ಸೊಳ್ಳೆಗಳನ್ನು ಕೊಂದು ಕೋರ್ಟ್ ಗೆ ತಂದ ದಾವೂದ್ ಸಹಚರ: ಕಾರಣ ಕೇಳಿ ನ್ಯಾಯಾಧೀಶರೇ ಸುಸ್ತು!

ಸೊಳ್ಳೆಗಳನ್ನು ಕೊಂದು ಕೋರ್ಟ್ ಗೆ ತಂದ ದಾವೂದ್ ಸಹಚರ: ಕಾರಣ ಕೇಳಿ ನ್ಯಾಯಾಧೀಶರೇ ಸುಸ್ತು!

ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸಹಚರ ಗ್ಯಾಂಗ್ಸ್ಟರ್ ಜೈಲುವಾಸ ಅನುಭವಿಸುತ್ತಿದ್ದು, ವಿಚಾರಣೆಗಾಗಿ ಮುಂಬೈನ ಕೋರ್ಟ್ ಗೆ ಬಂದಿದ್ದ ಆತ ತನ್ನ ಜೊತೆಗೆ ಒಂದು ಬಾಟಲಿಯಲ್ಲಿ ತಾನೇ ಕೊಂದ ಸೊಳ್ಳೆಗಳನ್ನು ತುಂಬಿಸಿಕೊಂಡು ಬಂದಿದ್ದು, ಇದನ್ನು ನೋಡಿದ ನ್ಯಾಯಮೂರ್ತಿಗಳು ಅಚ್ಚರಿ ವ್ಯಕ್ತಪಡಿಸಿದ್ದಲ್ಲದೇ. ಆತ ಅದಕ್ಕೆ ನೀಡಿದ ಕಾರಣ ಕೇಳಿದ ನಂತರ ನ್ಯಾಯಮೂರ್ತಿಗಳೇ ಸುಸ್ತಾಗಿದ್ದಾರೆ.

ಇದನ್ನೂ ಓದಿ: ಇಂದು ಆಪ್ ನಿಂದ ಮುಖ್ಯಮಂತ್ರಿ ಅಭ್ಯರ್ಥಿ ಘೋಷಿಸಲಿರುವ ಕೇಜ್ರಿವಾಲ್
ಎಜಾಜ್ ಲಕ್ಡಾವಾಲಾ ಜೈಲಿನಲ್ಲಿ ಸೊಳ್ಳೆ ಕಾಟ ಅನುಭವಿಸುತ್ತಿದ್ದು, ಲಕ್ಡಾವಾಲಾ ಸೊಳ್ಳೆ ಪರದೆಯನ್ನು ಬಳಸಲು ಅನುಮತಿ ನೀಡುವಂತೆ ಕೋರಿ ಇತ್ತೀಚೆಗೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ. ನ್ಯಾಯಮೂರ್ತಿಗಳಿಗೆ ತನ್ನ ಕಷ್ಟ ಅರ್ಥ ಮಾಡಿಸಲು ಸತ್ತ ಸೊಳ್ಳೆಗಳು ತುಂಬಿದ ಪ್ಲಾಸ್ಟಿಕ್ ಬಾಟಲಿಯನ್ನು ನ್ಯಾಯಾಲಯಕ್ಕೆ ತಂದಿದ್ದಾರೆ. ಆದರೆ ಆತನ ಅರ್ಜಿಯನ್ನು ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿದೆ. ನ್ಯಾಯಾಲಯವು ಆರೋಪಿ ಅರ್ಜಿದಾರ (ಲಕ್ಡಾವಾಲಾ) ಓಡೋಮೋಸ್ ಮತ್ತು ಇತರ ಸೊಳ್ಳೆ ನಿವಾರಕಗಳನ್ನು ಬಳಸಬಹುದು. ಆದರೆ ಸೊಳ್ಳೆ ಪರದೆಯನ್ನು ಜೈಲಿನೊಳಗೆ ಬಳಸುವಂತಿಲ್ಲ ಎಂದು ಹೇಳಿದೆ.

ಪರಾರಿಯಾಗಿರುವ ದರೋಡೆಕೋರ ದಾವೂದ್ ಇಬ್ರಾಹಿಂನ ಸಹಚರನಾಗಿದ್ದ ಲಕ್ಡಾವಾಲಾ ಮಹಾರಾಷ್ಟ್ರದ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆಯಡಿ ಸೇರಿದಂತೆ ಅನೇಕ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಆತನನ್ನು ಜನವರಿ 2020ರಲ್ಲಿ ಬಂಧಿಸಲಾಯಿತು. ಅಂದಿನಿಂದ ಆತನನ್ನು ನೆರೆಯ ಮುಂಬೈನ ತಲೋಜಾ ಜೈಲಿನಲ್ಲಿ ಇರಿಸಲಾಗಿದೆ.

ಈ ಹಿಂದೆ 2020ರಲ್ಲಿ ಬಂಧನವಾದಾಗ ಲಕ್ಡಾವಾಲಾ ಸೊಳ್ಳೆ ನೆಟ್ ಬಳಸಲು ಜೈಲಿನ ಅಧಿಕಾರಿಗಳು ಅನುಮತಿ ಕೊಟ್ಟಿದ್ದರು. ಆದರೆ ಈ ವರ್ಷದ ಮೇ ತಿಂಗಳಲ್ಲಿ ಸುರಕ್ಷತಾ ಕ್ರಮದ ಹಿನ್ನೆಲೆಯಲ್ಲಿ ಸೊಳ್ಳೆ ಪರದೆಯನ್ನು ಬಳಸುವುದನ್ನು ನಿಷೇಧಿಸಲಾಗಿತ್ತು. ಲಕ್ಡಾವಾಲಾ ಅವರಲ್ಲದೆ ತಲೋಜಾ ಜೈಲಿನ ಹಲವಾರು ವಿಚಾರಣಾಧೀನ ಕೈದಿಗಳು ಸಹ ಇದೇ ರೀತಿಯ ಅರ್ಜಿಗಳನ್ನು ಸಲ್ಲಿಸಿದ್ದಾರೆ.

suddiyaana