ಗುಜರಾತ್ ಟೈಟಾನ್ಸ್ ಸೋತ ಮೇಲೆ ಗಿಲ್ ಒಪ್ಪಿಕೊಂಡ ಸತ್ಯವೇನು? – ಡಿಸಿ ಕ್ಯಾಪ್ಟನ್ ರಿಷಭ್ ಪಂತ್ ವಿಶ್ವಕಪ್ಗೆ ಫಿಕ್ಸ್?

ರಶೀದ್ ಖಾನ್ ಒಂದು ವೇಳೆ 34 ರನ್ ಹೊಡೆಯದೇ ಇದ್ದಿರುತ್ತಿದ್ದರೆ ಏನಾಗ್ತಿತ್ತು ಹೇಳಿ…? ಹೆಣ್ಮಕ್ಕಳ ಹಾಟ್ ಫೇವರೇಟ್ ಶುಭ್ಮನ್ ಗಿಲ್ ಕಷ್ಟಪಟ್ಟು ನಗುವ ಪರಿಸ್ಥಿತಿಯೂ ಇಲ್ಲದಂತಾಗುತ್ತಿತ್ತು.. ಬ್ಯಾಡ್ ಡೇ ಅಂತ ಹೇಳೋದು ಸುಲಭ.. ಆದ್ರೆ ವಿಶ್ವದ ಅತಿದೊಡ್ಡ ಕ್ರಿಕೆಟ್ ಮೈದಾನ ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನೂರು ರನ್ ಹೊಡೆಯೋದಿಕ್ಕೂ ಸಾಧ್ಯವಾಗದೇ ಇದ್ದಿದ್ದು, ಜಿಟಿ ತಂಡ ಕೂಡ ಬ್ಯಾಲೆನ್ಸ್ ಕಳ್ಕೊಂಡಿದೆ ಅನ್ನೋದಕ್ಕೆ ಸಾಕ್ಷಿಯಂತಿತ್ತು.. ಒಂದ್ಕಡೆ ಹಾರ್ದಿಕ್ ಪಾಂಡ್ಯಾ ಹೊಸದಾಗಿ ಸೇರಿಕೊಂಡಿರುವ ಮುಂಬೈ ತಂಡವೂ ಉದ್ಧಾರ ಆಗ್ತಿಲ್ಲ.. ಮತ್ತೊಂದ್ಕಡೆ ಹಾರ್ದಿಕ್ ಪಾಂಡ್ಯಾ ಬಿಟ್ಟುಬಂದಿರುವ ಗುಜರಾತ್ ಟೈಟನ್ಸ್ಗೂ ಲಕ್ ಕುದುರಿಸುತ್ತಿಲ್ಲ.. ಇಷ್ಟಕ್ಕೂ ಡಿಸಿ ತಂಡ ಇಷ್ಟೆಲ್ಲಾ ಚೆನ್ನಾಗಿ ಆಡುವಂತಾಗಿದ್ದು ಹೇಗೆ? ಸತತ ಎರಡು ಬಾರಿ ಐಪಿಎಲ್ ಫೈನಲ್ ಪ್ರವೇಶಿಸಿದ್ದ ಜಿಟಿಯ ಕತೆ ಏನಾಗ್ತಿದೆ ಅನ್ನೋದ್ರ ವಿವರವಾದ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಕ್ಯಾಪ್ಟನ್ ಆದ್ರೂ ಕಳಪೆ ಫಾರ್ಮ್.. – ಪಾಂಡ್ಯಗೆ ಬಿಸಿಸಿಐ ಟಾಸ್ಕ್ ಏನು?
ನಿಜಕ್ಕೂ ಜಿಟಿ ಕೆಟ್ಟದಾಗಿ ಆಡಿದೆ.. ಇದಕ್ಕೆ ಬ್ಯಾಡ್ ಡೇ ಅನ್ಬೇಕೋ.. ಆಟಗಾರರ ಬೇಜವಾಬ್ದಾರಿ ಅನ್ಬೇಕೋ ಗೊತ್ತಿಲ್ಲ.. ಸ್ವತಃ ಗುಜರಾತ್ನ ಕ್ಯಾಪ್ಟನ್ ಶುಭ್ಮನ್ ಗಿಲ್ ಹೇಳಿದಂತೆ ಇಲ್ಲಿ ಪಿಚ್ ಅನ್ನು ದೂರಿ ಪ್ರಯೋಜನ ಇಲ್ಲ.. ತಾವೆಲ್ಲಾ ಒಂದು ಆ್ಯವರೇಜ್ ಆಗಿ ಬ್ಯಾಟಿಂಗ್ ಮಾಡಿದ್ವಿ.. ಒಂದು ವೇಳೆ ಕೇವಲ 89 ರನ್ ಹೊಡೆದ್ಮೇಲೂ ಗೆಲ್ಬೇಕು ಅಂತಿದ್ರೆ ನಮ್ ಬೌಲರ್ಗಳು ಡಬಲ್ ಹ್ಯಾಟ್ರಿಕ್ ಪಡೀಬೇಕಾದ ಅನಿವಾರ್ಯತೆ ಇತ್ತು.. ಇಲ್ಲಿ ಪಿಚ್ ಅನ್ನು ದೂರೋದಿಲ್ಲ.. ಬದಲಿಗೆ ನಾವು ಕೆಟ್ಟದಾಗಿ ಆಡಿದ್ದೇವೆ.. ಪಂದ್ಯ ಈಗ ಮುಗಿದೋಗಿದೆ.. ನಾವು ಇಲ್ಲಿಂದ ಹೇಗೆ ಮತ್ತು ಎಷ್ಟು ಸ್ಟ್ರಾಂಗ್ ಆಗಿ ಕಂಬ್ಯಾಕ್ ಮಾಡ್ತೀವಿ ಅನ್ನೋದೇ ಈಗ ಮುಖ್ಯ.. ಅಂತ ಪಂದ್ಯದ ಬಳಿಕ ಶುಭ್ಮನ್ ಹೇಳಿದ್ದರು.. ಗಿಲ್ ಹೇಳಿದ್ದ ಮಾತುಗಳಲ್ಲಿ ಅಕ್ಷರಶಃ ಪ್ರಾಮಾಣಿಕತೆಯಿತ್ತು.. ತಂಡದ ಸೋಲನ್ನು ಯಾರ ಮೇಲೂ ಹೊತ್ತು ಹಾಕಲಿಲ್ಲ ಗಿಲ್.. ಬದಲಿಗೆ ಸೋಲಿನ ಜವಾಬ್ದಾರಿಯನ್ನೂ ಅಷ್ಟೇ ಚೆನ್ನಾಗಿ ಹೊತ್ತುಕೊಂಡಿದ್ದಾರೆ..
ಆದ್ರೆ ಇಲ್ಲಿ ಐಪಿಎಲ್ನಲ್ಲಿ ಜಿಟಿಯ ಭವಿಷ್ಯದ ಮೇಲೆ ತೂಗಕತ್ತಿಯನ್ನು ಬುಧವಾರ ನಡೆದ ಪಂದ್ಯ ತಂದು ನಿಲ್ಲಿಸಿದೆ.. ಅಷ್ಟು ಕೆಟ್ಟದಾಗಿ ಸೋತಿದ್ದರಿಂದ ನೆಟ್ ರನ್ ರೇಟ್ ತೀರಾ ನಂ.10ನೇ ಸ್ಥಾನದಲ್ಲಿದೆ.. ಆರ್ಸಿಬಿಗಿಂತಲೂ ಈಗ ಜಿಟಿಯ ನೆಟ್ ರನ್ ರೇಟ್ ಕೆಳಗಿದೆ.. 7 ಪಂದ್ಯ ಆಡಿ ಮೂರು ಮ್ಯಾಚ್ ಗೆದ್ದಿರುವ ಜಿಟಿಯ ನೆಟ್ ರನ್ರೇಟ್ ಈಗ ಮೈನಸ್ 1.303ಯಲ್ಲಿದೆ.. ಈಗ ಅದಕ್ಕಿಂತ ಪಾಯಿಂಟ್ ಟೇಬಲ್ನಲ್ಲಿ 7ನೇ ಸ್ಥಾನದಲ್ಲಿರುವ ಜಿಟಿಗೆ ಪ್ಲೇ ಆಫ್ ಹಾದಿ ಸಿಕ್ಕಾಪಟ್ಟೆ ಕಠಿಣವಾಗಿದೆ.. ಇನ್ನು ಪ್ರತಿ ಪಂದ್ಯವನ್ನು ಗೆದ್ದರಷ್ಟೇ ಪಾಯಿಂಟ್ ಮೂಲಕ ಮಾತ್ರ ಪ್ಲೇಆಫ್ ಹಾದಿಗೆ ಸಾಗುವ ಅವಕಾಶ ಈಗ ಜಿಟಿಗೆ ಉಳಿದಿದೆ.. ಕಳೆದ ಎರಡು ಸೀಸನ್ಗಳಲ್ಲಿ ಜಿಟಿ ಐಪಿಎಲ್ನಲ್ಲಿ ಪ್ಲೇಆಫ್ ಮಾತ್ರವಲ್ಲ.. ಫೈನಲ್ಗೂ ಪ್ರವೇಶಿಸಿತ್ತು.. ಅದರಲ್ಲಿ ಮೊದಲ ಸೀಸನ್ನಲ್ಲಿ ಚಾಂಪಿಯನ್ ಆದ್ರೆ ಎರಡನೇ ಸೀಸನ್ನಲ್ಲಿ ರನ್ ಅಪ್ ಆಗಿದೆ.. ಆದ್ರೆ ಅದ್ಯಾಕೋ ಹಾರ್ದಿಕ್ ಪಾಂಡ್ಯಾರನ್ನು ಮಾರಾಟ ಮಾಡಿದ ಮೇಲೆ ಜಿಟಿ ಅದೃಷ್ಟವನ್ನೂ ಸೇರಿಸಿಯೇ ಮಾರಾಟ ಮಾಡಿದಂತಿದೆ..
ಹಾರ್ದಿಕ್ ಸೇರಿಕೊಂಡ ಮುಂಬೈ ತಂಡಕ್ಕೇನೂ ಲಕ್ ಕುದುರಿಸಿಲ್ಲ.. ಆದ್ರೆ ಜಿಟಿಗೆ ಮಾತ್ರ ಲಕ್ವ ಹೊಡೆದಂತಾಗಿದೆ.. ಇಡೀ ತಂಡ ಸದ್ಯ ಶುಭ್ಮನ್ ಮೇಲೆ ಮಾತ್ರ ಡಿಪೆಂಡ್ ಆಗಿದೆ.. ಗಿಲ್ ಆಡಿದ ಏಳು ಪಂದ್ಯಗಳಿಂದ 263 ರನ್ ಗಳಿಸಿ ಟಾಪ್ ಸ್ಕೋರರ್ ಆಗಿದ್ದಾರೆ.. ಗಿಲ್ ಸಿಡಿಯದಿದ್ದರೆ ತಂಡದ ಸ್ಕೋರ್ ಕೂಡ ಕುಸಿದುಹೋಗುತ್ತದೆ.. ಪಂಜಾಬ್ ಮತ್ತು ಆರ್ ಆರ್ ವಿರುದ್ಧ ಗಿಲ್ 89 ಹಾಗೂ 72 ರನ್ ಹೊಡೆದಿದ್ದರು.. ಆಗ ಜಿಟಿ ಕ್ರಮವಾಗಿ 199 ಹಾಗೂ 196 ರನ್ ಗಳಿಸಿತ್ತು.. ಅದೇ ಗಿಲ್ ಸಿಎಸ್ಕೆ ವಿರುದ್ಧ 8 ರನ್ಗೆ ಔಟಾದ್ರೆ ತಂಡ 143 ರನ್ಗಳಿಗೆ ಕುಸಿದು ಸೋತಿತ್ತು.. ಅಲ್ಲದೆ ಡಿಸಿ ವಿರುದ್ಧ ಕೂಡ 8 ರನ್ಗೆ ಗಿಲ್ ಔಟಾಗುತ್ತಿದ್ದಂತೆ ತಂಡ 89 ರನ್ ಗಳಿಗೆ ಆಲೌಟಾಯಿತು.. ಗಿಲ್ ಹೊರತಾಗಿ ಸಾಯಿ ಸುದರ್ಶನ್ ಮಾತ್ರ ಜಿಟಿ ಪರ ಚೆನ್ನಾಗಿ ಆಡ್ತಿದ್ದಾರೆ.. ಡಿಸಿ ವಿರುದ್ಧ ರಶೀದ್ ಖಾನ್ 34 ರನ್ ಹೊಡೆದಿದ್ದರಿಂದ ಮಾತ್ರ ಜಿಟಿಗೆ ಅಟ್ಲೀಸ್ಟ್ ಸ್ವಲ್ವ ಮಾನ ಆದ್ರೂ ಉಳೀತು.. 89 ರನ್ಗಳಿಗೆ ಆಲೌಟಾಗಿತ್ತು.. ಉಳಿದ ಬ್ಯಾಟ್ಸ್ಮನ್ಗಳಂತೆ ರಶೀದ್ ಕೂಡ ಬೇಗನೆ ಔಟಾಗಿರುತ್ತಿದ್ದರೆ, ತಂಡ ಇನ್ನಷ್ಟು ಕುಸಿದು ಹೋಗುತ್ತಿತ್ತು.. ಆದ್ರೆ ಜಿಟಿ ವಿರುದ್ಧದ ಡೆಲ್ಲಿಯ ಅಬ್ಬರದ ಕ್ರೆಡಿಟ್ ಸಂಪೂರ್ಣವಾಗಿ ಕ್ಯಾಪ್ಟನ್ ರಿಷಬ್ ಪಂತ್ಗೆ ಕೊಡಬೇಕು.. ರಿಷಬ್ ಪಂತ್ ಈಗ ಮತ್ತೆ ಸ್ಪೈಡರ್ ಮ್ಯಾನ್ ರೂಪ ತಾಳಿದ್ದಾರೆ.. ವಿಕೆಟ್ ಹಿಂದೆ ಚೀತಾದಂತೆ ಜಿಗಿಯುತ್ತಿದ್ದಾರೆ.. ಇದ್ರಿಂದಾಗಿಯೇ ಎರಡು ಅದ್ಭುತ ಕ್ಯಾಚ್ ಮತ್ತು ಎರಡು ಅತ್ಯುತ್ತಮ ಸ್ಚಂಪ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.. ಈ ಮೂಲಕ ಜಿಟಿಯ ಬ್ಯಾಟಿಂಗ್ ಬಲವನ್ನೇ ಮುರಿದು ಹಾಕುವಲ್ಲಿ ರಿಷಬ್ ಯಶಸ್ವಿಯಾದ್ರು.. ಗಾಯಗೊಂಡು ಹಿಂತಿರುಗಿದ ನಂತ್ರ ಪ್ರತಿ ಮ್ಯಾಚ್ ಅನ್ನೂ ಗೆಲ್ಲಬೇಕು ಹಾಗೂ ಪ್ರತಿಪಂದ್ಯದಲ್ಲೂ ತನ್ನ ಹಂಡ್ರೆಡ್ ಪರ್ಸೆಂಟ್ ಎಫರ್ಟ್ ಹಾಕಬೇಕು ಅಂದ್ಕೊಂಡಿದ್ದೆ.. ಅದೇ ಸ್ವರೂಪದಲ್ಲಿ ಆಡ್ತಿರುವುದಕ್ಕೆ ಖುಷಿಯಾಗ್ತಿದೆ ಎಂದು ಮ್ಯಾಚ್ ಮುಗಿದ್ಮೇಲೆ ರಿಷಬ್ ಹೇಳಿದ್ರು..
ರಿಷಬ್ ಪಂತ್ ಆಟ ನೋಡಿದ್ರೆ ಈ ಬಾರಿಯ ಟಿ20 ವರ್ಲ್ಡ್ಕಪ್ಗೆ ಟೀಂ ಇಂಡಿಯಾದಲ್ಲಿ ಯಾರನ್ನು ವಿಕೆಟ್ ಕೀಪರ್ ಆಗಿ ಸೆಲೆಕ್ಟ್ ಮಾಡ್ಬೇಕು ಅಂತ ಆಯ್ಕೆಗಾರರು ಗೊಂದಲಕ್ಕೆ ಒಳಗಾಗುವಂತಾಗಿದೆ.. ಇನ್ನು ಡಿಸಿ ಪರವಾಗಿ ಮುಕೇಶ್ ಕುಮಾರ್ ಮತ್ತು ಇಶಾಂತ್ ಕುಮಾರ್ ಅತ್ಯುತ್ತಮ ಬೌಲಿಂಗ್ ಮಾಡಿದ್ದರು.. ರನ್ ಚೇಸ್ ಮಾಡಿದ ಡಿಸಿ ಕೂಡ ನಾಲ್ಕು ವಿಕೆಟ್ ಕಳೆದುಕೊಂಡಿತ್ತು.. ಆದ್ರೆ ಆದಷ್ಟು ಬೇಗನೆ ಗುರಿ ಮುಟ್ಟಿ, ನೆಟ್ ರನ್ ರೇಟ್ ಹೆಚ್ಚಿಸಿಕೊಳ್ಳಬೇಕು ಎನ್ನುವ ಅದೃಷ್ಟದಾಟದಲ್ಲಿ ಡಿಸಿ ಕೈಮೇಲಾಗಿದೆ.. 8.5 ಓವರ್ಗಳಲ್ಲೇ ಗುರಿ ಮುಟ್ಟಿದ ಡಿಸಿ ಇದ್ರಿಂದಾಗಿ 6 ಅಂಕಗಳೊಂದಿಗೆ ಪಾಯಿಂಟ್ ಟೇಬಲ್ನಲ್ಲಿ ಆರನೇ ಸ್ಥಾನದಲ್ಲಿದೆ.. ಏನೇ ಆದ್ರೂ ರಿಷಬ್ ಪಂತ್ರಲ್ಲಿರುವ ಅದ್ಭುತ ಆಟದ ಅನಾವರಣಕ್ಕೆ ಐಪಿಎಲ್ ಮತ್ತೆ ವೇದಿಕೆಯಾಗಿದೆ.. ಹೀಗಾಗಿ ಸದ್ಯ ರಿಷಬ್ ಫ್ಯಾನ್ಸ್ ಅಂತೂ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ..