ಡೆಲ್ಲಿಗೆ ಕಿಲ್ಲರ್ ಆದ ಮಿಲ್ಲರ್ – 1 ರನ್ ಓಡದೇ ಸೋಲಿಸಿದ್ರಾ?
DC Vs GT ಲಾಸ್ಟ್ ಓವರ್ ಡ್ರಾಮಾ

ಡೆಲ್ಲಿಗೆ ಕಿಲ್ಲರ್ ಆದ ಮಿಲ್ಲರ್ – 1 ರನ್ ಓಡದೇ ಸೋಲಿಸಿದ್ರಾ?DC Vs GT ಲಾಸ್ಟ್ ಓವರ್ ಡ್ರಾಮಾ

ಎಂಥಾ ಮ್ಯಾಚ್.. ಎಂಥಾ ಎಕ್ಸೈಟ್​ಮೆಂಟ್.. ಲಾಸ್ಟ್ ಓವರ್.. ಲಾಸ್ಟ್ ಬಾಲ್.. ಅವ್ರು ಗೆಲ್ತಾರಾ ಇವ್ರು ಗೆಲ್ತಾರಾ.. ಕೋಟ್ಯಂತರ ಕ್ರಿಕೆಟ್ ಫ್ಯಾನ್ಸ್ ಹಾರ್ಟಲ್ಲಿ ಚಿಟ್ಟೆ ಬಿಟ್ಟಂಗಾಗಿತ್ತು. ಲೇಟ್ ನೈಟ್ ಆಗ್ತಿದ್ರೂ ಕ್ಯೂರಿಯಾಸಿಟಿಯಿಂದ ಮ್ಯಾಚ್ ನೋಡ್ತಿದ್ರು. ಫೈನಲಿ ಗುಜರಾತ್ ತಂಡಕ್ಕೆ ಲಕ್ ಇತ್ತು. ಒಂದು ರನ್​ನಿಂದ ಜಸ್ಟ್ ಪಾಸಾದ್ರು. ಌಂಡ್ ಈ ಸೀಸನ್​ನ ಮೊದಲ ಗೆಲುವನ್ನ ಕಂಡ್ರು. ಅತ್ತ ಕೈಗೆ ಬಂದ ತುತ್ತು ಬಾಯಿಗೆ ಬರ್ಲಿಲ್ಲ ಅನ್ನೋ ಹಾಗೇ ಡೆಲ್ಲಿ ತಂಡ ಈ ಸೀಸನ್​ನಲ್ಲಿ ಮೊದಲ ಪಂದ್ಯ ಸೋಲಬೇಕಾಯ್ತು.

ಇದನ್ನೂ ಓದಿ : KL 1.. ಸಂಜು 22 ರನ್ಸ್ – ಗ್ರೀನ್ ಗೆ ₹25 ಕೋಟಿ ಕೊಟ್ಟು ಕೆಟ್ಟ KKR

ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳ ನಡುವಿನ ಪಂದ್ಯ ರಣರೋಚಕವಾಗಿ ಅಂತ್ಯ ಕಂಡಿದೆ. ಈ ಮ್ಯಾಚಲ್ಲಿ ಫಸ್ಟ್ ಬ್ಯಾಟಿಂಗ್ ಮಾಡಿದ್ದ ಗುಜರಾತ್  211 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಡೆಲ್ಲಿ ತಂಡ ಗೆಲುವಿಗೆ ಪಕ್ಕದಲ್ಲೇ ಬಂದು ನಿಂತ್ರೂ ಕೂಡ ಗದ್ದುಗೆ ಏರೋಕೆ ಸಾಧ್ಯವಾಗ್ಲಿಲ್ಲ. ಅದೂ ಕೂಡ ತಮ್ಮದೇ ಆಟಗಾರರ ಒಂದು ಸಣ್ಣ ಮಿಸ್ಟೇಕ್ ಈಗ ಪಂದ್ಯವನ್ನೇ ಕೈಚೆಲ್ಲುವಂತೆ ಮಾಡ್ತು. ಕನ್ನಡಿಗ ಕೆಎಲ್ ರಾಹುಲ್ ಅವ್ರ ಬಿಗ್ ಇನ್ನಿಂಗ್ಸ್ ಕೂಡ ಸೋಲಿನಲ್ಲಿ ಮಂಕಾಯ್ತು.

ಡೆಲ್ಲಿ ಕಡೆ ವಾಲಿದ್ದ ಮ್ಯಾಚ್ ಕೈಚೆಲ್ಲಿದ ಡೇವಿಡ್ ಮಿಲ್ಲರ್!

ಕ್ರಿಕೆಟ್ ಜಗತ್ತೇ ಈಗ ಡೇವಿಡ್ ಮಿಲ್ಲರ್ ಬಗ್ಗೆ ಮಾತ್ನಾಡ್ತಿದೆ. ಅದಕ್ಕೆ ಕಾರಣ ಅವ್ರಲ್ಲಿದ್ದ ಕಿಚ್ಚು ಜೊತೆಗೆ ಅವ್ರಲ್ಲಿದ್ದ ಅಸಡ್ಡೆ. ಈ ಪಂದ್ಯದ ಹೀರೋನೂ ಅವ್ರೇ.. ವಿಲನ್ ಕೂಡ ಅವ್ರೇ. 211 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ತಂಡ್ಕಕೆ ಒಳ್ಳೇ ಓಪನಿಂಗೇ ಸಿಕ್ಕಿತ್ತು. ಪಾಥುಮ್ ನಿಸ್ಸಂಕ 41 ರನ್ ಗಳಿಸಿದ್ರು. ಆದ್ರೆ ಆ ನಂತ್ರ ನಿತೀಶ್ ರಾಣಾ ಮತ್ತು ಸಮೀರ್ ರಿಜ್ವಿ ಕಡೆಯಿಂದ ರನ್ಸ್ ಬರ್ಲಿಲ್ಲ.ಹೀಗಿದ್ರೂ ಕೆಎಲ್ ರಾಹುಲ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ 11 ಬೌಂಡರಿ ಮತ್ತು 4 ಸಿಕ್ಸರ್‌ಗಳ ಸಹಾಯದಿಂದ 92 ರನ್‌ಗಳಿಸಿ ಔಟಾದರು. ರಾಹುಲ್ ನಂತರ ಮತ್ತೆ ಕ್ರೀಸ್​ಗೆ ಬಂದ ಡೇವಿಡ್ ಮಿಲ್ಲರ್ ಕೇವಲ 20 ಎಸೆತಗಳಲ್ಲಿ 41 ರನ್ ಗಳಿಸಿ ಪಂದ್ಯವನ್ನು ರೋಚಕ ಹಂತಕ್ಕೆ ಕೊಂಡೊಯ್ದರು. ಕೊನೆಯ ಎರಡು ಓವರ್‌ಗಳಲ್ಲಿ ಡೆಲ್ಲಿ ಗೆಲ್ಲಲು 36 ರನ್‌ಗಳು ಬೇಕಾಗಿದ್ದವು. ಈ ಟೈಮಲ್ಲಿ ಗುಜರಾತ್ ಗೆದ್ದು ಬಿಡುತ್ತೆ ಅನ್ನಿಸಿತ್ತು. ಆದ್ರೆ 19ನೇ ಓವರ್‌ನಲ್ಲಿ ಮಿಲ್ಲರ್, ಸಿರಾಜ್ ಎಸೆತದಲ್ಲಿ 23 ರನ್‌ಗಳನ್ನು ಕಲೆಹಾಕಿದರು. ಪರಿಣಾಮ ಲಾಸ್ಟ್ ಓವರಲ್ಲಿ ಡೆಲ್ಲಿ ಗೆಲುವಿಗೆ ಕೇವಲ 13 ರನ್‌ಗಳು ಬೇಕಾಗಿದ್ದವು. 20 ಓವರ್​ನಲ್ಲಿ ಬಾಲ್ ಹಿಡಿದು ಬಂದ ಕನ್ನಡಿಗ ಪ್ರಸಿದ್ಧ್ ಕೃಷ್ಣ ಮ್ಯಾಜಿಕ್ ಮಾಡಿ ಬಿಟ್ರು. ಫಸ್ಟ್ ಬಾಲ್ ಬೌಂಡರಿ. ಆಮೇಲೆ ವಿಪ್ರಜ್ ನಿಗಮ್ ವಿಕೆಟ್. ನಂತ್ರ ಮೂರನೇ ಬಾಲ್​ನಲ್ಲಿ ಕುಲ್ದೀಪ್ ಯಾದವ್ ಮೊದಲ ಎಸೆತದಲ್ಲಿ ಸಿಂಗಲ್ ತೆಗೆದುಕೊಂಡರು. ಈ ವೇಳೆ ಸ್ಟ್ರೈಕ್‌ಗೆ ಬಂದ ಮಿಲ್ಲರ್ ನಾಲ್ಕನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದರು.  ಸೋ ಅಲ್ಲಿಗೆ ಕೊನೇ  2 ಬಾಲ್ 2 ರನ್. ಡೆಲ್ಲಿ ಗೆದ್ದೇ ಬಿಡೋ ಹಂತ. ಆದ್ರೆ ಐದನೇ ಎಸೆತದಲ್ಲಿ ಮಿಲ್ಲರ್ ಸಿಂಗಲ್ ತೆಗೆದುಕೊಳ್ಳೋ ಅವಕಾಶ ಇದ್ರೂ ತಗೊಳ್ಳಿಲ್ಲ. ಆರನೇ ಎಸೆತದಲ್ಲಿ ಕುಲ್ದೀಪ್ ಯಾದವ್ ರನೌಟ್. ಅಂತಿಮವಾಗಿ ಗುಜರಾತ್ ಒಂದು ರನ್​ನಿಂದ ಪಂದ್ಯವನ್ನ ಗೆದ್ದು ಕೊಳ್ತು. ಈ ಸೀಸನ್​ನಲ್ಲಿ ಗುಜರಾತ್​ಗೆ ಮೊದಲ ಗೆಲುವು.. ಡೆಲ್ಲಿಗೆ ಮೊದಲ ಸೋಲಾಯ್ತು.  ಮಿಲ್ಲರ್ ರಿಟೈರ್ಡ್ ಹರ್ಟ್ ಆಗಿ ಹೋಗಿ ಬಂದು ಮತ್ತೆ ಬ್ಯಾಟಿಂಗ್ ಮಾಡಿದ್ದಕ್ಕೆ ಅಪ್ರಿಶಿಯೇಟ್ ಮಾಡ್ಲೇಬೇಕು. ಬಟ್ ಸಿಂಗಲ್ ಓಡೋ ಅವಕಾಶ ಇದ್ರೂ ತಪ್ಪಿಸಿಕೊಂಡ್ರು. ಹಾಗೇನಾದ್ರೂ ಓಡಿದ್ರೆ ಅಟ್​ಲೀಸ್ಟ್ ಸೂಪರ್ ಓವರ್ ಆದ್ರೂ ಆಗ್ತಿತ್ತು. ಇದಕ್ಕೇ ಹೇಳೋದು ಒಂದು ರನ್ ಎಷ್ಟು ಮುಖ್ಯ ಅಂತಾ.. ಸಮ್​ಟೈಮ್ಸ್ ವೈಡ್ ಕೊಟ್ಟಾಗ ಅಥವಾ ವೈಡ್ ಕೊಡದೇ ಇದ್ದಾಗ ಯಾಕೆ ರಿವ್ಯೂ ತಗೊಳ್ತಾರೆ ಅನ್ನೋದು ಇದೇ ಕಾರಣಕ್ಕೆ. ಒಂದು ರನ್​​ನಿಂದ ಇಡೀ ಪಂದ್ಯದ ಫಲಿತಾಂಶವೇ ಬದಲಾಗಿ ಬಿಡುತ್ತೆ ನಿನ್ನೆ ಮ್ಯಾಚಲ್ಲಿ ಆಗಿದ್ದೂ ಕೂಡ ಅದೇ.

Shantha Kumari