ಸೊಸೆ ಟೀ ಕೊಟ್ಟಿಲ್ಲ ಅಂತಾ ಸಿಟ್ಟು ಮಾಡಿಕೊಂಡ ಮಾವ – ಪೆಟ್ರೋಲ್‌ ಸುರಿದುಕೊಂಡು ಸತ್ತೇ ಹೋದ!

ಸೊಸೆ ಟೀ ಕೊಟ್ಟಿಲ್ಲ ಅಂತಾ ಸಿಟ್ಟು ಮಾಡಿಕೊಂಡ ಮಾವ – ಪೆಟ್ರೋಲ್‌ ಸುರಿದುಕೊಂಡು ಸತ್ತೇ ಹೋದ!

ಮನೆಯಲ್ಲಿ ಹಿರಿಯರಿದ್ರೆ ಪದೇ ಪದೇ ಕಾಫಿ, ಟೀ ಕೇಳುತ್ತಾ ಇರುತ್ತಾರೆ. ಇದು ಮನೆಯ ಹೆಂಗಸರಿಗೆ ಕಿರಿಕಿರಿ ಅನ್ನಿಸುವುದು ಸಾಮಾನ್ಯ. ಕೆಲವರು ಸುಮ್ಮನೆ ಮತನಾಡದೇ ಕೇಳಿದ ತಕ್ಷಣ ಕಾಫಿ, ಟೀ ಕೊಟ್ಟು ಬಿಡುತ್ತಾರೆ. ಆದ್ರೆ ಕೆಲವು ಹೆಂಗಸರು ಬೇಕಿದ್ದರೆ ಮಾಡಿಕೊಂಡು ಕುಡಿಯಿರಿ ಅಂತಾ ಏರು ಧ್ವನಿಯಲ್ಲಿ ಹೇಳುತ್ತಾರೆ. ಈ ವೇಳೆ ಸ್ವಲ್ಪ ವಾಗ್ವಾದ ಆಗುವುದು ಇದೆ. ಆದರೆ ಇಲ್ಲೊಬ್ಬರು ಸೊಸೆ ಬಳಿ ಟೀ ಕೇಳಿದ್ದು, ಆಕೆ ಚಹಾ ಕೊಟ್ಟಿಲ್ಲ ಅಂತಾ ಸಿಟ್ಟಿನಿಂದ ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಉತ್ತರ ಪ್ರದೇಶದ ಬಂದಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ವೃದ್ಧನೊಬ್ಬ ತನ್ನ ಸೊಸೆ ಬಳಿ ಟೀ ಕೊಡುವಂತೆ ಹೇಳಿದ್ದಾನೆ. ಆದರೆ ಸೊಸೆ ಮಾವನ ಮಾತನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಮಾವ ಪದೇ ಪದೆ ಟೀ ಕೇಳುತ್ತಿದ್ದರೂ ಆಕೆ ಚಹಾ ಕೊಡದೇ ಸುಮ್ಮನಾಗಿದ್ದಾಳೆ. ಇದರಿಂದ ಸಿಟ್ಟಿಗೆದ್ದ ವೃದ್ಧ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಹಾವು ಮನೆ ಸೇರಿತು ಅಂತಾ ಹೊಗೆ ಹಾಕಿದ್ರು.. – ನಾಗಪ್ಪನ ಶಾಪಕ್ಕೆ ಇಡೀ ಮನೆಯೇ ಭಸ್ಮ!

ಜಿಲ್ಲೆಯ ಕಮಾಸಿನ್ ಪೊಲೀಸ್ ಠಾಣೆ ವ್ಯಾಪ್ತಿಯ ಆದೌರಾ ಗ್ರಾಮದ ನಿವಾಸಿ ಅವಧ್ ಕಿಶೋರ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಕುಟುಂಬದ ಕೆಲವರು ಜಾತ್ರೆ ವೀಕ್ಷಿಸಲು ನಗರಕ್ಕೆ ತೆರಳಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮನೆಯಲ್ಲಿ ಸೊಸೆ ಮತ್ತು ಮಾವ ಮಾತ್ರ ಇದ್ದಿದ್ದರಿಂದ ಮಾವ ಸೊಸೆಯ ಬಳಿ ಚಹಾ ಮಾಡಿ ಕೊಡಲು ಹೇಳಿದ್ದು, ಸೊಸೆ ಎಷ್ಟೇ ಹೊತ್ತಾದ್ದರೂ ಚಹಾ ಕೊಡದ ಕಾರಣ ಮಾವ ಕೋಪಗೊಂಡು ಪರಸ್ಪರ ವಾಗ್ವಾದ ನಡೆದಿದೆ. ವಾಗ್ವಾದ ಜಗಳಕ್ಕಿಳಿದು ಅಂತಿಮವಾಗಿ ಮಾವ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದಾರೆ.

ಮನೆಯಲ್ಲಿ ಕಿರುಚಾಟ ಕೇಳುತ್ತಿದ್ದಂತೆ ಅಕ್ಕಪಕ್ಕದ ಮನೆಯವರು ಸ್ಥಳಕ್ಕೆ ಧಾವಿಸಿದ್ದಾರೆ. ತಕ್ಷಣ ಬಾಗಿಲು ತೆರೆದು ಒಳಗೆ ಹೋಗಿ ಬೆಂಕಿ ನಂದಿಸಿ ಸ್ಥಳೀಯರು ವೃದ್ಧನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ವೃದ್ಧ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಪೊಲೀಸರು ಸ್ಥಳಕ್ಕಾಗಮಿಸಿ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ವೃದ್ಧೆಯೊಬ್ಬರ ಆತ್ಮಹತ್ಯೆಯಿಂದ ಕುಟುಂಬದಲ್ಲಿ ಗೊಂದಲ ಉಂಟಾಗಿದ್ದು, ಹಳ್ಳಿಯಲ್ಲೂ ನೀರವ ಮೌನ ಆವರಿಸಿದೆ.

ಮೃತದೇಹವನ್ನು ಬಂಡಾದಲ್ಲಿರುವ ರಾಣಿ ದುರ್ಗಾವತಿ ವೈದ್ಯಕೀಯ ಕಾಲೇಜಿಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ ಎಂದು ಬಾಬೇರು ಉಪ ಪೊಲೀಸ್ ವರಿಷ್ಠಾಧಿಕಾರಿ ರಾಕೇಶ್ ಸಿಂಗ್ ತಿಳಿಸಿದ್ದಾರೆ. ಕೌಟುಂಬಿಕ ಕಲಹದಿಂದ ಈ ಘಟನೆ ನಡೆದಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಪರಸ್ಪರ ಜಗಳದಿಂದ ವೃದ್ಧ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಂಕುರ್ ಅಗರ್ವಾಲ್ ತಿಳಿಸಿದ್ದಾರೆ.

Shwetha M