ಲಕ್ಷ್ಮೀ ಮತ್ತು ಶ್ರೀನಿವಾಸರ ಮುಂದೆ ಮಗಳು ಜಾನು ಪ್ರತ್ಯಕ್ಷ – ಸೈಕೋ ಜಯಂತ್ ಕಥೆ ಮುಂದೇನು?

ಲಕ್ಷ್ಮೀ ನಿವಾಸ ಸೀರಿಯಲ್ ಈಗ ರೋಚಕ ತಿರುವು ಪಡೆದುಕೊಂಡಿದೆ. ಜೊತೆಗೆ ಸೀರಿಯಲ್ ಕಥೆ ಕೂಡಾ ವೇಗ ಪಡೆದುಕೊಂಡಿದೆ. ಇಷ್ಟು ದಿನ ರಹಸ್ಯವಾಗಿದ್ದ ಜಾನು ಬದುಕಿನ ಸತ್ಯ ಈಗ ಎಲ್ಲರೆದುರು ಬಯಲಾಗುತ್ತಿದೆ. ಜೊತೆಗೆ ಮಗಳು ಜಾನು ಹೆತ್ತವರ ಮಡಿಲು ಸೇರಿಯಾಗಿದೆ. ಆದರೆ, ಜಯಂತ್ ಜಾನು ಎದುರಾಗುತ್ತಾರೋ ಇಲ್ಲವೋ ಎಂಬ ಕುತೂಹಲ ವೀಕ್ಷಕರನ್ನು ಕಾಡುತ್ತಿದೆ.
ಇದನ್ನೂ ಓದಿ:ಭಾಗ್ಯ ಅಲ್ಲ.. ಕುಸುಮಾ ಸೊಸೆ ಶ್ರೇಷ್ಠಾ! – ಮಕ್ಕಳಿಗಾಗಿ ಭಾಗ್ಯ ದೊಡ್ಡ ನಿರ್ಧಾರ!
ಲಕ್ಷ್ಮೀ ಮತ್ತು ಶ್ರೀನಿವಾಸರ ಷಷ್ಟಿಪೂರ್ತಿ ಸಮಾರಂಭ ನಡೆಯುತ್ತಿದೆ. ಇದರಲ್ಲಿ ಲಕ್ಷ್ಮೀ ತಂದೆ ಕೂಡಾ ಭಾಗಿಯಾಗಿದ್ದಾರೆ. ಅಪ್ಪನ ಎದುರು ಷಷ್ಟಿಪೂರ್ತಿ ಸಮಾರಂಭ ನಡೆಯುತ್ತಿರುವುದಕ್ಕೆ ಲಕ್ಷ್ಮೀ ಸಂಭ್ರಮ ಹೇಳತೀರದಾಗಿದೆ. ಜೊತೆಗೆ ಮಕ್ಕಳು ಕೂಡಾ ತಂದೆ ತಾಯಿಯ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಇದರ ಜೊತೆಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ಲಕ್ಷ್ಮೀ ತಂದೆ ಮಗಳ ಹತ್ತಿರ ಮೊಮ್ಮಗಳು ಬದುಕಿರುವ ಸತ್ಯ ಹೇಳಿದ್ದಾರೆ. ಇದರಿಂದ ಜಾನು ಹೆತ್ತವರು ಮಗಳನ್ನು ನೋಡಲು ಕಾಯುತ್ತಿದ್ದಾರೆ. ಮತ್ತೊಂದೆಡೆ ಜಯಂತ್ ಕಣ್ಣು ತಪ್ಪಿಸಿ, ವಿಶ್ವ, ಜಾಹ್ನವಿಯನ್ನು ಲಕ್ಷ್ಮೀ ಕಣ್ಣ ಮುಂದೆ ತರಲು ಪ್ಲ್ಯಾನ್ ಮಾಡಿದ್ದಾನೆ.
ಜಯಂತ್ ಕಡೆಯವರು ವಿಶ್ವನ ಮೇಲೆ ದಾಳಿ ಮಾಡಲು ಯತ್ನಿಸಿದ್ದಾರೆ. ರೌಡಿಗಳು ವಿಶ್ವನ ಬೆನ್ನಟ್ಟಿ ಬಂದಿದ್ದಾರೆ. ವಿಶ್ವ ಮತ್ತು ಜಾನು ಕೊನೆಗೂ ರೌಡಿಗಳ ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ. ಈ ಮೂಲಕ ಜಾನು ಮತ್ತು ವಿಶ್ವ ಯಶಸ್ವೀಯಾಗಿ ಷಷ್ಠಿಪೂರ್ತಿ ನಡೆಯುವ ಸ್ಥಳಕ್ಕೆ ಬಂದಿದ್ದಾರೆ. ಜಾನು ಬದುಕಿರುವ ಸತ್ಯ ಗೊತ್ತಾದ ಮೇಲೆ ಹೆತ್ತವರು ಮತ್ತು ಭಾವನಾ, ವೆಂಕಿಯ ಖುಷಿಗೆ ಪಾರವೇ ಇರಲಿಲ್ಲ. ಇದೀಗ ಸ್ವತಃ ಜಾನು ಹೆತ್ತವರ ಮುಂದೆ ಬಂದಿದ್ದಾಳೆ. ಅಮ್ಮನ ಎದುರು ಬಂದು ನಿಂತ ಜಾನುನ ನೋಡಿ ಲಕ್ಷ್ಮೀ ಖುಷಿಯಾಗಿದ್ದಾಳೆ. ಶ್ರೀನಿವಾಸ್ ಅಂತೂ ಮುದ್ದಿನ ಮಗಳನ್ನು ನೋಡಿ ಸಂತಸಗೊಂಡಿದ್ದಾರೆ.
ಇದರ ಮಧ್ಯೆ ಜಯಂತ್ ತನ್ನ ಪ್ಲ್ಯಾನ್ ತಲೆಕೆಳಗಾಗಿದ್ದಕ್ಕೆ ಸಿಟ್ಟಾಗಿದ್ದಾನೆ. ರೌಡಿಗಳಿಗೆ ಮನಬಂದಂತೆ ಬೈದಿದ್ದಾನೆ. ಇದೀಗ ಜಯಂತ್ ಏನು ಮಾಡುತ್ತಾನೆ ಎಂಬ ಕುತೂಹಲ ಪ್ರೇಕ್ಷಕರನ್ನು ಕಾಡುತ್ತಿದೆ.

ನೋಡಿರಿ

