ಆಸ್ಟ್ರೇಲಿಯಾ ತಂಡಕ್ಕೆ ಮತ್ತೊಂದು ಶಾಕ್- ‘ಬಾರ್ಡರ್- ಗವಾಸ್ಕರ್’ ಟೆಸ್ಟ್ ಸರಣಿಯಿಂದ ಹೊರಬಿದ್ದ ಡೇವಿಡ್ ವಾರ್ನರ್

ಆಸ್ಟ್ರೇಲಿಯಾ ತಂಡಕ್ಕೆ ಮತ್ತೊಂದು ಶಾಕ್- ‘ಬಾರ್ಡರ್- ಗವಾಸ್ಕರ್’ ಟೆಸ್ಟ್ ಸರಣಿಯಿಂದ ಹೊರಬಿದ್ದ ಡೇವಿಡ್ ವಾರ್ನರ್

ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯಿಂದ ಆಸ್ಟ್ರೇಲಿಯಾ ತಂಡದ ಆರಂಭಿಕ ದಾಂಡಿಗ ಡೇವಿಡ್ ವಾರ್ನರ್ ಹೊರಬಿದ್ದಿದ್ದಾರೆ. ಸೋಮವಾರವಷ್ಟೇ ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ತವರು ಸೇರಿದ್ದಾರೆ. ಡೇವಿಡ್ ವಾರ್ನರ್ ಟೀಮ್‌ಗೆ ಮರಳಬಹುದು ಅನ್ನೋ ನಿರೀಕ್ಷೆ ತಂಡಕ್ಕಿತ್ತು. ಇದೀಗ ಟೆಸ್ಟ್ ಸರಣಿಯಿಂದಲೇ ವಾರ್ನರ್ ಹೊರಬಿದ್ದಿದ್ದಾರೆ. ವಾರ್ನರ್ ಅವರ ಮೊಣಕೈ ಮುರಿದ ಕಾರಣ ಮುಂದಿನ ಟೆಸ್ಟ್‌ಗಳಿಗೆ ಲಭ್ಯವಿರುವುದಿಲ್ಲ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ. ಭಾರತ ಪ್ರವಾಸದಲ್ಲಿರುವ ಕಾಂಗರೂ ಪಡೆ ಈಗಾಗಲೇ ಬಾರ್ಡರ್- ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಎರಡು ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿದೆ. ಇದೀಗ ಮೂರನೇ ಟೆಸ್ಟ್‌ನಲ್ಲಿ ಇಬ್ಬರು ಸ್ಟಾರ್ ಆಟಗಾರರ ಅನುಪಸ್ಥಿತಿ ತಂಡವನ್ನು ಮತ್ತಷ್ಟೂ ಕಂಗೆಡಿಸಿದೆ.

ಇದನ್ನೂ ಓದಿ:  ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ – ಆಸ್ಟ್ರೇಲಿಯಾ ತಂಡ ತೊರೆದು ತವರು ಸೇರಿದ್ದೇಕೆ ಕ್ಯಾಪ್ಟನ್?

ದ್ವಿತೀಯ ಟೆಸ್ಟ್‌ನ ಮೊದಲ ದಿನ ವಾರ್ನರ್ ಬ್ಯಾಟಿಂಗ್ ಮಾಡುವಾಗ ಸಿರಾಜ್ ಹಾಗೂ ಶಮಿ ಎಸೆತದ ಬೌನ್ಸರ್‌ ಗೆ ಬ್ಯಾಟ್ ಬೀಸಲು ಕಷ್ಟವಾಗಿತ್ತು. ಅದರಲ್ಲೂ ಒಂದು ಸಂದರ್ಭದಲ್ಲಿ ಚೆಂಡು ವಾರ್ನರ್ ಅವರ ಮೊಣಕೈಗೆ ಬಡಿದು ಪೆಟ್ಟುಬಿದ್ದಿತು. ಎರಡು ಬಾರಿ ಹೆಲ್ಮೆಟ್‌ಗೂ ಬಾಲ್ ಬಡಿದಿತ್ತು. ಎರಡನೇ ಟೆಸ್ಟ್‌ನ ಮೊದಲ ದಿನವೇ ಗಾಯಕ್ಕೆ ತುತ್ತಾಗಿದ್ದ ವಾರ್ನರ್ ನಂತರ ಭಾರತದ ಬ್ಯಾಟಿಂಗ್ ವೇಳೆ ಫೀಲ್ಡಿಂಗ್‌ಗೂ ಬಂದಿರಲಿಲ್ಲ. ಇದೀಗ ಇವರ ಗಾಯದ ಪ್ರಮಾಣ ದೊಡ್ಡದಾಗಿರುವ ಕಾರಣ ಸರಣಿಯಿಂದಲೇ ಔಟಾಗಿದ್ದಾರೆ. ಈಗಾಗಲೇ ಇವರ ಸ್ಥಾನಕ್ಕೆ ಮ್ಯಾಟಟ್ ರೆನ್ಶಾ ಅವರನ್ನು ಆಯ್ಕೆ ಮಾಡಲಾಗಿದೆ.

suddiyaana