ಗೆಲುವಿನ ಹೊಸ್ತಿಲಲ್ಲಿ ಎಡವಿದ ಡೆಲ್ಲಿ – ತನ್ನಿಂದ ಪಂದ್ಯ ಸೋತಿದ್ದಕ್ಕೆ ಮಿಲ್ಲರ್ ಕಣ್ಣೀರು

ಗೆಲುವಿನ ಹೊಸ್ತಿಲಲ್ಲಿ ಎಡವಿದ ಡೆಲ್ಲಿ –  ತನ್ನಿಂದ ಪಂದ್ಯ ಸೋತಿದ್ದಕ್ಕೆ ಮಿಲ್ಲರ್ ಕಣ್ಣೀರು

ಡಿಸಿ Vs ಜಿಟಿ  ಪಂದ್ಯ ರೋಚಕ ಘಟ್ಟಕ್ಕೆ ಸಾಕ್ಷಿಯಾಗಿತ್ತು.   ಆದ್ರೆ ಈ ಪಂದ್ಯದಲ್ಲಿ ಗೆಲುವಿನ ಹೊಸ್ತಿಲಲ್ಲಿ ಎಡವಿದ ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಟೈಟಾನ್ಸ್ ವಿರುದ್ಧ ಕೇವಲ 1 ರನ್‌ನಿಂದ ಸೋಲೊಪ್ಪಿಕೊಂಡಿತು. ಆದರೆ ಈ ಸೋಲಿಗಿಂತ ಹೆಚ್ಚಾಗಿ ಕ್ರಿಕೆಟ್ ಪ್ರೇಮಿಗಳ ಮನ ಕಲಕಿದ್ದು ಸೌತ್ ಆಫ್ರಿಕಾದ ಸ್ಫೋಟಕ ಬ್ಯಾಟರ್ ಡೇವಿಡ್ ಮಿಲ್ಲರ್ ಅವರ ಕಣ್ಣೀರು.

ಕೊನೆಯ ಓವರ್‌ನಲ್ಲಿ ಪ್ರಸಿದ್ಧ್ ಕೃಷ್ಣ ದಾಳಿಗೆ ಇಳಿದಾಗ ಡೆಲ್ಲಿಗೆ ಗೆಲ್ಲಲು 13 ರನ್‌ಗಳ ಅಗತ್ಯವಿತ್ತು. ಮಿಲ್ಲರ್ ಅದ್ಭುತವಾಗಿ ಆಡುತ್ತಾ ಪಂದ್ಯವನ್ನು ಕೊನೆಯ ಎರಡು ಎಸೆತಗಳಲ್ಲಿ 2 ರನ್‌ಗಳ ಅಗತ್ಯಕ್ಕೆ ತಂದಿಟ್ಟರು.ಆದರೆ 5ನೇ ಎಸೆತದಲ್ಲಿ ಮಿಲ್ಲರ್ ಚೆಂಡನ್ನು ಹೊಡೆದರೂ ಸಿಂಗಲ್ ಓಡಲು ನಿರಾಕರಿಸಿದರು. ಬಹುಶಃ ತಾನೇ ಸಿಕ್ಸರ್ ಅಥವಾ ಬೌಂಡರಿ ಬಾರಿಸಿ ಪಂದ್ಯ ಮುಗಿಸುವ ಆತ್ಮವಿಶ್ವಾಸ ಅವರಲ್ಲಿತ್ತು.

ಇದನ್ನೂ ಓದಿ: ಒಂದೇ ಒಂದು ರನ್‌ನಿಂದ ಸೋತ ಡೆಲ್ಲಿ – ಗೆಲುವಿನ ಖಾತೆ ತೆರೆದ ಗುಜರಾತ್ ಟೈಟಾನ್ಸ್

ಪ್ರಸಿದ್ಧ್ ಕೃಷ್ಣ ಎಸೆದ ಅಂತಿಮ ಬೌನ್ಸರ್ ಅನ್ನು ಮಿಲ್ಲರ್ ಕನೆಕ್ಟ್ ಮಾಡಲು ವಿಫಲರಾದರು. ಬೈ ರನ್ ಓಡಲು ಯತ್ನಿಸಿದ ಕುಲ್ದೀಪ್ ಯಾದವ್ ರನ್ ಔಟ್ ಆದರು. ಇದರೊಂದಿಗೆ ಗುಜರಾತ್ ಟೈಟಾನ್ಸ್ 1 ರನ್ ರೋಚಕ ಜಯ ಸಾಧಿಸಿತು.ಇತ್ತ ಗುಜರತಾ ಟೈಟಾನ್ಸ್ ತಂಡವು ಕೇವಲ ಒಂದು ರನ್​​ನಿಂದ ಸೋಲುತ್ತಿದ್ದಂತೆ ಡೇವಿಡ್ ಮಿಲ್ಲರ್ ಭಾವುಕರಾದರು. ಅಲ್ಲದೆ ತಾನು ಮಾಡಿದ ಆ ಒಂದು ತಪ್ಪು  ಮಿಲ್ಲರ್ ಅವರನ್ನು ಬಹುವಾಗಿ ಕಾಡಿದಂತಿತ್ತು.

ಈ ನೋವಿನೊಂದಿಗೆ ಕಣ್ಣೀರಿಡುತ್ತಾ ಪೆವಿಲಿಯನ್​ ಕಡೆ ಹೆಜ್ಜೆ ಹಾಕಿದ ಡೇವಿಡ್ ಮಿಲ್ಲರ್ ಅವರನ್ನು ರಶೀದ್ ಖಾನ್ ಮತ್ತು ಶುಭ್​ಮನ್ ಗಿಲ್, ಅಕ್ಷರ್ ಪಟೇಲ್ ಬಂದು ಸಂತೈಸಿದರು. ಇದೀಗ ಈ ವಿಡಿಯೋ ಸೋಷಿಯಲ್ david miller crying ಮೀಡಿಯಾದಲ್ಲಿ ವೈರಲ್ ಆಗಿದ್ದು, ಮಿಲ್ಲರ್ ಅವರ ಆಟದ ಮೇಲಿನ ಬದ್ಧತೆಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

Kishor KV