KL ಅಲ್ಲ ಪಟೇಲ್ DC ಕ್ಯಾಪ್ಟನ್? – ಫಾಫ್ ಡುಪ್ಲೆಸಿಸ್ ಜಸ್ಟ್ ಪ್ಲೇಯರ್
ಇಬ್ಬರು ನಾಯಕರು ಎಂದಿದ್ದೇಕೆ ಫ್ರಾಂಚೈಸಿ?

KL ಅಲ್ಲ ಪಟೇಲ್ DC ಕ್ಯಾಪ್ಟನ್? – ಫಾಫ್ ಡುಪ್ಲೆಸಿಸ್ ಜಸ್ಟ್ ಪ್ಲೇಯರ್ಇಬ್ಬರು ನಾಯಕರು ಎಂದಿದ್ದೇಕೆ ಫ್ರಾಂಚೈಸಿ?

ಕೆಎಲ್ ರಾಹುಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬರ್ತಾರೆ. ಅವ್ರೇ 2025ರ ಐಪಿಎಲ್​ನಲ್ಲಿ ಟೀಂ ಮುನ್ನಡೆಸೋದು ಅನ್ಕೊಂಡಿದ್ದ ಕನ್ನಡಿಗರು ಈಗ ತಮಗೆ ತಾವೇ ಸಮಾಧಾನ ಮಾಡಿಕೊಳ್ತಿದ್ದಾರೆ. ಯಾಕಂದ್ರೆ ಹರಾಜಿನಲ್ಲಿ ಕೆಎಲ್ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಿದ್ದಾರೆ. ಬಟ್ ಈಗ ಮತ್ತೊಂದು ಬ್ರೇಕಿಂಗ್ ಸುದ್ದಿ ಹೊರಬಿದ್ದಿದ್ದು ಕೆಎಲ್ ಫ್ಯಾನ್ಸ್ ಶಾಕ್​ನಲ್ಲಿದ್ದಾರೆ. ಡಿಸಿಯಲ್ಲಿ ಬರೀ ಆಟಗಾರನಾಗಿ ರಾಹುಲ್ ಮೈದಾನಕ್ಕಿಳಿಯುತ್ತಾರಾ ಅನ್ನೋ ಪ್ರಶ್ನೆ ಎದುರಾಗಿದೆ. ಡೆಲ್ಲಿ ತಂಡದಲ್ಲಿ ಕ್ಯಾಪ್ಟನ್ಸಿ  ರೇಸ್ ನಡೀತಿದ್ದು ಫ್ರಾಂಚೈಸಿ ಕೂಡ ತಮ್ಮ ಹಳೇ ಆಟಗಾರನಿಗೇ ಪಟ್ಟ ಕಟ್ಟೋ ಹಿಂಟ್ ಕೊಟ್ಟಿದೆ. ಹಾಗಾದ್ರೆ ಕೆಎಲ್ ಡೆಲ್ಲಿ ಕ್ಯಾಪ್ಟನ್ ಆಗಲ್ವಾ? ಯಾರೆಲ್ಲಾ ಪೈಪೋಟಿಯಲ್ಲಿದ್ದಾರೆ? ಫ್ರಾಂಚೈಸಿ ಚೂಸ್ ಮಾಡಿರೋ ನಾಯಕ ಯಾರು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಲಕ್ಷ್ಮೀ ಸಾವು.. ಭಾಗ್ಯ ಸಂಸಾರ ಗೋಳು..  ತಂಗಿ ಸತ್ರೂ ಅಕ್ಕನಿಗೆ ಗೊತ್ತಾಗಲ್ವಾ? – ಟ್ವಿಸ್ಟ್‌ ಅಲ್ಲ.. ಟುಸ್‌ ಸ್ಟೋರಿ!

10 ಫ್ರಾಂಚೈಸಿಗಳೂ ಕೂಡ 2025ರ ಐಪಿಎಲ್​ಗಾಗಿ ತಮ್ಮ ತಮ್ಮ ಟೀಮ್​ಗಳನ್ನ ಫಾರ್ಮ್ ಮಾಡ್ಕೊಂಡಿವೆ. ಬಹುತೇಕ ತಂಡಗಳಿಗೆ ಕ್ಯಾಪ್ಟನ್ ಯಾರು ಅನ್ನೋದು ಫೈನಲ್ ಆಗಿದ್ರೂ ಮತ್ತೊಂದಿಷ್ಟು ಟೀಮ್ಸ್ ಅಳೆದು ತೂಗಿ ಲೆಕ್ಕಾಚಾರ ಮಾಡ್ತಿವೆ. ಅದ್ರಲ್ಲೂ ದೆಹಲಿ ತಂಡಕ್ಕೆ ಕೆಎಲ್ ರಾಹುಲ್ ಕ್ಯಾಪ್ಟನ್ ಆಗ್ಬೋದು ಅನ್ನೋದು ತುಂಬಾ ಜನ್ರ ಮಾತು. ಮೂವರು ರೇಸ್​ನಲ್ಲಿದ್ದು ಲೆಕ್ಕಾಚಾರಗಳೂ ಕೂಡ ಜೋರಾಗಿವೆ.

ರಿಷಭ್ ಪಂತ್ ಮತ್ತು ಕೆಎಲ್ ರಾಹುಲ್ ಅದಲಿ ಬದಲಿ ಆಟ!

ಈ ಹಿಂದೆ ಡೆಲ್ಲಿ ಕ್ಯಾಪ್ಟನ್ ಆಗಿದ್ದ ರಿಷಭ್ ಪಂತ್ ಬರೋಬ್ಬರಿ 27 ಕೋಟಿ ರೂಪಾಯಿ ಸಂಭಾವನೆ ಪಡೆದು ಲಕ್ನೋ ಸೂಪರ್ ಜೇಂಟ್ಸ್ ತಂಡ ಸೇರಿಕೊಂಡಿದ್ದಾರೆ. ಮತ್ತೊಂದೆಡೆ ಅದೇ ಲಕ್ನೋ ತಂಡದ ಕ್ಯಾಪ್ಟನ್ ಆಗಿದ್ದ ಕೆಎಲ್ ರಾಹುಲ್ 14 ಕೋಟಿಗೆ ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಿದ್ದಾರೆ. ಟ್ವಿಸ್ಟ್ ಏನಪ್ಪ ಅಂದ್ರೆ ರಿಷಭ್ ಪಂತ್ ಲಕ್ನೋ ತಂಡವನ್ನ ಮುನ್ನಡೆಸೋದು ಕ್ಲಿಯರ್ ಆಗಿದ್ರೂ ರಾಹುಲ್ ವಿಚಾರದಲ್ಲಿ ಮಾತ್ರ ಕನ್ಫ್ಯೂಷನ್ಸ್ ಇದೆ.

ಡೆಲ್ಲಿ ತಂಡವನ್ನ ಇಬ್ಬರು ಲೀಡ್ ಮಾಡ್ತಾರೆಂದ ಪಾರ್ಥ್ ಜಿಂದಾಲ್!

ರಿಷಭ್ ಪಂತ್ ರಿಂದ ತೆರವಾಗಿರುವಂಥ ದೆಹಲಿ ತಂಡಕ್ಕೆ ನಾಯಕ ಯಾರು ಅನ್ನೋ ಚರ್ಚೆ ಜೋರಾಗಿದೆ.  ಐಪಿಎಲ್ ಮೆಗಾ ಹರಾಜಿನಲ್ಲಿ ಕನ್ನಡಿಗ ಕೆಎಲ್ ರಾಹುಲ್ ಮತ್ತು ಆರ್ ಸಿಬಿ ಮಾಜಿ ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್​ರನ್ನ ಡಿಸಿ ಫ್ರಾಂಚೈಸಿ ಖರೀದಿಸಿದೆ. ಕಳೆದ ಮೂರು ಸೀಸನ್​ಗಳಿಂದ ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಡುಪ್ಲೆಸಿಸ್​ ಆರ್​ಸಿಬಿ ತಂಡವನ್ನ ಮುನ್ನಡೆಸಿದ್ದರು. ಈ ಇಬ್ಬರಲ್ಲಿ ಒಬ್ಬರು ನಾಯಕರಾಗಬಹುದು ಎಂಬುದು ಎಲ್ಲರ ನಿರೀಕ್ಷೆಯಾಗಿತ್ತು. ಆದರೆ ತಂಡದ ಸಹ ಮಾಲೀಕ ಪಾರ್ಥ್ ಜಿಂದಾಲ್ ಡೆಲ್ಲಿ ತಂಡಕ್ಕೆ ಇಬ್ಬರು ನಾಯಕರಾಗಲಿದ್ದಾರೆ. ತಂಡಗಳನ್ನ ಇಬ್ಬರು ಮುನ್ನಡೆಸಲಿದ್ದಾರೆ ಎಂದು ಹೇಳುವ ಮೂಲಕ ಟ್ವಿಸ್ಟ್ ಕೊಟ್ಟಿದ್ದಾರೆ.

ಅಕ್ಷರ್ ಪಟೇಲ್ ಗೆ ಸಿಗುತ್ತಾ ಡಿಸಿ ಕ್ಯಾಪ್ಟನ್ಸಿ?

ಅಷ್ಟಕ್ಕೂ ಇಲ್ಲಿ ಕೆಎಲ್ ರಾಹುಲ್ ಹೆಸರಿನ ಜೊತೆ ಕ್ಯಾಪ್ಟನ್ಸಿ ರೇಸ್ ನಲ್ಲಿ ಇರೋ ಮತ್ತೊಂದೇ ಹೆಸ್ರೇ ಅಕ್ಷರ್ ಪಟೇಲ್. ಪಾರ್ಥ್ ಜಿಂದಾಲ್ ಅವರು ಭಾರತದ ಆಲ್ ರೌಂಡರ್ ಅಕ್ಷರ್ ಪಟೇಲ್ ಹಾಗೂ ರಾಹುಲ್ ತಂಡವನ್ನ ಲೀಡ್ ಮಾಡುತ್ತಾರೆ. ಅಕ್ಷರ್ ಪಟೇಲ್ ಕಳೆದ ಆವೃತ್ತಿಯಲ್ಲಿ ಉಪನಾಯಕನಾಗಿದ್ದರು. ಹಾಗಾಗಿ ಅವರಿಗೆ ತಂಡವನ್ನು ಮುನ್ನಡೆಸುವ ಸಾಮರ್ಥ್ಯವಿದೆ ಎಂದಿದ್ದಾರೆ. ಅಲ್ದೇ ತಂಡದಲ್ಲಿ ಕೆಎಲ್ ಗಿಂತ ಅಕ್ಷರ್ ಕಾಸ್ಟ್ಲಿ ಪ್ಲೇಯರ್. ಹರಾಜಿಗೂ ಮುನ್ನ ಅಕ್ಷರ್ ಪಟೇಲ್ ಅವರನ್ನು 16.50 ಕೋಟಿಗೆ ರಿಟೇನ್ ಮಾಡಿಕೊಂ.ದೆ. ರಾಹುಲ್ ರನ್ನ 14 ಕೋಟಿಗೆ ಖರೀದಿಸಿದೆ.    ಹೀಗಾಗಿ ಕ್ಯಾಪ್ಟನ್ ಯಾರು ಅನ್ನೋ ಅಂತಿಮ ನಿರ್ಧಾರವನ್ನು ತಂಡದ ಕೋಚಿಂಗ್ ಸ್ಟಾಫ್ ತೆಗೆದುಕೊಳ್ಳಲಿದ್ದಾರೆ ಎಂದು ಪಾರ್ಥ್ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ.

ಕಳೆದ 6 ವರ್ಷಗಳಿಂದ ದೆಹಲಿ ತಂಡದಲ್ಲೇ ಇದ್ದಾರೆ ಅಕ್ಷರ್!

ಅಲ್ದೇ ಅಕ್ಷರ್ ಪಟೇಲ್ ಹಾಗೂ ಡಿಸಿ ನಡುವೆ ಬಹುವರ್ಷಗಳ ಸಂಬಂಧ ಇದೆ. 2013ರಲ್ಲಿ ಮುಂಬೈ ತಂಡಕ್ಕೆ ಸೇರುವ ಮೂಲಕ ಐಪಿಎಲ್​ಗೆ ಪದಾರ್ಪಣೆ ಮಾಡಿದ್ದ ಅಕ್ಷರ್ ಪಟೇಲ್ 2014ರಲ್ಲಿ ಪಂಜಾಬ್ ತಂಡ ಸೇರಿ ಮೊದಲ ಬಾರಿಗೆ ಪಂದ್ಯಗಳನ್ನ ಆಡಿದ್ರು. ಇನ್ನು 2019ರಲ್ಲಿ ದೆಹಲಿ ತಂಡಕ್ಕೆ ಜಾಯ್ನ್ ಆಗಿ ಅಂದಿನಿಂದ ಇಂದಿನವರೆಗೆ ಒಂದೇ ಪ್ರಾಂಚೈಸಿ ಪರ ಕಣಕ್ಕಿಳಿಯುತ್ತಿದ್ದಾರೆ. ಕಳೆದ 6 ವರ್ಷಗಳಿಂದ ಟೀಮ್​ನಲ್ಲೇ ಅಕ್ಷರ್​ಗೆ ಪಟ್ಟ ಕಟ್ಟೋಕೆ ಫ್ರಾಂಚೈಸಿ ಕೂಡ ಪ್ಲ್ಯಾನ್ ಮಾಡಿಕೊಳ್ತಿದೆ.  ಅಲ್ದೇ ಕಳೆದ ಅವೃತ್ತಿಯಲ್ಲಿ ವೈಸ್ ಕ್ಯಾಪ್ಟನ್ ಕೂಡ ಆಗಿದ್ರು. ರಿಷಬ್ ಪಂತ್ ಲಭ್ಯರಿಲ್ಲದಿದ್ದಾಗ ನಾಯಕರಾಗಿಯೂ ತಂಡವನ್ನು ಮುನ್ನಡೆಸಿದ್ದರು. ದಿಲ್ಲಿ ತಂಡದ ಡ್ರೆಸ್ಸಿಂಗ್ ರೂಂ ಬಗ್ಗೆ ಅವರಿಗೆ ಬಹಳ ಚೆನ್ನಾಗಿ ಗೊತ್ತು. ವಿಶ್ವದ ಅತ್ಯುತ್ತಮ ಟಿ20 ಆಲ್ ರೌಂಡರ್ ಗಳಲ್ಲಿ ಒಬ್ಬರಾಗಿದ್ದು ಟೀಂ ಇಂಡಿಯಾದಲ್ಲಿ ರವೀಂದ್ರ ಜಡೇಜಾ ಅವರ ಉತ್ತರಾಧಿಕಾರಿಯೂ ಹೌದು.

ಕ್ಯಾಪ್ಟನ್ಸಿ ಲಿಸ್ಟ್ ನಲ್ಲಿ ಫಾಫ್ ಡುಪ್ಲೆಸಿಸ್ ಹೆಸರು!

ಇನ್ನು ರಾಹುಲ್ ಮತ್ತು ಪಟೇಲ್ ಪೈಪೋಟಿ ನಡುವೆ ಫಾಫ್ ಡುಪ್ಲೆಸಿಸ್ ಹೆಸರೂ ಥಳಕು ಹಾಕಿಕೊಳ್ತಿದೆ.  ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ಕೆಎಲ್ ರಾಹುಲ್ ಅವರನ್ನು 14 ಕೋಟಿ ರೂ.ಗೆ ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿದೆ. ರಾಯಲ್ಸ್ ಚಾಲೆಂಜರ್ಸ್‌ ಬೆಂಗಳೂರು  ನಾಯಕರಾಗಿದ್ದ ಅನುಭವಿ ಫಾಫ್ ಡು ಪ್ಲೆಸಿಸ್‌ ಅವರಿಗೆ 2 ಕೋಟಿ ರೂ. ಮೂಲ ಬೆಲೆಯನ್ನು ಡಿಸಿ ನೀಡಿದೆ. ಕಳೆದ ಮೂರು ಐಪಿಎಲ್ ಆವೃತ್ತಿಗಳಲ್ಲಿ ಆರ್‌ಸಿಬಿ ತಂಡವನ್ನು ಫಾಫ್ ಡು ಪ್ಲೆಸಿಸ್‌ ಮುನ್ನಡೆಸಿದ್ದಾರೆ. ಐಪಿಎಲ್ 2024ರಲ್ಲಿ ಆರ್‌ಸಿಬಿ ಅನ್ನು ಪ್ಲೇಆಫ್‌ಗೆ ಕರೆದೊಯ್ದಿಯುವಲ್ಲಿ ಯಶಸ್ವಿಯಾಗಿದ್ದರು. ಜೊತೆಗೆ ಅದ್ಭುತ ಬ್ಯಾಟಿಂಗ್ ಮೂಲಕ 438 ರನ್ ಕಲೆ ಹಾಕಿದ್ದರು. ಹೀಗಾಗಿ ನಾಯಕತ್ವದ ಅನುಭವ ಹೊಂದಿರುವ ಫಾಫ್ ಅವರಿಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗುವ ಅವಕಾಶವನ್ನು ಹೊಂದಿದ್ದಾರೆ. ಮತ್ತೊಂದೆಡೆ ಡೆಲ್ಲಿ ತಂಡವು ಮೊದಲೇ ಆಲ್‌ರೌಂಡರ್ ಅಕ್ಸರ್ ಪಟೇಲ್ ಅವರನ್ನು 16.50 ಕೋಟಿ ರೂ.ಗೆ ಉಳಿಸಿಕೊಂಡಿತ್ತು. ಹೀಗಾಗಿ ಈ ಮೂವರು ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಾಯಕತ್ವದ ಸ್ಪರ್ಧಿಗಳಾಗಿದ್ದಾರೆ.

ಒಟ್ಟಾರೆ ಕಳೆದ 17 ಸೀಸನ್​ಗಳ ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಒಮ್ಮೆಯೂ ಚಾಂಪಿಯನ್ ಪಟ್ಟಕ್ಕೇರಿಲ್ಲ. ಫ್ರಾಂಚೈಸಿಯ ಸ್ಟಾರ್​ಡಮ್ ಕೂಡ ಅಷ್ಟಕ್ಕಷ್ಟೇ ಇದೆ. ಈ ಸಲ ಮೆಗಾ ಹರಾಜು ಇದ್ದಿದ್ರಿಂದ ಟೀಂ ಕಂಪ್ಲೀಟ್ ಚೇಂಜ್ ಆಗಿದೆ. ಅಲ್ದೇ ನಾಯಕತ್ವವೂ ಬದಲಾಗಲಿದೆ. ಸಾರಥಿಯ ಲಿಸ್ಟ್​ನಲ್ಲಿ ಮೂವರು ಹೆಸರಿದ್ರೂ ನಮ್ಮ ಕನ್ನಡಿಗರು ಮಾತ್ರ ಕೆಎಲ್ ರಾಹುಲ್​ಗೆ ಕ್ಯಾಪ್ಟನ್ಸಿ ಕೊಡ್ತಿ ಅಂತಾ ಆಶಿಸ್ತಿದ್ದಾರೆ.

Shwetha M

Leave a Reply

Your email address will not be published. Required fields are marked *