ಅಂಡರ್​​ ವರ್ಲ್ಡ್​ ಡಾನ್​ ಗೆ ವಿಷ ಕೊಟ್ಟಿದ್ಯಾರು? – ಭಾರತಕ್ಕೆ ಬೇಕಾದ ಉಗ್ರರನ್ನ ಪಾಕ್‌ನಲ್ಲಿ ಹೊಡೆದು ಹಾಕ್ತಿರೋದು ಇವರಾ?

ಅಂಡರ್​​ ವರ್ಲ್ಡ್​ ಡಾನ್​ ಗೆ ವಿಷ ಕೊಟ್ಟಿದ್ಯಾರು? – ಭಾರತಕ್ಕೆ ಬೇಕಾದ ಉಗ್ರರನ್ನ ಪಾಕ್‌ನಲ್ಲಿ ಹೊಡೆದು ಹಾಕ್ತಿರೋದು ಇವರಾ?

1993ರ ಮುಂಬೈ ಸೀರಿಸ್ ಬಾಂಬ್​ ಬ್ಲಾಸ್ಟ್​ ಮಾಸ್ಟರ್​ಮೈಂಡ್ ದಾವೂದ್ ಈಗ ಮತ್ತೆ ಸುದ್ದಿಯಲ್ಲಿದ್ದಾನೆ. ಭೂಗತ ಪಾತಕಿ ದಾವೂದ್ ಇದ್ದಕ್ಕಿದ್ದಂತೆ ಕರಾಚಿ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದು ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ಕೆಲ ಪಾಕಿಸ್ತಾನದ​ ಮಾಧ್ಯಮಗಳಲ್ಲೂ ಬಂದಿರೋ ವರದಿ ಪ್ರಕಾರ ದಾವೂದ್ ಇಬ್ರಾಹಿಂಗೆ ವಿಷ ಪ್ರಾಶನ ಮಾಡಲಾಗಿದೆ. ವಿಷಪ್ರಾಷನಕ್ಕೊಳಗಾಗಿ ಭೂಗತ ಪಾತಕಿ ಆರೋಗ್ಯ ಗಂಭೀರವಾಗಿದ್ದು, ಈಗ ಸಾವು-ಬದುಕಿನ ಮಧ್ಯೆ ಹೋರಾಡ್ತಿದ್ದಾನೆ. ಅಷ್ಕಕ್ಕೂ ಅಂಡರ್‌ ವಲ್ಡ್‌ ಡಾನ್‌ಗೆ ವಿಷ ಕೊಟ್ಟಿದ್ಯಾರು ಅನ್ನೋ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ. ಈ ಕುರಿತ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ವರುಣನ ಆರ್ಭಟಕ್ಕೆ ತಮಿಳುನಾಡು ತತ್ತರ! – ಮೂವರು ಸಾವು, ಸಾವಿರಾರು ಮಂದಿ ಸ್ಥಳಾಂತರ!

ದಾವೂದ್‌ ಆಸ್ಪತ್ರೆಗೆ ದಾಖಲಾಗಿರುವ ಸುದ್ದಿ ವರದಿಯಾದ ಬೆನ್ನಲ್ಲೇ ಎಲ್ಲರನ್ನೂ ಕಾಡ್ತಾ ಇರೋ ಪ್ರಶ್ನೆ  ಒಂದೇ. ದಾವೂದ್ ಇಬ್ರಾಹಿಂ ವಿಷ ಪ್ರಾಷನಕ್ಕೊಳಗಾಗಿದ್ದೇ ಆದ್ರೆ, ಆತನಿಗೆ ವಿಷ ಕೊಟ್ಟಿರೋದ್ಯಾರು ಅನ್ನೋದು? ಯಾಕಂದ್ರೆ ಕಳೆದ ಒಂದು ವರ್ಷದಿಂದ ಪಾಕಿಸ್ತಾನದಲ್ಲಿ ಭಾರತದ ಹಲವು ವಾಂಟೆಡ್ ಉಗ್ರರು ಮೇಲಿಂದ ಮೇಲೆ ಹತ್ಯೆಗೊಳಗಾಗ್ತಾನೆ ಇದ್ದಾರೆ. ಒಂದು ವರ್ಷದ ಅಂತರದಲ್ಲಿ 20ಕ್ಕೂ ಹೆಚ್ಚು ಉಗ್ರರು ಮಟಾಷ್ ಆಗಿದ್ದಾರೆ. ಅಪರಿಚಿತರು ಬೈಕ್​ನಲ್ಲಿ ಬಂದು ಶೂಟೌಟ್ ಮಾಡಿ.. ಇನ್ನೂ ಕೆಲವರಿಗೆ ವಿಷವಿಟ್ಟು.. ಜೈಲಿಗೆ ನುಗ್ಗಿಯೂ ಉಗ್ರರನ್ನ ಹತ್ಯೆ ಮಾಡಲಾಗಿದೆ. ಹತ್ಯೆಗೊಳಗಾದವರೆಲ್ಲಾ ಭಾರತಕ್ಕೆ ಬೇಕಾಗಿದ್ದವರೇ. ಭಾರತದಲ್ಲಿ ನಡೆದ ಉಗ್ರ ದಾಳಿಗಳಲ್ಲಿ ಕೈವಾಡ ಹೊಂದಿದ್ದವರು. ಜೈಷ್-ಎ-ಮೊಹಮ್ಮದ್, ಲಷ್ಕರ್-ಎ-ತೊಯ್ಬಾ ಸೇರಿದಂತೆ ಉಗ್ರ ಸಂಘಟನೆಗಳ ಲೀಡರ್​​ಗಳ ರೈಟ್ ಹ್ಯಾಂಡ್​ಗಳಾಗಿದ್ದವರು, ಲೆಫ್ಟ್ ಹ್ಯಾಂಡ್​ಗಳಾಗಿದ್ದವರನ್ನೇ ಕೊಲ್ಲಲಾಗಿದೆ. ಹೀಗೆ ಭಾರತಕ್ಕೆ ಬೇಕಾದ ಉಗ್ರರನ್ನ ಪಾಕಿಸ್ತಾನದಲ್ಲಿ ಹೊಡೆದು ಹಾಕ್ತಿರೋದು ಯಾರು? ಅವರ ಬ್ಯಾಕ್​ಗ್ರೌಂಡ್ ಏನು? ಅವರ ಉದ್ದೇಶ ಏನು? ಅವರಿಗೆ ಸಪೋರ್ಟ್ ಮಾಡ್ತಾ ಇರೋದು ಯಾರು ಅನ್ನೋದು ಇನ್ನೂ ಬಯಲಾಗಿಲ್ಲ. ಅಪರಿಚಿತ ವ್ಯಕ್ತಿಗಳ ಗುಂಪು ನಿರಂತರವಾಗಿ ಪಾಕಿಸ್ತಾನದಲ್ಲಿ ಬೇಟೆಯಾಡ್ತಾನೆ ಇದೆ. ಪಾಕಿಸ್ತಾನದಲ್ಲಾಗುತ್ತಿರೋ ಪ್ರತಿಯೊಬ್ಬ ಉಗ್ರನ ಹತ್ಯೆಯೂ ಭಾರತದಲ್ಲಿ ಭಾರಿ ಸುದ್ದಿಯಾಗ್ತಿದೆ. ಇನ್ನಿಲ್ಲದ ಹೈಪ್ ಪಡೆದುಕೊಳ್ತಿದೆ. ಅದಕ್ಕೆ ಕಾರಣ ನಮ್ಮ ಇಂಟೆಲಿಜೆನ್ಸ್ ಏಜೆನ್ಸಿ ರಾ.. ಪಾಕಿಸ್ತಾನದಲ್ಲಿ ಮೋಸ್ಟ್ ವಾಂಟೆಂಡ್ ಉಗ್ರರನ್ನ ರಾನೇ ಮಾಡಿಸ್ತಾ ಇದೆ ಅನ್ನೋದಕ್ಕೆ ಯಾವುದೇ ಪ್ರೂಫ್ ಇಲ್ಲ. ಒಂದು ವೇಳೆ ರಾ ಮಾಡಿಸ್ತಾ ಇದ್ರೂ ಅದನ್ನ ಬಹಿರಂಗವಾಗಿ ಹೇಳಿಕೊಳ್ಳೋದಿಲ್ಲ. ಯಾಕಂದ್ರೆ ಇವೆಲ್ಲಾ ಸೀಕ್ರೆಟ್ ಕೌಂಟರ್​​ ಆಪರೇಷನ್​ಗಳು. ಕ್ರೆಡಿಟ್ ಬೇಡ.. ಕೆಲಸ ನಡೀಬೇಕು ಅಷ್ಟೇ.. ಅಮೆರಿಕದ ಸಿಐಎ, ಇಸ್ರೇಲ್​ನ ಮೊಸಾದ್ ಕೂಡ ತನ್ನ ವೈರಿಗಳನ್ನ ಇದೇ ರೀತಿ ಮುಗಿಸಿವೆ.. ಇನ್ನೂ ಮುಗಿಸ್ತಾನೆ ಇವೆ.. ಮುಂದೆ ಹಮಾಸ್ ಉಗ್ರರು ಕೂಡ ಸಾಯೋದು ಇದೇ ರೀತಿಯಲ್ಲಿ. ಇದೀಗ ನಮ್ಮ ರಾ ಕೂಡ ಇಂಥಾ ಸೀಕ್ರೆಟ್ ಆಪರೇಷನ್​​ಗಳನ್ನ ನಡೆಸ್ತಾ ಇದ್ಯಾ ಅನುಮಾನ ಎಲ್ಲರಿಗೂ ಇದೆ. ಪಾಕಿಸ್ತಾನದಲ್ಲಿ 20ಕ್ಕೂ ಹೆಚ್ಚು ಡೇಂಜರಸ್ ಉಗ್ರರನ್ನ ಹೆಣವಾಗಿಸಿರೋ ಅದೇ ಅಪರಿಚಿತ ವ್ಯಕ್ತಿಗಳ ಗ್ಯಾಂಗ್​ ಈಗ ದಾವೂದ್​​ಗೂ ವಿಷವಿಟ್ಟಿತಾ ಅನ್ನೋದು ಈಗಿರುವ ಪ್ರಶ್ನೆ. ದಾವೂದ್ ಇಬ್ರಾಹಿಂಗೆ ವಿಷಪ್ರಾಶನವಾಗಿದ್ದೇ ಆದಲ್ಲಿ, ಅದು ಕೂಡ ಈ ಅನ್ನೋನ್ ಪರ್ಸನ್​ಗಳ ಮೂಲಕವೇ ಆಗಿರೋ ಕೆಲಸ ಅನ್ನೋದ್ರಲ್ಲಿ ಯಾವುದೇ ಡೌಟ್ ಇಲ್ಲ. ಏನೇ ಆಗಲಿ, ದಾವೂದ್ ಸತ್ತಿದ್ದೇ ಆದಲ್ಲಿ, ಅದು ನಿಜಕ್ಕೂ ಭಾರತದ ಪಾಲಿಗೆ ನಿಜಕ್ಕೂ ಗುಡ್​ನ್ಯೂಸ್.

ಒಂದು ವೇಳೆ ವಿಷಪ್ರಾಷನದಿಂದ ಸತ್ರೂ ಕೂಡ ಪಾಕಿಸ್ತಾನ ಸರ್ಕಾರ ಆ ಬಗ್ಗೆ ಮಾಹಿತಿ ನೀಡೋದು ಅನುಮಾನವೇ. ಯಾಕಂದ್ರೆ ಕಳೆದ ಹಲವು ದಶಕಗಳಿಂದ ಖುದ್ದು ಪಾಕ್​ ಸರ್ಕಾರ ಮತ್ತು ಸೇನೆಯೇ ದಾವೂದ್​​ನನ್ನ ರಕ್ಷಿಸುತ್ತಾ ಇದೆ. ಇದಕ್ಕೆ ಪ್ರತಿಯಾಗಿ ದಾವೂದ್ ಸಾವಿರಾರು ಕೋಟಿ ರೂಪಾಯಿ ಹಣವನ್ನ ಪಾಕ್​ ಸರ್ಕಾರ ಮತ್ತು ಸೇನೆಗೆ ತಿನ್ನಿಸ್ತಾ ಇದ್ದಾನೆ. ಆದ್ರೆ ಸೇನೆ, ಸರ್ಕಾರದ ರಕ್ಷಣೆ ಇದ್ರೂ ದಾವೂದ್ ವಿಷಪ್ರಾಶನಕ್ಕೆ ಒಳಗಾಗಿದ್ದಾನೆ ಅಂದ್ರೆ ಅದ್ರಿಂದ ಪಾಕಿಸ್ತಾನಕ್ಕೆ ಭಾರಿ ಮುಖಭಂಗವಾಗೋದು ಗ್ಯಾರಂಟಿ. ಹೀಗಾಗಿ ದಾವೂದ್ ವಿಶಪ್ರಾಷನದ ಗುಟ್ಟನ್ನ ಪಾಕ್​ ಸರ್ಕಾರ ರಟ್ಟು ಮಾಡೋಕೆ ಹೋಗೋದಿಲ್ಲ ಬಿಡಿ. ಈ ನಡುವೆ ಪಾಕಿಸ್ತಾನದ ಕೇರ್ ಟೇಕರ್ ಪ್ರಧಾನಿಯಾಗಿರುವ ಅನ್ವಾರ್-ಉಲ್ ಹಕ್-ಕಾಕರ್​​ ಅವರು ದಾವೂದ್ ಸಾವಿನ ಬಗ್ಗೆ ಟ್ವೀಟ್ ಮಾಡಿದ್ರು ಅಂತಾ ಸುದ್ದಿಯಾಗಿತ್ತು. ದಾವೂದ್ ಸತ್ತಿದ್ದಾನೆ ಅಂತಾ ಟ್ವೀಟ್ ಮಾಡಲಾಗಿತ್ತು. ಆದ್ರೆ ಈ ಟ್ವೀಟ್ ಫೇಕ್​ ಅನ್ನೋದು ಈಗ ಗೊತ್ತಾಗಿದೆ. ಪಾಕಿಸ್ತಾನದ ಕೇರ್ ಟೇಕರ್ ಪ್ರಧಾನಿ ಹೆಸರಲ್ಲಿ ಫೇಕ್ ಟ್ವಿಟ್ಟರ್​ ಅಕೌಂಟ್​ ಮಾಡಿ ದಾವೂದ್ ಸಾವಿನ ಬಗ್ಗೆ ಟ್ವೀಟ್ ಮಾಡಲಾಗಿದೆ. ಒಂದು ವೇಳೆ ನೀವು ಸೋಷಿಯಲ್ ಮೀಡಿಯಾದಲ್ಲಿ ಈ ಪೋಸ್ಟ್​ನ್ನ ನೋಡಿದ್ದೇ ಆದಲ್ಲಿ ಅದು ಫೇಕ್ ಪೋಸ್ಟ್ ಅಷ್ಟೇ..

ಇನ್ನು ದಾವೂದ್ ಆರೋಗ್ಯದ ಬಗ್ಗೆ ಕೆಲ ವಿಚಾರಗಳನ್ನ ಹೇಳಲೇಬೇಕು.  ದಾವುದ್ ಇಬ್ರಾಹಿಂಗೆ ಸದ್ಯ 67 ವರ್ಷ ವಯಸ್ಸಾಗಿದೆ. ಈ ಹಿಂದೆ ಅಂಡರ್​​ವರ್ಲ್ಡ್​ ಡಾನ್ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್​ಗೂ ಒಳಗಾಗಿದ್ದ ಅಂತಾ ಸುದ್ದಿಯಾಗಿತ್ತು. ಒಂದಂತೂ ನಿಜ. ಕಳೆದ ಕೆಲ ವರ್ಷಗಳಿಂದ ದಾವೂದ್​ಗೆ ತೀವ್ರ ಆರೋಗ್ಯ ಸಮಸ್ಯೆ ಕಾಡ್ತಾನೆ ಇತ್ತು. ಹೀಗಾಗಿ ಆತ ಆಸ್ಪತ್ರೆಗೆ ದಾಖಲಾಗಿರೋಕೆ ಏನು ಬೇಕಾದ್ರೂ ಕಾರಣ ಇರಬಹುದು. ಅತ್ತ ದಾವುದ್ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದಾನೆ ಅನ್ನೋ ಸುದ್ದಿ ಸ್ಪ್ರೆಡ್ ಆಗುತ್ತಲೇ ಇತ್ತ ಮುಂಬೈ ಪೊಲೀಸರು ಕೂಡ ಅಲರ್ಟ್ ಆಗಿದ್ದಾರೆ. ದಾವೂದ್ ಮುಂಬೈ ಪೊಲೀಸರಿಗೆ ಬೇಕಾಗಿರೋ ಮೋಸ್ಟ್ ವಾಂಟೆಡ್ ಉಗ್ರ. ದಾವುದ್​ ಸಂಬಂಧಿಸಿದ ಮಾಹಿತಿಯನ್ನ ಮುಂಬೈ ಪೊಲೀಸರು ಕಲೆ ಹಾಕುತ್ತಲೇ ಇದ್ದಾರೆ. ಈಗ ವಿಷಪ್ರಾಶನ, ಆಸ್ಪತ್ರೆಗೆ ದಾಖಲಾಗಿರೋ ಬಗ್ಗೆಯೂ ಹೆಚ್ಚಿನ ಇನ್​​ಫಾರ್ಮೇಶನ್ ಕಲೆಕ್ಟ್ ಮಾಡ್ತಾ ಇದ್ದಾರೆ. ಕಳೆದ ವರ್ಷವಷ್ಟೇ ದಾವೂದ್ ಎರಡನೇ ಮದುವೆ ಕೂಡ ಆಗಿದ್ದ. ಮುಂಬೈನಲ್ಲಿ ದಾವೂದ್​ಗೆ ಸಂಬಂಧಿಸಿದ ಹಲವು ಆಸ್ತಿಗಳನ್ನ ಈಗಾಗ್ಲೇ ಮುಟ್ಟುಗೋಲು ಹಾಕಲಾಗಿದೆ. ಆದ್ರೆ ಈಗ ಆತ ಸತ್ತಿದ್ದಾನೆ ಅನ್ನೋದಕ್ಕೆ ಯಾವುದೇ ಪ್ರೂಫ್ ಅಂತೂ ಸಿಕ್ಕಿಲ್ಲ. ಅಧಿಕೃತವಾಗಿ ಯಾವುದು ಕೂಡ ಕನ್ಫರ್ಮ್ ಆಗಿಲ್ಲ. ಈ ಹಿಂದೆಯೂ ಹಲವು ಬಾರಿ ದಾವೂದ್ ಸತ್ತಿದ್ದಾನೆ ಅಂತಾ ಸುದ್ದಿಯಾಗಿತ್ತು..ಆದ್ರೆ ಅದ್ಯಾವುದೂ ನಿಜವಾಗಿರಲಿಲ್ಲ.

Shwetha M