ಚಂದ್ರನ ಅಂಗಳದಲ್ಲಿ ಮತ್ತೆ ಸೂರ್ಯೋದಯ – ನಿದ್ರೆಯಿಂದ ಏಳುತ್ತಾ ವಿಕ್ರಮ್‌, ಪ್ರಗ್ಯಾನ್‌?

ಚಂದ್ರನ ಅಂಗಳದಲ್ಲಿ ಮತ್ತೆ ಸೂರ್ಯೋದಯ – ನಿದ್ರೆಯಿಂದ ಏಳುತ್ತಾ ವಿಕ್ರಮ್‌, ಪ್ರಗ್ಯಾನ್‌?

ಚಂದ್ರನ ದಕ್ಷಿಣ ಧ್ರುವದಲ್ಲಿಸೂರ್ಯೋದಯ ಆರಂಭವಾಗಿದೆ. ಇದೀಗ ಚಂದ್ರಯಾನ-3 ಅಭೂತಪೂರ್ವ ಯಶಸ್ಸಿನ ಬಳಿಕ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಗುರುವಾರ ಮತ್ತೊಂದು ಸಾಹಸಕ್ಕೆ ಮುಂದಾಗಿದೆ. 15 ದಿನಗಳ ಹಿಂದೆ ಚಂದ್ರನಲ್ಲಿ ರಾತ್ರಿಯಾದ ಕಾರಣ ನಿದ್ರೆಗೆ ಜಾರಿಸಿದ್ದ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಗಳನ್ನು ಎಬ್ಬಿಸುವ ಕಾರ್ಯಕ್ಕೆ ಇಸ್ರೋ ಮುಂದಾಗಿದೆ.

ಚಂದ್ರನಲ್ಲಿ ಕತ್ತಲು ಆವರಿಸಿದ ಕಾರಣ ದಕ್ಷಿಣ ಧ್ರುವದಲ್ಲಿ ವಿವಿಧ ಸಂಶೋಧನಾ ಕಾರ್ಯದಲ್ಲಿದ್ದ ವಿಕ್ರಮ್‌ ಲ್ಯಾಂಡರ್‌ ಹಾಗೂ ಪ್ರಗ್ಯಾನ್‌ ರೋವರ್‌ ಕಳೆದ 15 ದಿನಗಳಿಂದ ಸ್ಲೀಪ್‌ ಮೋಡ್‌ನಲ್ಲಿತ್ತು. ಇದೀಗ ಶಿವಶಕ್ತಿ ಪಾಯಿಂಟ್‌ನಲ್ಲಿ ಸೂರ್ಯೋದಯ ಆಗತ್ತಿರುವ ಕಾರಣ ವಿಕ್ರಮ್‌ ಲ್ಯಾಂಡರ್‌ ಹಾಗೂ ಪ್ರಗ್ಯಾನ್‌ ರೋವರ್‌ ಕಂಡೀಷನ್‌ ಇನ್ನಷ್ಟು ಪ್ರಗತಿ ಕಾಣುವ ಸಾಧ್ಯತೆ ಇದೆ ಎಂದು ಇಸ್ರೋ ಅಂದಾಜಿಸಿದೆ.

ಇದನ್ನೂ ಓದಿ: ಏಡಿ ಖಾದ್ಯ ತಿಂದ ಬಳಿಕ ಮಹಿಳೆಗೆ ಕಾದಿತ್ತು ಶಾಕ್!‌ – ಗ್ರಾಹಕಿ ಪೊಲೀಸರಿಗೆ ಕರೆ ಮಾಡಿದ್ದೇಕೆ?

ಒಂದು ವೇಳೆ ಈ ಸಾಹಸದಲ್ಲಿ ಇಸ್ರೋ ವಿಜ್ಞಾನಿಗಳು ಸಫಲವಾದರೆ ಲ್ಯಾಂಡರ್ ಮತ್ತು ರೋವರ್ ಪುನಃ ಎಚ್ಚರಗೊಂಡರೆ ಮುಂದಿನ 14 ದಿನಗಳವರೆಗೆ ಕೆಲಸ ಮಾಡಬಹುದು. ಸೌರಶಕ್ತಿ ಚಾಲಿತ ಚಂದ್ರಯಾನ-3 ಮಾಡ್ಯೂಲ್ ಮಿಷನ್‌ನ ವ್ಯಾಲಿಡಿಟಿ ಕೇವಲ ಒಂದು ಚಂದ್ರನ ದಿನವಾಗಿತ್ತು, ಅಂದರೆ ಭೂಮಿಯ ಮೇಲೆ ಸುಮಾರು 14 ದಿನಗಳಾಗಿತ್ತು. ಲ್ಯಾಂಡರ್ ಮತ್ತು ರೋವರ್ ಮತ್ತೆ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಇಸ್ರೋಗೆ ಸ್ವಲ್ಪ ಭರವಸೆ ಇದೆ.

ಗ್ರೌಂಡ್ ಸ್ಟೇಷನ್ ಗುರುವಾರ ಅಥವಾ ಶುಕ್ರವಾರದಂದು ಲ್ಯಾಂಡರ್, ರೋವರ್ ಮಾಡ್ಯೂಲ್ ಮತ್ತು ಆನ್-ಬೋರ್ಡ್ ಉಪಕರಣಗಳನ್ನು ಪುನರುಜ್ಜೀವನಗೊಳಿಸುತ್ತದೆ. ಗರಿಷ್ಠ ಸೂರ್ಯನ ಬೆಳಕು ಲಭ್ಯವಾದ ನಂತರ ಮಾಡಲು ಪ್ರಯತ್ನಿಸುತ್ತೇವೆ. ಆದರೆ ಅದು ಮತ್ತೆ ಕೆಲಸ ಮಾಡುವ ಸಾಧ್ಯತೆಗಳು ತುಂಬಾ ಹೆಚ್ಚಿಲ್ಲ. ಆದರೆ ಇದು ಹತಾಶ ಪರಿಸ್ಥಿತಿಯೂ ಅಲ್ಲ. ಲ್ಯಾಂಡರ್ ಅಥವಾ ರೋವರ್ ಮಾಡ್ಯೂಲ್ ಸ್ಲೀಪ್ ಮೋಡ್‌ನಿಂದ ಎಚ್ಚರಗೊಳ್ಳುವ ಸಾಧ್ಯತೆಯಿದೆ. ಆದರೆ ಪೂರ್ಣ ಕಾರ್ಯವನ್ನು ಸಾಧಿಸಲು ಸಾಧ್ಯವಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲ್ಯಾಂಡರ್ ಮತ್ತು ರೋವರ್ ಮಾಡ್ಯೂಲ್‌ಗಳಲ್ಲಿನ ಎಲೆಕ್ಟ್ರಾನಿಕ್ಸ್ ಚಂದ್ರನ ಮೇಲಿನ ಅತ್ಯಂತ ಶೀತ ರಾತ್ರಿ ತಾಪಮಾನವನ್ನು ತಡೆದುಕೊಳ್ಳಲು ವಿನ್ಯಾಸಗೊಳಿಸಲಾಗಿಲ್ಲ. ಒಂದು ವೇಳೆ ಸ್ಲೀಪ್ ಮೋಡ್‌ನಿಂದ ಇಬ್ಬರೂ ಎಚ್ಚರಗೊಂಡರೆ, ಲ್ಯಾಂಡರ್ ಮತ್ತು ರೋವರ್ ಕನಿಷ್ಠ ಮುಂದಿನ 14 ಭೂಮಿಯ ದಿನಗಳವರೆಗೆ ಕೆಲಸ ಮಾಡುವುದನ್ನು ಮುಂದುವರಿಸಬಹುದು ಎಂದು ಮಾಹಿತಿ ನೀಡಿದ್ದಾರೆ.

Shwetha M