ಮಗಳು ರುದ್ರಾಕ್ಷಿ ಸರ್ಜಾ, ಮಗ ಹಯಗ್ರೀವ ಸರ್ಜಾ – ಧ್ರುವ ಸರ್ಜಾ ಮಕ್ಕಳಿಗೆ ಅದ್ಧೂರಿ ನಾಮಕರಣ ಶಾಸ್ತ್ರ
ಸ್ಯಾಂಡಲ್‌ವುಡ್ ನಟ ಧ್ರುವ ಸರ್ಜಾ ರಾಮೋತ್ಸವದ ದಿನವೇ ತನ್ನ ಇಬ್ಬರು ಮಕ್ಕಳಿಗೆ ನಾಮಕರಣ ಮಾಡಿದ್ದಾರೆ. ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದ ದಿನವೇ ನಾಮಕರಣ ಮಾಡುವುದಾಗಿ ಮೊದಲೇ ಹೇಳಿದ್ದರು. ಅದರಂತೆ ತನ್ನ ಮುದ್ದು ಮಕ್ಕಳಿಗೆ ರುದ್ರಾಕ್ಷಿ ಹಾಗೂ ಹಯಗ್ರಿವ ಎಂದು ನಾಮಕರಣ ಮಾಡಿದ್ದಾರೆ.
ಇದನ್ನೂ ಓದಿ: ದೊಡ್ಮನೆಯಿಂದ ನಮ್ರತಾ ಔಟ್ – ಎಲಿಮಿನೇಷನ್ಗೆ ಕಾರಣವಾದ ವಿಚಾರಗಳೇನು?
ಸ್ಯಾಂಡಲ್‌ವುಡ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಪ್ರೇರಣಾ ದಂಪತಿ 2022ರ ಅಕ್ಟೋಬರ್‌ನಲ್ಲಿ ಮಗಳಿಗೆ ಜನ್ಮ ನೀಡಿದರು. ನಂತರ 2023ರ ಸೆಪ್ಟೆಂಬರ್‌ನಲ್ಲಿ ಗಂಡು ಮಗು ಜನಿಸಿತ್ತು. ಈಗ ಮಗಳಿಗೆ ರುದ್ರಾಕ್ಷಿ ಸರ್ಜಾ ಹಾಗೂ ಮಗನಿಗೆ ಹಯಗ್ರಿವ ಸರ್ಜಾ ಎಂದು ನಾಮಕರಣ ಮಾಡಲಾಗಿದೆ. ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮ ನಡೆದಿದೆ. ಈ ವಿಶೇಷ ದಿನದಂದೇ ಧ್ರುವ ಸರ್ಜಾ ಹಾಗೂ ಪ್ರೇರಣಾ ದಂಪತಿ ಮಕ್ಕಳಿಗೆ ನಾಮಕರಣ ಶಾಸ್ತ್ರ ಕೂಡ ಜರುಗಿದೆ. ನಟಿ ಮೇಘನಾ ರಾಜ್ ಸೇರಿದಂತೆ ಅನೇಕರು ಈ ಸಮಾರಂಭದಲ್ಲಿ ಭಾಗಿ ಆಗಿದ್ದಾರೆ.
ಧ್ರುವ ಸರ್ಜಾ ಅವರು ಆಂಜನೇಯನ ಭಕ್ತರು. ಹನುಮಂತನ ಕಂಡರೆ ಧ್ರುವ ಸರ್ಜಾ ಅವರಿಗೆ ಅಪಾರ ಭಕ್ತಿ. ಹೀಗಾಗಿ, ರಾಮ ಮಂದಿರದಲ್ಲಿನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ದಿನವೇ ನಾಮಕರಣ ಶಾಸ್ತ್ರ ನಡೆದಿದೆ. ಧ್ರುವ ಸರ್ಜಾ ಫಾರ್ಮ್ ಹೌಸ್ ನೆಲಗುಳಿಯಲ್ಲಿದೆ. ಚಿರು ಸರ್ಜಾ ಸಮಾಧಿಯೂ ಇಲ್ಲಿದೆ. ಇಲ್ಲಿಯೇ ಮಕ್ಕಳ ನಾಮಕರಣ ಶಾಸ್ತ್ರ ನಡೆದಿದೆ. ಅದ್ದೂರಿಯಾಗಿ ಈ ಕಾರ್ಯಕ್ರಮ ಜರುಗಿದೆ. ಕುಟುಂಬದವರು, ಆಪ್ತರು ಮಾತ್ರ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ.