೊದಲ ಪಂದ್ಯ ಗೆದ್ದಿದೆ.

ಡಾ. ವೈಎಸ್​​ ರಾಜಶೇಖರ್​​ ರೆಡ್ಡಿ ಇಂಟರ್​ ನ್ಯಾಷನಲ್​​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಇಂಡಿಯನ್​ ಪ್ರೀಮಿಯರ್​ ಲೀಗ್​​ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್​ ತಂಡವು 191 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಸಿಎಸ್​ಕೆ ತಂಡ 20 ಓವರ್​ಗಳಲ್ಲಿ 171 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ರಿಷಭ್ ಪಂತ್ ಪಡೆ 20 ರನ್​ಗಳ ಜಯ ಸಾಧಿಸಿದೆ.

ಇದನ್ನೂ ಓದಿ:ಬನ್ನೇರುಘಟ್ಟ ರಸ್ತೆಯ 2 ಜಂಕ್ಷನ್‌ಗಳಲ್ಲಿ ಒಂದು ವರ್ಷ ವಾಹನ ಸಂಚಾರ ನಿಷೇಧ! – ಕಾರಣವೇನು ಗೊತ್ತಾ? 

ಡೆಲ್ಲಿ ನೀಡಿದ ಬಿಗ್​ ಟಾರ್ಗೆಟ್​ ಬೆನ್ನತ್ತಿದ ಚೆನ್ನೈ ತಂಡದ ಪರ ರಹಾನೆ 45, ಮಿಚೆಲ್​​ 34, ಶಿವಂ ದುಬೆ 18, ಜಡೇಜಾ 21, ಧೋನಿ 37 ರನ್​ ಗಳಿಸಿದ್ರೂ ಸೋತರು.

ಒಂದೂವರೆ ವರ್ಷದ ಹಿಂದೆ ಸಂಭವಿಸಿದ ಭೀಕರ ಕಾರು ಅಪಘಾತದ ಬಳಿಕ ಮೊದಲ ಬಾರಿಗೆ ಕ್ರಿಕೆಟ್ ಪಂದ್ಯಾವಳಿ ಆಡುತ್ತಿರೋ ರಿಷಬ್ ಪಂತ್ ಮೊದಲ ಬಾರಿಗೆ ಭರ್ಜರಿ ಕಮ್​ಬ್ಯಾಕ್​ ಮಾಡಿದ್ರು. ತನ್ನ ಅದ್ಭುತ ಬ್ಯಾಟಿಂಗ್ ಮೂಲಕ ಅರ್ಧಶತಕ ಸಿಡಿಸಿದ್ರು. ಇವರ ಸ್ಟ್ರೈಕ್​ ರೇಟ್​ ಬರೋಬ್ಬರಿ 160 ಇತ್ತು.

ಇನ್ನು, ತಾನು ಆಡಿದ ಕೇವಲ 32 ಎಸೆತಗಳಲ್ಲಿ ಪಂತ್​ ಬರೋಬ್ಬರಿ 51 ರನ್​ಗಳು ಸಿಡಿಸಿದ್ರು. ಇದರಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸೇರಿವೆ. ವಿಶೇಷ ಎಂದರೆ ಪಂತ್​ ಮೊದಲ 23 ಬಾಲ್​​ಗಳಲ್ಲಿ 23 ರನ್‌ ಕಲೆ ಹಾಕಿದ್ದರು. ಇದಾದ ಬಳಿಕ ಅದ್ಭುತ ಬ್ಯಾಟಿಂಗ್ ಮಾಡಿ ಮುಂದಿನ 9 ಎಸೆತಗಳಲ್ಲಿ 28 ರನ್ ಸಿಡಿಸಿದ್ರು. ಹಾಗೆಯೇ ಮಾರ್ಷ್​​ 18, ಅಕ್ಷರ್​​ 7 ರನ್​ ಗಳಿಸಿದ್ದರು.

Shwetha M