ರಾಕಿಂಗ್ ಸ್ಟಾರ್ ಯಶ್ ಹೊಸ ಸಿನಿಮಾಕ್ಕೆ ಮಗಳೇ ನಿರ್ಮಾಪಕಿ..?

ರಾಕಿಂಗ್ ಸ್ಟಾರ್ ಯಶ್ ಹೊಸ ಸಿನಿಮಾಕ್ಕೆ ಮಗಳೇ ನಿರ್ಮಾಪಕಿ..?

ಬೆಂಗಳೂರು : ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ಸರ್‌ಪ್ರೈಸ್ ಸುದ್ದಿ ಹೊರಬಿದ್ದಿದೆ. ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಸಿನಿಮಾಗೆ ಮಗಳು ಐರಾನೇ ನಿರ್ಮಾಪಕಿ ಅನ್ನೋ ಹೊಸ ವಿಚಾರ ಹೊರಬಿದ್ದಿದೆ. ಐರಾ ಹೆಸರಿನಲ್ಲಿ ನಿರ್ಮಾಣ ಸಂಸ್ಥೆಯನ್ನು ಮಾಡಿ, ಮೊದಲ ಸಿನಿಮಾವಾಗಿ ಯಶ್ ಅವರೇ ನಟಿಸಲಿದ್ದಾರಂತೆ. ಈಗಾಗಲೇ ನಿರ್ಮಾಣ ಸಂಸ್ಥೆಗೆ ಬೇಕಾದ ಸಕಲ ಸಿದ್ಧತೆಗಳು ನಡೆಯುತ್ತಿದೆ.

ಇದನ್ನೂ ಓದಿ :  ಸ್ಯಾಂಡಲ್‌ವುಡ್‌ಗೆ ರಿಯಲ್ ಸ್ಟಾರ್ ಉಪೇಂದ್ರ ಮಗಳು ಐಶ್ವರ್ಯಾ ಎಂಟ್ರಿ ?

ನಿರ್ದೇಶಕ ನರ್ತನ್ ಕೂಡ ಯಶ್ ಗಾಗಿ ಒಂದೂವರೆ ವರ್ಷದಿಂದ ಕಥೆ ಬರೆಯುವುದರಲ್ಲಿ ತೊಡಗಿಕೊಂಡಿದ್ದರು. ಆದರೆ, ನರ್ತನ್ ಜೊತೆ ಸದ್ಯಕ್ಕೆ ಯಶ್ ನಟಿಸುತ್ತಿಲ್ಲ. ನರ್ತನ್ ಸಿನಿಮಾ ಡ್ರಾಪ್ ಆಗುತ್ತಿದ್ದಂತೆಯೇ ಕೆವಿಎನ್ ಪ್ರೊಡಕ್ಷನ್ ನಲ್ಲಿ ಯಶ್ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿ ಹರಿದಾಡಿತು. ಈ ಸುದ್ದಿಯ ಬೆನ್ನಲ್ಲೇ ಕೆಜಿಎಫ್ 3 ಸಿನಿಮಾದಲ್ಲಿ ಯಶ್ ಬ್ಯುಸಿಯಾಗಿರ್ತಾರೆ ಎನ್ನಲಾಗ್ತಿತ್ತು. ಇದರ ಮಧ್ಯೆ, ತಮ್ಮದೇ ನಿರ್ಮಾಣ ಸಂಸ್ಥೆಯ ಸಿನಿಮಾದಲ್ಲಿ ಯಶ್ ನಟಿಸಲಿದ್ದಾರೆ ಅನ್ನೋ ವಿಚಾರ ಸ್ಯಾಂಡಲ್‌ವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಯಶ್ ತನ್ನ ಮುದ್ದಿನ ಮಗಳು ಐರಾ ಹೆಸರಲ್ಲಿ ಪ್ರೊಡಕ್ಷನ್ ಹೌಸ್ ನಿರ್ಮಾಣ ಮಾಡುತ್ತಿದ್ದು, ಅದರಲ್ಲೇ ತನ್ನ ಹೊಸ ಸಿನಿಮಾದ ಕೆಲಸ ಶುರುಮಾಡಲಿದ್ದಾರೆ ಎನ್ನಲಾಗುತ್ತಿದೆ.  ಮಗಳು ಐರಾ ಹುಟ್ಟಿದ ಮೇಲೆ ರಾಕಿಬಾಯ್ ಅದೃಷ್ಟ ಖುಲಾಯಿಸಿತಂತೆ. ಹೀಗಾಗಿಯೇ ಮಗಳ ಹೆಸರಲ್ಲೇ ಬ್ಯಾನರ್ ಕಟ್ಟಿ ಅದರ ಮೂಲಕವೇ ತನ್ನ 19ನೇ ಸಿನಿಮಾದಲ್ಲಿ ನಟಿಸಲು ತಯಾರಿ ಮಾಡಿಕೊಳ್ತಿದ್ದಾರೆ ಅನ್ನೋ ಮಾತು ಜೋರಾಗಿಯೇ ಕೇಳಿಬರುತ್ತಿದೆ.

suddiyaana