ಶಿವು ತಂಗಿ ರಾಣಿ ಅಂದರೆ ಸುಮ್ನೆನಾ? – ಆಸ್ತಿ ಪತ್ರಕ್ಕೆ ನಕಲಿ ಸಹಿ ಹಾಕಿ, ಶತ್ರುಗಳ ತಲೆಕೆಡಿಸಿದ ರಾಣಿ..!

ಅಣ್ಣಯ್ಯ ಸೀರಿಯಲ್‌ನಲ್ಲಿ ಶಿವು ತಂಗಿ ರಾಣಿಗೆ ಎಂಥಾ ಸ್ಥಿತಿ ಬಂತಪ್ಪಾ ಅಂತಾ ಬೇಸರ ಮಾಡಿಕೊಂಡವರೆಲ್ಲಾ ಈಗ ಸಮಾಧಾನವಾಗಿದ್ದಾರೆ. ಶಿವು ತಂಗಿ ರಾಣಿ ಅಂದರೆ ಸುಮ್ನೆನಾ ಅಂತಾ ಖುಷಿ ಪಡ್ತಿದ್ದಾರೆ. ಯಾಕೆಂದರೆ, ರಾಣಿ ತನ್ನ ಗಂಡನ ಮನೆಯಲ್ಲಿ ನೀಚ ಬುದ್ದಿ ತೋರಿಸುತ್ತಿರುವ ವಂಚಕರಿಗೆ ತಕ್ಕ ಪಾಠ ಕಲಿಸಿದ್ದಾಳೆ.
ಇದನ್ನೂ ಓದಿ:ಸೊಸೆಗೆ ವರದಕ್ಷಿಣೆ ಕಿರುಕುಳ ಕೊಟ್ರಾ ಎಸ್.ನಾರಾಯಣ್?– ಖ್ಯಾತ ನಿರ್ದೇಶಕ ಎಸ್. ನಾರಾಯಣ್ ವಿರುದ್ಧ FIR
ಅಣ್ಣಯ್ಯ ಸೀರಿಯಲ್‌ನಲ್ಲಿ ರಾಣಿಯ ಬುದ್ದಿವಂತಿಕೆ ವೀಕ್ಷಕರಿಗೆ ಇಷ್ಟವಾಗಿದೆ. ರಾಣಿ ಮಾಸ್ಟರ್ ಪ್ಲಾನಿಗೆ ನಾಗೇಗೌಡರ ಕುಟಂಬ ಲಬ ಲಬ ಅಂತಾ ಬಾಯಿ ಬಡಿದುಕೊಳ್ಳುವಂತಾಗಿದೆ. ಹೌದು, ಆಸ್ತಿ ಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದೇವೆ ಎಂದು ತಿಳಿದು ನಾಗೇಗೌಡ ಮತ್ತು ಆತನ ಕುಟುಂಬ ತಮ್ಮ ನಿಜವಾದ ಮುಖವನ್ನು ರಾಣಿಗೆ ತೋರಿಸಿದ್ದಾರೆ. ಆಸ್ತಿ ತಮಗೆ ಸಿಕ್ತು ಎಂದು ತಿಳಿದಿರೋ ನಾಗೇಗೌಡ, ಆತನ ಹೆಂಡ್ತಿ ಮತ್ತು ಅಜ್ಜಿ ಎಲ್ಲರೂ ರಾಣಿ ಜೊತೆ ಆಕೆಯ ಗಂಡ ಹಾಗೂ ಅತ್ತೆಯನ್ನು ಸ್ಟೋರ್ ರೂಮ್‌ಗೆ ಶಿಫ್ಟ್ ಮಾಡಿಸಿದ್ದಾರೆ.
ಇತ್ತ ರಾಣಿಯ ಅತ್ತೆ ಸಹಿ ಮಾಡಬೇಡ ಅಂತ ಹೇಳಿದ್ರೂ ನನ್ನ ಮಾತು ಕೇಳಿಲಿಲ್ಲ ಯಾಕೆ ಎಂದು ಕಣ್ಣೀರು ಹಾಕ್ತಾರೆ. ಮನುನ ಮದುವೆಯಾಗಿ ಬರೋ ಹುಡುಗಿಗೆ ಎಲ್ಲಾ ಆಸ್ತಿ ಬರಬೇಕು ಅನ್ನೋದು ನನ್ನ ಗಂಡನ ಆಸೆಯಾಗಿತ್ತು ಎಂದು ಅತ್ತೆ ಹೇಳುತ್ತಾರೆ. ಆಗ ರಾಣಿ ಅತ್ತೆಗೆ ಸಮಾಧಾನ ಮಾಡುತ್ತಾಳೆ. ನನ್ನ ಮದುವೆ ಸರ್ಟಿಫಿಕೇಟ್‌ಗೆ ಮಾತ್ರ ಕರೆಕ್ಟ್ ಆಗಿ ಸಹಿ ಹಾಕಿದ್ದೇನೆ. ಉಳಿದ ಎಲ್ಲಾ ಪತ್ರಗಳಿಗೆ ನಕಲಿ ಸಹಿ ಹಾಕಿದ್ದೇನೆ. ನಿಮ್ಮ ಆಸ್ತಿ ನಾಯಿ-ನರಿಗಳಿಗೆ ಸಿಗದಂತೆ ನಾನು ಮಾಡುತ್ತೇನೆ ಎಂದು ರಾಣಿ ಶಪಥ ಮಾಡುತ್ತಾಳೆ. ಸದ್ದು ಗದ್ದಲದ ಯುದ್ಧದ ಬಗ್ಗೆ ಅಣ್ಣ ಹೇಳಿಕೊಟ್ರೆ, ಸದ್ದು ಗದ್ದಲವಿಲ್ಲದೇ ಯುದ್ಧ ಹೇಗೆ ಮಾಡಬೇಕು ಅನ್ನೋದನ್ನ ಅತ್ತಿಗೆ ಪಾರು ಹೇಳಿಕೊಟ್ಟಿದ್ದಾರೆ ಎಂದು ರಾಣಿ ಹೇಳಿದ್ದಾಳೆ. ಈ ವಿಷಯ ಕೇಳಿ ರಾಣಿ ಅತ್ತೆ ಸಮಾಧಾನವಾಗುತ್ತಾರೆ. ಆದರೆ ರಾಣಿ ಮಾಡಿರೋದು ನಕಲಿ ಸಹಿ ಅಂತ ತಿಳಿದ ಮೇಲೆ ನಾಗೇಗೌಡನ ದೌಲತ್ತು, ರಾಣಿಗೆ ಮುಂದೆ ಇನ್ನೇನು ಕಾದಿದೆ ಅನ್ನೋ ಕುತೂಹಲ ವೀಕ್ಷಕರಿಗೆ ಮೂಡಿದೆ.

ನೋಡಿರಿ

