ಡಿಸಿ ಎದುರು ಮಾನ ಉಳಿಸಿಕೊಳ್ಳುತ್ತಾ ಮುಂಬೈ ಇಂಡಿಯನ್ಸ್ – ಎರಡೂ ಟೀಮ್ಗಳಿಗೂ ಗೆಲ್ಲಲೇ ಬೇಕಾದ ಅನಿವಾರ್ಯತೆ
5 ಬಾರಿ ಚಾಂಪಿಯನ್ ಪಟ್ಟಕ್ಕೇರಿದ ಮುಂಬೈ ಇಂಡಿಯನ್ಸ್ ಈ ಸೀಸನ್ನಲ್ಲಿ 8 ಪಂದ್ಯಗಳ ಪೈಕಿ ಗೆದ್ದಿದ್ದು ಕೇವಲ ಮೂರೇ ಪಂದ್ಯಗಳನ್ನ. ಆರು ಮ್ಯಾಚ್ಗಳಲ್ಲಿ ಹೀನಾಯ ಸೋಲು ಕಂಡಿದೆ. ಇವತ್ತು ಡಿಸಿ ಎದುರು ಮುಂಬೈ ಹುಡುಗ್ರು ಗೆದ್ರೆ ಮಾತ್ರ ಪ್ಲೇ-ಆಫ್ ಚಾನ್ಸ್ ಇದೆ. ಇಲ್ಲಾಂದ್ರೆ, ನಾಕೌಟ್ನಿಂದ ಬಹುತೇಕ ಹೊರಗುಳಿಯೋದು ಗ್ಯಾರಂಟಿ. ಮುಂಬೈಗೆ ಪ್ಲೇ-ಆಫ್ ರೇಸ್ ಇಂಪಾರ್ಟೆಂಟ್. ಯಾಕೆಂದ್ರೆ, ಟೀಮ್ ಇಂಡಿಯಾದ ಮೈನ್ ಆಟಗಾರರು ಇರೋದು ಇದೇ ಟೀಮ್ನಲ್ಲಿ. ಆದ್ರೆ, ಡಿಸಿ ಟೀಮ್ ನ ಈಸಿಯಾಗಿ ತೆಗೆದುಕೊಳ್ಳೋಕೂ ಕೂಡಾ ಸಾಧ್ಯವಿಲ್ಲ. ಡಿಸಿ ಆಟಗಾರರು ಯಾವ ಟೈಮ್ಲ್ಲಿ ರೆಬೆಲ್ ಆಗ್ತಾರೋ ಹೇಳಕ್ಕಾಗಲ್ಲ.
ಇದನ್ನೂ ಓದಿ: ಕೆಕೆಆರ್ ವಿರುದ್ಧ ಗೆದ್ದು ಬೀಗಿದ ಪಂಜಾಬ್ ಕಿಂಗ್ಸ್ ಟೀಮ್ – 262 ರನ್ ಚೇಸ್ ಮಾಡಿ ಗೆದ್ದು ಬೀಗಿದ ಪಂಜಾಬ್!
ಇವತ್ತಿನ ಪಂದ್ಯ ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಒಗ್ಗಟ್ಟಿನ ಮೇಲೆ ನಿಂತಿದೆ. ಒನ್ ಟೀಮ್ ಒನ್ ಫ್ಯಾಮಿಲಿ ಅನ್ನೋ ಮುಂಬೈ ಇಂಡಿಯನ್ಸ್ ಸ್ಲೋಗನ್ ಈ ಬಾರಿ ಕಾಣ್ತಿಲ್ಲ. ಇಲ್ಲಿ ಏನಿದ್ರೂ ನಾನಾ ನೀನಾ ಅನ್ನೋ ಹಾಗೆ ಟೀಮ್ನ ಒಗ್ಗಟ್ಟು ಮುರಿದುಹೋಗಿದೆ. ಬಿಕ್ಕಟ್ಟು ತಂಡದ ಸೋಲಿಗೆ ಕಾರಣವಾಗ್ತಿದೆ. ಇವತ್ತೇನಾದ್ರೂ ಹಿಟ್ ಮ್ಯಾನ್ ಅಬ್ಬರಿಸಿದ್ರೆ, ಇಶಾನ್ ಕಿಶಾನ್ ಒಳ್ಳೇ ಸಾಥ್ ಕೊಟ್ರೆ, ಹಾರ್ದಿಕ್ ಪಾಂಡ್ಯ ಬೌಲಿಂಗ್ ಜಾದೂ ತೋರಿಸಿದ್ರೆ ಮಾತ್ರ ವಿನ್ ಆಗಬಹುದು. ಬೂಮ್ರಾ ಮಾತ್ರ ಮ್ಯಾಜಿಕ್ ಮಾಡಿದ್ರೆ ಟೀಮ್ ಗೆಲ್ಲೋದಿಲ್ಲ. ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ ಕೂಡಾ ಅಬ್ಬರಿಸಬೇಕು.
ಇನ್ನು ಡಿಸಿ ಪರಿಸ್ಥಿತಿಯೇನೂ ಭಿನ್ನವಾಗಿಲ್ಲ. 9 ಪಂದ್ಯಗಳಲ್ಲಿ 4 ಪಂದ್ಯ ಗೆದ್ದಿದ್ದು, 5ರಲ್ಲಿ ಸೋಲು ಕಂಡಿದೆ. ಮೊದಲ ಮುಖಾಮುಖಿಯಲ್ಲಿ ಮುಂಬೈಗೆ ಶರಣಾಗಿದ್ದ ಡಿಸಿ ಈ ಬಾರಿ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. ರಿಷಭ್ ಪಂತ್ ಆಟ ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ಪ್ಲೇ ಆಫ್ ರೇಸ್ನಲ್ಲಿ ಉಳಿಯಬೇಕಿದ್ದರೆ, ಬ್ಯಾಟರ್ಗಳು ಮತ್ತೊಮ್ಮೆ ಸಿಡಿಯಬೇಕಿದೆ. ಇನ್ನು ಬೌಲಿಂಗ್ನಲ್ಲಿ ಮುಕೇಶ್ ಕುಮಾರ್, ಖಲೀಲ್ ಅಹಮದ್, ಕುಲ್ದೀಪ್ ಯಾದವ್ ಮಾರಕ ದಾಳಿ ನಡೆಸಬೇಕಿದೆ.
ಮುಂಬೈ: ಇಶಾನ್ ಕಿಶನ್, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ(ನಾಯಕ), ಟಿಮ್ ಡೇವಿಡ್, ನೇಹಲ್ ವದೇರಾ, ಮೊಹಮ್ಮದ್ ನಬಿ, ಗೆರಾಲ್ಡ್ ಕೋಟ್ಜೀ, ಪೀಯೂಸ್ ಚಾವ್ಲಾ, ಜಸ್ಪ್ರೀತ್ ಬುಮ್ರಾ.
ಡೆಲ್ಲಿ: ಪೃಥ್ವಿ ಶಾ, ಫ್ರೇಸರ್, ಅಭಿಷೇಕ್ ಪೊರೆಲ್, ಶಾಯ್ ಹೋಪ್, ರಿಷಭ್ ಪಂತ್(ನಾಯಕ), ಟ್ರಿಸ್ಟಿನ್ ಸ್ಟಬ್ಸ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಏನ್ರಿಚ್ ನೋಕಿಯಾ, ಖಲೀಲ್ ಅಹಮದ್, ಮುಕೇಶ್ ಕುಮಾರ್.