RCB ಪ್ಲೇಆಫ್ ಫಿಕ್ಸ್!!? – DC ಸೋಲಿಸಲು ಎಡವಿದ್ದೆಲ್ಲಿ?
ಐಪಿಎಲ್ನಲ್ಲಿ ಈ ಸಲ ಕಪ್ ನಮ್ದೇ ಅಂತ ಆರ್ಸಿಬಿ ಫ್ಯಾನ್ಸ್ ಹೇಳ್ತಾ ಇದ್ರೂ, ತಂಡ ಪ್ಲೇಆಫ್ಗೆ ಹೋಗುತ್ತೋ ಇಲ್ಲವೋ ಅನ್ನೋದ್ರ ಬಗ್ಗೆಯೇ ಅನುಮಾನವಿತ್ತು.. ಆದ್ರೀಗ ಆರ್ಸಿಬಿ ಪ್ಲೇಆಫ್ಗೆ ಹೋಗುವ ಅವಕಾಶದ ಬಾಗಿಲು ತೆರೆದಿದೆ.. ಇನ್ನೊಂದೇ ಒಂದು ಹೆಜ್ಜೆ ಇಡಬೇಕಿದೆ..ಅದರಲ್ಲಿ ಗೆದ್ದರೆ ಮುಗೀತು.. ರನ್ರೇಟ್ ಉಳಿಸಿಕೊಂಡು ಗೆದ್ರು ಅಂದರೆ ಈ ಸಲ ಆರ್ಸಿಬಿಯನ್ನು ತಡೆಯೋರೇ ಇಲ್ಲ.. ಎಲ್ಎಸ್ಜಿ ಸೋಲಿನೊಂದಿಗೆ ಆರ್ಸಿಬಿಗಾದ ಲಾಭವೇನು? ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸುವಲ್ಲಿ ಎಲ್ಎಸ್ಜಿ ಎಡವಿದ್ದು ಹೇಗೆ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಆರ್ಸಿಬಿ ಪ್ಲೇ ಆಫ್ಗೆ ಲಗ್ಗೆ ಹಾಕಲು ಗೆಲುವಿನ ಅಂತರ ಎಷ್ಟಿರಬೇಕು..? – ಯಾವ ತಂಡಗಳು ಸೋಲಬೇಕು?
ಲಕ್ನೋ ವರ್ಸಸ್ ಡೆಲ್ಲಿ ಪಂದ್ಯ ಒಂದು ರೀತಿಯಲ್ಲಿ ಆರ್ಸಿಬಿಯ ಭವಿಷ್ಯ ನಿರ್ಧರಿಸುವ ಮ್ಯಾಚ್ ಆಗಿತ್ತು.. ಎರಡರಲ್ಲಿ ಎರಡೂ ಮ್ಯಾಚ್ ಗೆದ್ದರೆ ಲಕ್ನೋ ಸೂಪರ್ ಜೈಂಟ್ಸ್ ಮತ್ತೊಮ್ಮೆ ಐಪಿಎಲ್ನ ಪ್ಲೇಆಫ್ಗೆ ಎಂಟ್ರಿ ಪಡೀತಾ ಇತ್ತು.. ಆದ್ರೆ ಡಿಸಿ ವಿರುದ್ಧ ಲಕ್ನೋ ಮುಗ್ಗರಿಸಿ ಬಿದ್ದಿದೆ.. ಆದರೆ ಎಲ್ಎಸ್ಜಿಯ ಬ್ಯಾಟ್ಸ್ಮನ್ಗಳ ಅಬ್ಬರ ಒಂದು ಹಂತದಲ್ಲಿ ತಂಡವನ್ನು ಗೆಲುವಿನ ಮೆಟ್ಟಿಲು ಹತ್ತಿಸುವ ಲಕ್ಷಣ ಕಂಡು ಬಂದಿತ್ತು.. ಆದ್ರೆ ಆರಂಭಿಕ ಬ್ಯಾಟ್ಸ್ಮನ್ಗಳ ಕಳಪೆ ಆಟ ಮತ್ತು ಸಂಕಷ್ಟದಲ್ಲಿದ್ದಾಗ ಪಾರ್ಟ್ನರ್ಶಿಪ್ ಬಿಲ್ಡ್ ಮಾಡುವಲ್ಲಿ ತೋರಿದ ವೈಫಲ್ಯದಿಂದಾಗಿ ಎಲ್ಎಸ್ಜಿ ಮುಗ್ಗರಿಸಿ ಬಿದ್ದಿದೆ.. ಡೆಲ್ಲಿ ಕ್ಯಾಪಿಟಲ್ಸ್ ಮೊದಲ ವಿಕೆಟ್ ಅನ್ನು ಕೇವಲ 2 ರನ್ಗೆ ಕಳೆದುಕೊಂಡಿದ್ದರೂ ನಂತರ ಅಭಿಷೇಕ್ ಪೊರೆಲ್ ಹಾಗೂ ಶಾಯಿ ಹೋಪ್ ತಂಡದ ಹೋಪ್ ಹೆಚ್ಚಿಸಿದ್ದರು.. ಮಿಡ್ಲ್ ಆರ್ಡರ್ನಲ್ಲೂ ಡೆಲ್ಲಿ ಬ್ಯಾಟ್ಸ್ಮನ್ಗಳು ಮಿಂಚಿದ್ದರಿಂದ ಡಿಸಿ ಆರಾಮಾಗಿ 200 ರನ್ಗಳನ್ನು ದಾಟಿ, 208 ರನ್ ಗಳಿಸುವಲ್ಲಿ ಯಶಸ್ವಿಯಾಯಿತು. ಗೆಲುವಿಗೆ 209 ರನ್ಗಳ ದೊಡ್ಡ ಗುರಿಯನ್ನು ಬೆನ್ನತ್ತಿದ್ದ ಎಲ್ಎಸ್ಜಿಗೆ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಈ ಗುರಿಯನ್ನು ದಾಟುವುದು ದೊಡ್ಡ ಸವಾಲೇನೂ ಆಗಿರಲಿಲ್ಲ.. ಚಿಕ್ಕ ಬೌಂಡರಿ ಲೈನ್ ಹೊಂದಿರುವ ಡೆಲ್ಲಿ ಸ್ಟೇಡಿಯಂನಲ್ಲಿ ರನ್ನ ಮಳೆಯೇ ಹರಿಯುವುದು ಸರ್ವೇ ಸಾಮಾನ್ಯ.. ಅದರಲ್ಲೂ ಚೇಸಿಂಗ್ ಮಾಡುವ ಟೀಂಗೆ ಇಲ್ಲಿ ಅಡ್ವಾಂಟೇಜ್ ಇದ್ದೇ ಇರುತ್ತೆ.. ಆದರೆ ಎಲ್ಎಸ್ಜಿ ಬ್ಯಾಟ್ಸ್ಮನ್ಗಳು ಆರಂಭದಲ್ಲೇ ಪೆವಿಲಿಯನ್ ಪರೇಡ್ ಮಾಡಿದ್ದರಿಂದ ತಂಡ ಸಂಕಷ್ಟಕ್ಕೆ ಸಿಲುಕಿತ್ತು.. 44 ರನ್ಗಳಿಗೆ 4 ವಿಕೆಟ್ ಕಳೆದುಕೊಂಡ ಎಲ್ಎಸ್ಜಿ ಆರಂಭದಲ್ಲೇ ಎಡವಿತ್ತು.. ಆದರೆ ನಿಕೋಲಸ್ ಪೂರನ್ ಹಾಗೂ ಅರ್ಷದ್ ಖಾನ್ ಅದ್ಭುತ ಆಟದಿಂದಾಗಿ ತಂಡ 189 ರನ್ಗಳವರೆಗೆ ತಲುಪೋದಿಕ್ಕೆ ಸಾಧ್ಯವಾಯ್ತು.. ತಂಡದ ಕ್ಯಾಫ್ಟನ್ಗೆ ಬೈದು ಅವಮಾನಿಸಿದ್ದ ಎಲ್ಎಸ್ಜಿ ಮಾಲೀಕ ಸಂಜೀವ್ ಗೊಯೆಂಕಾ, ಪಂದ್ಯ ಮುಗಿದ್ಮೇಲೆ ಎದುರಾಳಿ ಡಿಸಿ ಆಟಗಾರರ ಜೊತೆ ನಗುತ್ತಾ ಮಾತಾಡ್ತಾ ಇದ್ದಿದ್ದು, ಕಳೆದ ಬಾರಿ ಮಾಡಿದ ತಪ್ಪಿಗೆ ಪಶ್ಚಾತಾಪ ಎಂಬಂತಿತ್ತು..
ಎಲ್ಎಸ್ಜಿ ಸೋತಿರೋದು ಆರ್ಸಿಬಿ ಪಾಲಿಗೆ ವರವಾಗಿದೆ.. ಡಿಸಿ ಗೆಲ್ಲುವ ಮೂಲಕ ಐಪಿಎಲ್ ಪ್ಲೇಆಫ್ನಿಂದ ತಾನು ಹೊರ ಹೋಗೋದ್ರ ಜೊತೆಗೆ ಎಲ್ಎಸ್ಜಿಯನ್ನೂ ಕರೆದೊಯ್ದಿದೆ. ಅಂದ್ರೆ ಡಿಸಿ ಮತ್ತು ಎಲ್ಎಸ್ಜಿ ಏಕಕಾಲದಲ್ಲಿ ಹೊರಬಿದ್ದಿವೆ.. ಈಗ ಚೆನ್ನೈ ವಿರುದ್ಧ 18 ರನ್ಗಿಂತ ಹೆಚ್ಚು ಅಂತರದಲ್ಲಿ ಗೆಲ್ಲೋದಷ್ಟೇ ಆರ್ಸಿಬಿಗೆ ಇರುವ ಟಾರ್ಗೆಟ್.. ಅಥವಾ 18 ಓವರ್ನ ಒಳಗೆ ಪಂದ್ಯವನ್ನು ಚೇಸ್ ಮಾಡಿ ಮುಗಿಸಬೇಕು.. ಇವೆರಡೂ ಸಿಂಪಲ್ ಟಾರ್ಗೆಟ್ಗಳೇ ಆಗಿರೋದ್ರಿಂದ ಪ್ಲೇಆಫ್ಗೆ ಹೋಗುವ ಫೇರ್ ಅವಕಾಶ ಈ ಬಾರಿ ಆರ್ಸಿಬಿಗಿದೆ.. ಮೊದಲ ಪಂದ್ಯದಲ್ಲಿ ಚೆನ್ನೈನಲ್ಲಾದ ಸೋಲಿಗೆ ಬೆಂಗಳೂರಿನಲ್ಲಿ ಸೇಡು ತೀರಿಸಿಕೊಳ್ಳುವ ಅವಕಾಶ ಕೂಡ ಆರ್ಸಿಬಿಗೆ ಸಿಕ್ಕಿದೆ.. ಕಳೆದ ಐದು ಪಂದ್ಯಗಳಲ್ಲಿ ಸತತ ಗೆಲುವು ದಾಖಲಿಸಿರುವ ಆರ್ಸಿಬಿಗೆ ಇನ್ನು ಬೇಕಿರುವುದು ಕೇವಲ ನಾಲ್ಕೇ ನಾಲ್ಕು ಗೆಲುವು ಮಾತ್ರ.. ಪ್ಲೇಆಫ್ನ ಮೂರು ಪಂದ್ಯಗಳಲ್ಲಿ ಯಾವುದನ್ನು ಸೋತರೂ ಕಪ್ ಗೆಲ್ಲೋದರಿಂದ ಔಟಾಗಿ ಬಿಡಬೇಕಾಗುತ್ತದೆ.. ಹೀಗಾಗಿ ಈಗ ಆರ್ಸಿಬಿ ನಾಕೌಟ್ ರೀತಿಯಲ್ಲೇ ಲೀಗ್ನ ಕಡೆಯ ಪಂದ್ಯವನ್ನು ಆಡಬೇಕಿದೆ.. Do or Die ಪಂದ್ಯದಲ್ಲಿ ಗೆದ್ದು ಬೀಗುವ ಏಕೈಕ ಗುರಿಯೊಂದಿಗೆ ಕಣಕ್ಕಿಳಿದರೆ ಚೆನ್ನೈ ತಂಡವನ್ನು ಸೋಲಿಸುವುದು ಕಷ್ಟವೇನಲ್ಲ.. ಅಂಕಿಅಂಶದ ವಿಚಾರದಲ್ಲಿ ಚೆನ್ನೈ ಮೇಲುಗೈ ಹೊಂದಿದ್ದರೂ ಬೆಂಗಳೂರಿನಲ್ಲಿ ಆರ್ಸಿಬಿ ಅಂಕಿಅಂಶ ಕೂಡ ಚೆನ್ನಾಗಿಯೇ ಇದೆ.. ಚೆನ್ನೈ ಬೌಲಿಂಗ್ ಕೂಡ ಸ್ವಲ್ಪ ವೀಕ್ ಆಗಿರೋದ್ರಿಂದ ಆರ್ಸಿಬಿ ಬ್ಯಾಟ್ಸ್ಮನ್ಗಳು ಅಬ್ಬರಿಸಲು ಹೆಚ್ಚಿನ ಅವಕಾಶ ಇದ್ದೇ ಇದೆ.. ಹೀಗಾಗಿಯೇ ಈಗ ಎಲ್ಲರ ಚಿತ್ತ ಕಿಂಗ್ ಕೊಹ್ಲಿಯ ಮೇಲೆ ನೆಟ್ಟಿದೆ.. ಕಳೆದ ಪಂದ್ಯಗಳಲ್ಲಿ ಅತ್ಯಂತ ಜವಾಬ್ದಾರಿಯುತ ಆಟವಾಡಿರುವ ಕೊಹ್ಲಿಗೆ, ಕಪ್ ಗೆಲ್ಲಬೇಕೆಂಬ ಹಸಿವು ಎಷ್ಟಿದೆ ಎನ್ನುವುದು ಗೊತ್ತಿರದ ಸಂಗತಿಯೇನಲ್ಲ.. ಒಂದೇ ಒಂದು ಬಾರಿ ಐಪಿಎಲ್ನ ಟ್ರೋಫಿಗೆ ಆರ್ಸಿಬಿ ಮೂಲಕವೇ ಮುತ್ತಿಕ್ಕಬೇಕು ಎನ್ನುವುದು ಕೊಹ್ಲಿಯ ಏಕೈಕ ಕನಸು.. ಅದು ಈ ಬಾರಿಯಾದರೂ ನನಸಾಗಲಿ ಎನ್ನುವುದಷ್ಟೇ ಅಭಿಮಾನಿಗಳ ಹಾರೈಕೆ..